ದಿಲ್ಲಿ, ಸಿಕ್ಕಿಂ ಸರ್ಕಾರಿ ನೌಕರರಿಗೆ ವಾರಕ್ಕೆ 2 ದಿನ ವರ್ಕ್‌ ಫ್ರಂ ಹೋಂ

KannadaprabhaNewsNetwork |  
Published : May 15, 2026, 01:45 AM IST
work from home

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿಸುವ ಸಲುವಾಗಿ ಸೂಚಿಸಿರುವ ವರ್ಕ್‌ ಫ್ರಂ ಹೋಂ ಕ್ರಮವನ್ನು ದೆಹಲಿ ಮತ್ತು ಸಿಕ್ಕಿಂನಲ್ಲಿ ವಾರಕ್ಕೆ 2 ದಿನ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಕಡ್ಡಾಯವಾಗಿ ಜಾರಿಗೆ ತರಲಾಗಿದೆ

 ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿಸುವ ಸಲುವಾಗಿ ಸೂಚಿಸಿರುವ ವರ್ಕ್‌ ಫ್ರಂ ಹೋಂ ಕ್ರಮವನ್ನು ದೆಹಲಿ ಮತ್ತು ಸಿಕ್ಕಿಂನಲ್ಲಿ ವಾರಕ್ಕೆ 2 ದಿನ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಕಡ್ಡಾಯವಾಗಿ ಜಾರಿಗೆ ತರಲಾಗಿದೆ. ಈ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಯೋಜನೆ ಜಾರಿಗೆ ತಂದ ಮೊದಲ 2 ರಾಜ್ಯಗಳಾಗಿ ಹೊರಹೊಮ್ಮಿವೆ.

ಅಂತೆಯೇ, ದೆಹಲಿಯಲ್ಲಿ ಪ್ರತಿ ಸೋಮವಾರವನ್ನು ‘ಮೆಟ್ರೋ ಮಂಡೆ’ ಎಂದು ಘೋಷಿಸಲಾಗಿದೆ. ಜತೆಗೆ, ವಾರಕ್ಕೊಂದು ದಿನ ಸ್ವಯಂಪ್ರೇರಿತವಾಗಿ ವಾಹನಗಳನ್ನು ಬಳಸದಂತೆ ಕೂಡ ಸೂಚಿಸಲಾಗಿದೆ.

ಖಾಸಗಿ ಕಂಪನಿಗಳಿಗೂ ಕರೆ:

ದೆಹಲಿ ಸಚಿವ ಸಂಪುಟ ಸಭೆಯಲ್ಲಿ ಈ ಆದೇಶ ಹೊರಡಿಸಿರುವ ದೆಹಲಿ ಸಿಎಂ ರೇಖಾ ಗುಪ್ತಾ, ‘ಮೇರಾ ಭಾರತ್‌, ಮೇರಾ ಯೋಗದಾನ್‌’ ಅಡಿಯಲ್ಲಿ ತಾವು ಸೇರಿದಂತೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಇಂಧನ ಉಳಿತಾಯಕ್ಕಾಗಿ ಇಂತಹ ಕ್ರಮಗಳನ್ನು ಪಾಲಿಸಬೇಕು ಎಂದರು. ಜತೆಗೆ ಖಾಸಗಿ ಕಂಪನಿಗಳೂ ಇದನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದರು.

ಇಂಧನ ಕೋಟಾವನ್ನು ಶೇ.20ರಷ್ಟು ಕಡಿತ

ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುತ್ತಿದ್ದ ಇಂಧನ ಕೋಟಾವನ್ನು ಶೇ.20ರಷ್ಟು ಕಡಿತಗೊಳಿಸಲಾಗಿದೆ. ಇನ್ನೊಂದು ವರ್ಷದ ಮಟ್ಟಿಗೆ ಸಚಿವರ ವಿದೇಶಿ ಪ್ರವಾಸಕ್ಕೆ ಬ್ರೇಕ್‌ ಬಿದ್ದಿದ್ದು, ರಾಜ್ಯದಲ್ಲಿ 3 ತಿಂಗಳು ಯಾವುದೇ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳದೆ ಇರಲು ನಿರ್ಧರಿಸಲಾಗಿದೆ.

ಈಗಾಗಲೇ ಗುಪ್ತಾರ ಬೆಂಗಾವಲು ಪಡೆಯ ಗಾತ್ರವನ್ನು ಶೇ.60ರಷ್ಟು ತಗ್ಗಿಸಿ, 4 ವಾಹನಗಳಿಗೆ ಇಳಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿಇಸಿ ಆಯ್ಕೆಯಿಂದ ಸಿಜೆಐ ಕೈ ಬಿಟ್ಟಿದ್ದಕ್ಕೆ ಸುಪ್ರೀಂ ಚಾಟಿ
ಗೌರ್ನರ್‌ ಗೆಹಲೋತ್ ಮಿತವ್ಯಯ ಮಂತ್ರ!