ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಇಂದು ಚೀನಾ ಗಡಿಗೆ: ಸೈನಿಕರ ಜತೆ ದಸರಾ

KannadaprabhaNewsNetwork | Published : Oct 23, 2023 12:16 AM

ಸಾರಾಂಶ

ಭಾರತ-ಚೀನಾದ ನಡುವೆ ಅರುಣಾಚಲ ಪ್ರದೇಶದ ಗಡಿ ವಿಚಾರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್ ದಸರಾ ಹಬ್ಬವನ್ನು ಸೈನಿಕರ ಜೊತೆ ಅರುಣಾಚಲ ಪ್ರದೇಶದ ಗಡಿಗ್ರಾಮ ತವಾಂಗ್‌ನಲ್ಲಿ ಆಚರಿಸಲಿದ್ದಾರೆ.
ನವದೆಹಲಿ: ಭಾರತ-ಚೀನಾದ ನಡುವೆ ಅರುಣಾಚಲ ಪ್ರದೇಶದ ಗಡಿ ವಿಚಾರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್ ದಸರಾ ಹಬ್ಬವನ್ನು ಸೈನಿಕರ ಜೊತೆ ಅರುಣಾಚಲ ಪ್ರದೇಶದ ಗಡಿಗ್ರಾಮ ತವಾಂಗ್‌ನಲ್ಲಿ ಆಚರಿಸಲಿದ್ದಾರೆ. ಪ್ರತಿ ಬಾರಿ ದಸರಾ ಹಬ್ಬವನ್ನು ಸೈನಿಕರ ಜೊತೆಗೂಡಿ ಆಚರಿಸುತ್ತಿರುವ ರಾಜನಾಥ್‌ ಸಿಂಗ್‌, ಈ ಬಾರಿಯೂ ‘ಶಸ್ತ್ರ ಪೂಜೆ’ಯನ್ನು (ಆಯುಧ ಪೂಜೆ) ನೆರವೇರಿಸಲಿದ್ದು, ನಂತರ ನೈಜ ಗಡಿ ನಿಯಂತ್ರಣಾ ರೇಖೆಯ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ತವಾಂಗ್‌ ಪ್ರದೇಶದಲ್ಲಿ ಕಳೆದ 3 ವರ್ಷಗಳಿಂದ ಉದ್ವಿಗ್ನ ಪರಿಸ್ಥಿತಿ ಇದ್ದು, ಚೀನಾ ಅದು ತನ್ನದೇ ಭೂಪ್ರದೇಶ ಎಂದು ತಕರಾರು ಮಾಡುತ್ತಾ ಬಂದಿದೆ.

Share this article