ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಚಾಟಿನವದೆಹಲಿ: ‘ಭಕ್ತರು ದೇವರಿಗೆ ಹಾಕುವ ಕಾಣಿಕೆಯ ಹಣ ಶಿಕ್ಷಣ, ವೈದ್ಯಕೀಯ ಸಂಸ್ಥೆಗಳಂತಹ ಕಾರ್ಯಗಳಿಗೆ ವಿನಿಯೋಗವಾಗಬೇಕೇ ಹೊರತು ಮದುವೆ ಸಭಾಂಗಣಗಳನ್ನು ನಿರ್ಮಿಸುವುದಕ್ಕಲ್ಲ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.
ಈ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ, ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದ್ದು, ‘ಭಕ್ತರು ಮದುವೆ ಸಭಾಂಗಣಗಳನ್ನು ನಿರ್ಮಿಸುವುದಕ್ಕಾಗಿ ಕಾಣಿಕೆ ನೀಡಿರುವುದಿಲ್ಲ. ಅದನ್ನು ದೇವಸ್ಥಾನದ ಅಭಿವೃದ್ಧಿಗಾಗಿ ಕೊಟ್ಟಿರಬಹುದು. ದೇವಸ್ಥಾನದ ಆವರಣದಲ್ಲಿ ಮದುವೆ ಪಾರ್ಟಿ ನಡೆಯುತ್ತಿದ್ದರೆ ಮತ್ತು ಅಶ್ಲೀಲ ಹಾಡುಗಳನ್ನು ಹಾಕಿದರೆ, ಅದು ದೇವಸ್ಥಾನದ ಉದ್ದೇಶವೇ? ಭಕ್ತರ ಹಣ ಶಿಕ್ಷಣ, ವೈದ್ಯಕೀಯದಂತಹ ಸತ್ಕಾರ್ಯಗಳಿಗೆ ಬಳಕೆಯಾಗಬೇಕು’ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ, ‘ನಾವು ಈ ಪ್ರಕರಣವನ್ನು ಆಲಿಸುತ್ತೇವೆ. ಆದರೆ ಅರ್ಜಿದಾರರಿಗೆ ಯಾವುದೇ ತಡೆಯಾಜ್ಞೆ ನೀಡುತ್ತಿಲ್ಲ’ ಎಂದಿದೆ.