ದೆಹಲಿಯ ವಾಯುಮಾಲಿನ್ಯ ಮತ್ತಷ್ಟು ತೀವ್ರಗೊಂಡಿದ್ದು, ವಾಯು ಗುಣಮಟ್ಟ ಗಂಭೀರದ ಮಟ್ಟಕ್ಕೆ

KannadaprabhaNewsNetwork |  
Published : Nov 14, 2024, 12:56 AM ISTUpdated : Nov 14, 2024, 06:28 AM IST
ದೆಹಲಿ | Kannada Prabha

ಸಾರಾಂಶ

ದೆಹಲಿಯ ವಾಯುಮಾಲಿನ್ಯ ಮತ್ತಷ್ಟು ತೀವ್ರಗೊಂಡಿದ್ದು, ಬುಧವಾರ ವಾಯುಗುಣಮಟ್ಟ ಗಂಭೀರದ ಮಟ್ಟ ತಲುಪಿದೆ.

ನವದೆಹಲಿ: ದೆಹಲಿಯ ವಾಯುಮಾಲಿನ್ಯ ಮತ್ತಷ್ಟು ತೀವ್ರಗೊಂಡಿದ್ದು, ಬುಧವಾರ ವಾಯುಗುಣಮಟ್ಟ ಗಂಭೀರದ ಮಟ್ಟ ತಲುಪಿದೆ. ದೆಹಲಿಯಲ್ಲಿ ಬುಧವಾರ ವಾಯುಗುಣಮಟ್ಟ 418ಗೆ ತಲುಪಿದ್ದು, ಇದು ಈ ವರ್ಷದಲ್ಲೇ ಅತ್ಯಂತ ಕಳಪೆ ಮಟ್ಟವಾಗಿದೆ. ಗುರುವಾರ 334 ಇದ್ದ ಗುಣಮಟ್ಟ ಧಿಡೀರನೇ ಏರಿಕೆಯಾಗಿದ್ದು, ಬುಧವಾರ 418ಕ್ಕೆ ಏರಿದೆ. ಇನ್ನು ಬಿಹಾರ ಹಾಜಿಪುರದಲ್ಲಿ 417 ಅಂಕ ದಾಖಲಾಗಿದೆ.ವಾಯು ಗುಣಮಟ್ಟ 0 ಇಂದ 50 ನಡುವೆ ಇದ್ದರೆ ಅದನ್ನು ಉತ್ತಮ, 51-100 ನಡುವೆ ಇದ್ದರೆ ತೃಪ್ತಿದಾಯಕ, 101-200 ಇದ್ದರೆ ಮಧ್ಯಮ, 201-300 ಇದ್ದರೆ ಕಳಪೆ, 301-400 ಇದ್ದರೆ ತೀರಾ ಕಳಪೆ, 401-450 ಇದ್ದರೆ ಗಂಭೀರ ಎಂದು ಪರಿಗಣಿಸಲಾಗುತ್ತದೆ.

ದೆಹಲಿಯಲ್ಲಿ ದಟ್ಟ ಮಂಜು: ಸಂಚಾರ ವ್ಯತ್ಯಯ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ದಟ್ಟ ಮಂಜು ಆವರಿಸಿದ್ದು, ವಿಮಾನ ಸೇರಿದಂತೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ವಾಯುಮಾಲಿನ್ಯದ ಜೊತೆಗೆ ದಟ್ಟ ಮಂಜು ಕೂಡಾ ಸೇರಿಕೊಂಡು ಶೂನ್ಯ ಗೋಚರ ಪರಿಸ್ಥಿತಿ ನಿರ್ಮಾಣವಾಗಿತ್ತು. 

ಹೀಗಾಗಿ ಇಲ್ಲಿನ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ 10 ವಿಮಾನಗಳನ್ನು ಜೈಪುರ ಮತ್ತು ಲಖನೌಗೆ ಕಳುಹಿಸಿಕೊಡಲಾಯಿತು.ಚಂಡೀಗಢದಲ್ಲಿ ಮಿತಿಮೀರಿದ ಮಾಲಿನ್ಯ:ಚಂಡೀಗಢವನ್ನು ರಾಜಧಾನಿಯಾಗಿ ಹಂಚಿಕೊಂಡಿರುವ ಹರ್ಯಾಣ ಹಾಗೂ ಪಂಜಾಬ್‌ನಲ್ಲಿ ವಾಯು ಗುಣಮಟ್ಟ ತೀರಾ ಕುಸಿದಿದ್ದು, 355 ಅಂಕ ತಲುಪಿದೆ. ಹರ್ಯಾಣಾದ ಭಿವಾನಿಯಲ್ಲಿ 358 ಅಂಕಗಳ ಅತ್ಯಂತ ಕಳಪೆ ವಾಯುಗುಣಮಟ್ಟ ವರದಿಯಾಗಿದೆ. ಅತಿಯಾದ ಕೃಷಿ ತ್ಯಾಜ್ಯ ಸುಡುವಿಕೆಯೇ ಇದಕ್ಕೆ ಕಾರಣ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

2025 ಸುಧಾರಣೆಗಳ ಸಾರ್ಥಕ ವರ್ಷ: ಮೋದಿ ಹರ್ಷ
ಪತ್ರಕರ್ತರ ಹಿತರಕ್ಷಣೆಗೆ ಐಎಫ್‌ಡಬ್ಲ್ಯುಜೆ ಆಗ್ರಹ