₹200 ಕೋಟಿ ಅಕ್ರಮ ವರ್ಗ ಕೇಸ್‌: ನಟಿ ಜಾಕ್ವೆಲಿನ್‌ ವಿರುದ್ಧ ಜಾರ್ಜ್‌ಶೀಟ್‌ಗೆ ಕೋರ್ಟ್‌ ಅಸ್ತು

KannadaprabhaNewsNetwork |  
Published : May 31, 2026, 02:00 AM IST
Jaquelin

ಸಾರಾಂಶ

200 ಕೋಟಿ ರು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌, ಆಕೆಯ ಗೆಳೆಯ ಸುಕೇಶ್‌ ಚಂದ್ರಶೇಖರ್‌ ಸೇರಿದಂತೆ 15 ಜನರ ವಿರುದ್ಧ ಆರೋಪಪಟ್ಟಿ ಹೊರಿಸುವಂತೆ ದೆಹಲಿ ಕೋರ್ಟ್‌ ಶನಿವಾರ ಸೂಚಿಸಿದೆ.

ನವದೆಹಲಿ: 200 ಕೋಟಿ ರು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌, ಆಕೆಯ ಗೆಳೆಯ ಸುಕೇಶ್‌ ಚಂದ್ರಶೇಖರ್‌ ಸೇರಿದಂತೆ 15 ಜನರ ವಿರುದ್ಧ ಆರೋಪಪಟ್ಟಿ ಹೊರಿಸುವಂತೆ ದೆಹಲಿ ಕೋರ್ಟ್‌ ಶನಿವಾರ ಸೂಚಿಸಿದೆ.

ಜಡ್ಜ್‌ ನ್ಯಾ. ಪ್ರಶಾಂತ್ ಶರ್ಮಾ ಆದೇಶ

ಆರೋಪಕ್ಕೆ ಬಲವಾದ ಸಾಕ್ಷಿಗಳಿರುವ ಹಿನ್ನೆಲೆಯಲ್ಲಿ ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್‌ 3ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಜಡ್ಜ್‌ ನ್ಯಾ. ಪ್ರಶಾಂತ್ ಶರ್ಮಾ ಆದೇಶಿಸಿದ್ದಾರೆ. 

200 ಕೋಟಿ ರು.ಗೂ ಹೆಚ್ಚಿನ ಹಣ ವಂಚಿಸಿದ್ದ

ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಸುಕೇಶ್‌, ಜೈಲಿನೊಳಗೆ ಇದ್ದುಕೊಂಡೇ ತನ್ನ ಜಾಲದ ಮೂಲದ ಮಹಿಳೆಯೊಬ್ಬರಿಗೆ 200 ಕೋಟಿ ರು.ಗೂ ಹೆಚ್ಚಿನ ಹಣ ವಂಚಿಸಿದ್ದ. ತನ್ನನ್ನು ತಾನು ಸರ್ಕಾರಿ ಅಧಿಕಾರಿ ಎಂದು ಹೇಳಿ ಆತ ನಡೆಸಿದ್ದ ಈ ವಂಚನೆ ಜಾಲದಲ್ಲಿ ಆತನ ಪತ್ನಿ ಲೀನಾ, ಗೆಳತಿ ಜಾಕ್ವೆಲಿನ್‌, ಸೇರಿದಂತೆ ಹಲವು ವ್ಯಕ್ತಿಗಳು ನಾನಾ ರೀತಿಯಲ್ಲಿ ಭಾಗಿಯಾಗಿದ್ದಕ್ಕೆ ಸಾಕ್ಷ್ಯ ಇದೆ ಎಂದು ನ್ಯಾಯಾಲಯ ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪಾಕ್‌ನ ದಾದುನಲ್ಲಿ ದಾಖಲೆಯ 51.5° ಸೆ. ಉಷ್ಣ
ಟ್ರಂಪ್‌ಗಿಂತ ಅವರ ಹಾರ್ಟ್‌ 14 ವರ್ಷ ಚಿಕ್ಕದು