ಅಂಬಾನಿಗೆ 400 ಕೋಟಿಸುಲಿಗೆ ಹಣಕ್ಕೆ ಬೇಡಿಕೆಇಟ್ಟವ ತೆಲಂಗಾಣದಲ್ಲಿ ಸೆರೆ

KannadaprabhaNewsNetwork | Published : Nov 5, 2023 1:15 AM

ಸಾರಾಂಶ

400 ಕೋಟಿ ರು. ಹಣ ನೀಡದೇ ಇದ್ದರೆ ಶಾರ್ಪ್‌ ಶೂಟರ್ಸ್‌ಗಳ ಮೂಲಕ ಹತ್ಯೆಗೈಯುವುದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿಗೆ ಬೆದರಿಕೆ ಇ ಮೇಲ್‌ ರವಾನಿಸಿದ್ದ ಪ್ರಕರಣದಲ್ಲಿ ತೆಲಂಗಾಣದ ಯುವಕನನ್ನು ಬಂಧಿಸಲಾಗಿದೆ

ಮುಂಬೈ: 400 ಕೋಟಿ ರು. ಹಣ ನೀಡದೇ ಇದ್ದರೆ ಶಾರ್ಪ್‌ ಶೂಟರ್ಸ್‌ಗಳ ಮೂಲಕ ಹತ್ಯೆಗೈಯುವುದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿಗೆ ಬೆದರಿಕೆ ಇ ಮೇಲ್‌ ರವಾನಿಸಿದ್ದ ಪ್ರಕರಣದಲ್ಲಿ ತೆಲಂಗಾಣದ ಯುವಕನನ್ನು ಬಂಧಿಸಲಾಗಿದೆ. ಬಂಧಿತನನ್ನು ಗಣೇಶ್‌ ಎಂದು ಗುರುತಿಸಲಾಗಿದೆ. ಈ ಸತತ 5 ಇ ಮೇಲ್‌ ರವಾನಿಸಿ, ಅದರಲ್ಲಿ ಮೊದಲಿಗೆ 20 ಕೋಟಿ ರು., ಬಳಿಕ 200 ಕೋಟಿ ರು., ಬಳಿಕ 400 ಕೋಟಿ ರು.ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದ. ಇ-ಮೇಲ್‌ ಐಪಿ ಅಡ್ರೆಸ್‌ ಮೂಲಕ ಆರೋಪಿಯನ್ನು ಬಂಧಿಸಲಾಗಿದೆ. ಈತ ಶದಬ್‌ ಖಾನ್‌ ಹೆಸರಿನಲ್ಲಿ ಇ-ಮೇಲ್‌ ಕಳುಹಿಸಿದ್ದ.

Share this article