ಡಬ್ಲ್ಯುಎಚ್‌ಒ: ದಿಲ್ಲಿ ಗಾಳಿ 100 ಪಟ್ಟು ಹೆಚ್ಚು ಮಲಿನ!

KannadaprabhaNewsNetwork |  
Published : Nov 05, 2023, 01:15 AM IST
ದೆಹಲಿ ಮಾಲಿನ್ಯ | Kannada Prabha

ಸಾರಾಂಶ

ರಾಷ್ಟ್ರ ರಾಜಧಾನಿಯ ಸ್ಥಿತಿ ಗಂಭೀರ. ಮಕ್ಕಳು, ವೃದ್ಧರಲ್ಲಿ ಉಸಿರಾಟದ ಸಮಸ್ಯೆ ಭೀತಿ. ವಿಶ್ವ ಆರೋಗ್ಯ ಸಂಸ್ಥೆ ಮಾನದಂಡದ ಪ್ರಕಾರ ಗಾಳಿಯ ಶುದ್ಧತೆ 5 ಮೈಕ್ರೋಗ್ರಾಂ ಇರಬೇಕು. ದೆಹಲಿಯ ಗಾಳಿಯಲ್ಲೀಗ ಪಿಎಂ2.5 ಸಾಂದ್ರತೆ 500 ಮೈಕ್ರೋಗ್ರಾಂ ಇದೆ. ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರವೂ ಇದು ಅತ್ಯಧಿಕ ಮಾಲಿನ್ಯ. ಸತತ 5ನೇ ದಿನವೂ ಅಪಾಯಕಾರಿ ಮಟ್ಟದಲ್ಲಿ ಮುಂದುವರೆದ ದೆಹಲಿ ಸ್ಥಿತಿ.

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸತತ ಐದನೇ ದಿನವೂ ವಾಯುಮಾಲಿನ್ಯ ಅಪಾಯಕಾರಿ ಮಟ್ಟದಲ್ಲೇ ಮುಂದುವರಿದಿದ್ದು, ಜನರ ಆರೋಗ್ಯ ಹದಗೆಡುವ ಆತಂಕ ಮತ್ತಷ್ಟು ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಾನದಂಡಗಳ ಪ್ರಕಾರ, ದೆಹಲಿಯ ಗಾಳಿ ಈಗ 80ರಿಂದ 100 ಪಟ್ಟು ಹೆಚ್ಚು ಮಲಿನವಾಗಿದೆ.ಕೇಂದ್ರ ಸರ್ಕಾರದ ಸುರಕ್ಷತಾ ಮಿತಿಯನ್ನೇ ಆಧರಿಸಿ ಹೇಳುವುದಾದರೆ ದೆಹಲಿಯಲ್ಲಿ ಗಾಳಿ 7ರಿಂದ 8 ಪಟ್ಟು ಮಲಿನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ನಡುವೆ, ಶುಕ್ರವಾರ ಕೊಂಚ ಗಾಳಿ ಬೀಸಿದ್ದರಿಂದ ದೆಹಲಿಯ ವಿವಿಧ ಭಾಗಗಳಲ್ಲಿ ಕಲುಷಿತ ಗಾಳಿಯ ಪ್ರಮಾಣ ಕೊಂಚ ಪ್ರಮಾಣದಲ್ಲಿ ತಗ್ಗಿದೆ. ಕಳಪೆ ಗುಣಮಟ್ಟದ ಗಾಳಿಯಿಂದಾಗಿ ಮಕ್ಕಳು ಹಾಗೂ ವೃದ್ಧರಲ್ಲಿ ಉಸಿರಾಟ ಮತ್ತು ಕಣ್ಣಿನ ತೊಂದರೆ ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.100 ಪಟ್ಟು ಅಧಿಕ:ಗಾಳಿಯ ಗುಣಮಟ್ಟವನ್ನು ‘ಪಿಎಂ2.5’ ಎಂಬ ಸಾಂದ್ರತೆಯ ಮೂಲಕ ಅಳೆಯಲಾಗುತ್ತದೆ. ಗಾಳಿಯಲ್ಲಿ ವಿಲೀನವಾಗಿರುವ ಸಣ್ಣ ಸಣ್ಣ ಕಣಗಳ ಸೂಚಕ ಇದಾಗಿದೆ. ಇದು ಹೆಚ್ಚಾದಷ್ಟೂ ಶ್ವಾಸಕೋಶದೊಳಕ್ಕೆ ನುಸುಳಿ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ.ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮನುಷ್ಯನ ಉತ್ತಮ ಆರೋಗ್ಯಕ್ಕೆ ಗಾಳಿಯಲ್ಲಿ ಪಿಎಂ2.5 ಪ್ರಮಾಣ ಪ್ರತಿ ಕ್ಯುಬಿಕ್‌ ಮೀಟರ್‌ಗೆ 5 ಮೈಕ್ರೋಗ್ರಾಂ ಇರಬೇಕು. ಆದರೆ, ದೆಹಲಿಯಲ್ಲಿ ಅದಕ್ಕಿಂತ 80ರಿಂದ 100 ಪಟ್ಟು ಅಧಿಕ ಪಿಎಂ2.5 ಇದೆ.ಮತ್ತೊಂದೆಡೆ, ಗಾಳಿ ಸುರಕ್ಷಿತವಾಗಿದೆ ಎಂದು ಪರಿಗಣಿಸಲು ಪ್ರತಿ ಕ್ಯುಬಿಕ್‌ ಮೀಟರ್‌ನಲ್ಲಿ 60 ಮೈಕ್ರೋಗ್ರಾಂನಷ್ಟು ಪಿಎಂ2.5 ಇರಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ ದೆಹಲಿಯ ಹಲವು ಪ್ರದೇಶಗಳಲ್ಲಿ ಅದಕ್ಕಿಂತ 7ರಿಂದ 8 ಪಟ್ಟು ಪಿಎಂ2.5 ಕಂಡುಬಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ