ನವದೆಹಲಿ: ದೆಹಲಿಯ ಅಬಕಾರಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) 5ನೇ ಬಾರಿ ಸಮನ್ಸ್ ಜಾರಿ ಮಾಡಿದೆ. ಈ ಸಲ ಫೆ. 2ಕ್ಕೆ ವಿಚಾರಣೆಗೆ ಬರುವಂತೆ ಹೇಳಿದೆ.
ಕಳೆದ ಜ.18ರಂದು ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್‌ಗೆ ಇ.ಡಿ ನಾಲ್ಕನೇ ನೋಟಿಸ್ ನೀಡಿತ್ತು. ಆದರೆ ಮೂರು ದಿನಗಳ ಕಾಲ ಅವರು ಗೋವಾ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ಆಪ್ ಹೇಳಿತ್ತು. ಅಲ್ಲದೇ ಕೇಜ್ರಿವಾಲ್ ತಪ್ಪಿತಸ್ಥರಲ್ಲ ಎಂದು ಹಿಂದಿನಿಂದಲೂ ಆಪ್ ನಾಯಕರು ಇ.ಡಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಲೇ ಇದ್ದಾರೆ.