ವಾಷಿಂಗ್ಟನ್: ಅತಿ ಕಡಿಮೆ ಬೆಲೆಗೆ ಪ್ರಭಾವಶಾಲಿಯಾದ ಕೃತಕ ಬುದ್ಧಿಮತ್ತೆ ಆಧರಿತ ತಂತ್ರಾಂಶ ನೀಡಿದ್ದ ಚೀನಾದ ಡೀಪ್‌ಸೀಕ್ ಈಗ ಮತ್ತೊಮ್ಮೆ ಸುದ್ದಿಯಾಗಿದೆ. ಈ ಬಾರಿ ತನ್ನ ಉನ್ನತ ತಂತ್ರಜ್ಞರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡು, ಅವರ ಮೇಲೆ ಪ್ರಯಾಣ ನಿರ್ಬಂಧವನ್ನು ಚೀನಾ ಕಂಪನಿ ಹೇರಿದೆ.
ಹಿಂದೆಯೇ ಭಾರಿ ವಿವಾದ:
ಈ ಹಿಂದೆ ಡೀಪ್‌ಸೀಕ್ ಬಿಡುಗಡೆಯಾದ ಬಳಿಕ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಡೀಪ್‌ಸೀಕ್‌ನ ಕಾರ್ಯನಿಷ್ಠೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಬಳಕೆದಾರರ ಮಾಹಿತಿ ಸೋರಿಕೆ, ಚೀನಿ ಅಧಿಕಾರಿಗಳ ಜೊತೆ ಮಾಹಿತಿ ಹಂಚಿಕೆ ವಿಚಾರವಾಗಿ ಅಮೆರಿಕ, ಐರೋಪ್ಯ ಒಕ್ಕೂಟ ಡೀಪ್‌ಸೀಕ್ ಬಳಕೆ ಮೇಲೆ ನಿರ್ಬಂಧ ಹೇರಿತ್ತು. ಭಾರತ ಅದರ ಬಳಕೆ ಬಗ್ಗೆ ಕ್ರಮಗಳನ್ನು ತಂದಿತ್ತು. ಇದರ ಬೆನ್ನಲ್ಲೇ ಮತ್ತೊಮ್ಮೆ ಡೀಪ್‌ಸೀಕ್ ಸುದ್ದಿಯಾಗಿದೆ.