ಗಣರಾಜ್ಯೋತ್ಸವಕ್ಕೆ ಖಲಿಸ್ತಾನಿ, ಬಾಂಗ್ಲಾ ಉಗ್ರರ ದಾಳಿ ಬೆದರಿಕೆ!

KannadaprabhaNewsNetwork |  
Published : Jan 18, 2026, 02:00 AM IST
Terrorist

ಸಾರಾಂಶ

ದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಖಲಿಸ್ತಾನಿ ಮತ್ತು ಬಾಂಗ್ಲಾದೇಶ ಮೂಲದ ಉಗ್ರ ಸಂಘಟನೆಗಳ ದಾಳಿ ಬೆದರಿಕೆ ಇದ್ದು, ದೆಹಲಿ ಸೇರಿ ದೇಶಾದ್ಯಂತ ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ನವದೆಹಲಿ: ದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಖಲಿಸ್ತಾನಿ ಮತ್ತು ಬಾಂಗ್ಲಾದೇಶ ಮೂಲದ ಉಗ್ರ ಸಂಘಟನೆಗಳ ದಾಳಿ ಬೆದರಿಕೆ ಇದ್ದು, ದೆಹಲಿ ಸೇರಿ ದೇಶಾದ್ಯಂತ ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಮೂಲಭೂತವಾದಿಗಳ ಕಾಲಾಳುಗಳ ರೀತಿಯಲ್ಲಿ ಕೆಲಸ

ಪಂಜಾಬ್‌ ಮೂಲದ ಗ್ಯಾಂಗ್‌ಸ್ಟರ್‌ಗಳು, ಖಲಿಸ್ತಾನಿ ಉಗ್ರರು ಮತ್ತು ವಿದೇಶದಲ್ಲಿ ಕುಳಿತ ಮೂಲಭೂತವಾದಿಗಳ ಕಾಲಾಳುಗಳ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಗ್ಯಾಂಗ್‌ಸ್ಟರ್‌ಗಳು ಹರ್ಯಾಣ, ದೆಹಲಿ-ಎನ್‌ಸಿಆರ್‌, ಉತ್ತರಪ್ರದೇಶ ಮತ್ತು ರಾಜಸ್ಥಾನದಲ್ಲಿ ಹೆಚ್ಚು ಚಟುವಟಿಕೆಯಿಂದಿದ್ದಾರೆ. ಈಗಾಗಲೇ ಅವರು ಖಲಿಸ್ತಾನಿ ಉಗ್ರರೊಂದಿಗೆ ಸಂಪರ್ಕವನ್ನೂ ಸಾಧಿಸಿದ್ದಾರೆ. 

ಗ್ಯಾಂಗ್‌ಸ್ಟರ್‌ಗಳನ್ನು ಬಳಸಿಕೊಂಡು ಅಹಿತಕರ ಘಟನೆ

ಈ ಗ್ಯಾಂಗ್‌ಸ್ಟರ್‌ಗಳನ್ನು ಬಳಸಿಕೊಂಡು ದೆಹಲಿ ಸೇರಿ ದೇಶದ ಇತರೆ ನಗರಗಳಲ್ಲಿ ಅಹಿತಕರ ಘಟನೆ ನಡೆಸುವ ಆತಂಕವಿದೆ. ಹೀಗಾಗಿ ಹೆಚ್ಚು ಎಚ್ಚರಿಕೆಯಿಂದಿರುವಂತೆ ಗುಪ್ತಚರ ಮೂಲಗಳು ತಿಳಿಸಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಾಲಿವುಡ್‌ನಲ್ಲಿ ಕೋಮುತಾರತಮ್ಯ- 8 ವರ್ಷಗಳಿಂದ ನನಗೆ ಅವಕಾಶ ಸಿಗುತ್ತಿಲ್ಲ : ರೆಹಮಾನ್‌
ಮಹಾರಾಷ್ಟ್ರ ತಂಡಗಳಿಂದ ರಾಜ್ಯದಲ್ಲಿ ಡ್ರಗ್ಸ್‌ ಪತ್ತೆ- ನಮ್ಮ ಪೊಲೀಸ್‌ ವೈಫಲ್ಯ : ಸಿದ್ದು ಗರಂ