ರಾಮಮಂದಿರಕ್ಕೆ 1.75 ಕೇಜಿ ಬೆಳ್ಳಿ ಪೊರಕೆ ಕಾಣಿಕೆ!

KannadaprabhaNewsNetwork | Updated : Jan 30 2024, 08:45 AM IST

ಸಾರಾಂಶ

ಇಲ್ಲಿನ ರಾಮ ಮಂದಿರಕ್ಕೆ ಮಧ್ಯಪ್ರದೇಶದ ಭಕ್ತರು 1.75 ಕೇಜಿ ತೂಕದ 108 ಕಡ್ಡಿಗಳನ್ನು ಹೊಂದಿರುವ ಬೆಳ್ಳಿ ಪೊರಕೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅಯೋಧ್ಯೆ: ಇಲ್ಲಿನ ರಾಮ ಮಂದಿರಕ್ಕೆ ಮಧ್ಯಪ್ರದೇಶದ ಭಕ್ತರು 1.75 ಕೇಜಿ ತೂಕದ 108 ಕಡ್ಡಿಗಳನ್ನು ಹೊಂದಿರುವ ಬೆಳ್ಳಿ ಪೊರಕೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅಖಿಲ ಭಾರತ ಮಾಂಗ್‌ ಸಮಾಜ ಈ ಉಡುಗೊರೆಯನ್ನು ನೀಡಿದ್ದು, ಇದನ್ನು ತಯಾರಿಸಲು 11 ದಿನಗಳ ಸಮಯ ಹಿಡಿದಿದೆ. ಪೊರಕೆಯ ಮೇಲ್ಭಾಗದಲ್ಲಿ ಲಕ್ಷ್ಮೀ ದೇವಿಯ ವಿಗ್ರಹವಿದ್ದು, ಇದನ್ನು ದೇಗುಲದ ಗರ್ಭಗುಡಿ ಸ್ವಚ್ಛತೆಗೆ ಬಳಸುವಂತೆ ಟ್ರಸ್ಟ್‌ ಬಳಿ ಮಾಂಗ್‌ ಸಮಾಜ ವಿನಂತಿಸಿದೆ.

ಈ ಬಗ್ಗೆ ಮಾತನಾಡಿರುವ ಸಮಾಜ ಸದಸ್ಯ ಮಧುಕರ್‌ ರಾವ್‌, ‘ಜ.22 ಇಡೀ ದೇಶವೇ ದೀಪಾವಳಿ ಆಚರಿಸಿದೆ. ನಾವು ಪೊರಕೆಯನ್ನು ಲಕ್ಷ್ಮಿ ಎಂದು ಸಂಬೋಧಿಸುತ್ತೇವೆ. 

ಜೊತೆಗೆ ಲಕ್ಷ್ಮಿಯನ್ನು ದೀಪಾವಳಿಯಲ್ಲಿ ಆರಾಧಿಸುತ್ತೇವೆ. ಹೀಗಾಗಿ ಪೊರಕೆಯ ಮೇಲೆ ಲಕ್ಷ್ಮೀ ದೇವಿ ವಿಗ್ರಹ ನಿರ್ಮಿಸಿದ್ದೇವೆ’ ಎಂದು ಹೇಳಿದ್ದಾರೆ.

Share this article