ಹೂಚೆಂಡು ಎಸೆದ ಅಭಿಮಾನಿ: ಬಾಂಬ್‌ ಎಂದು ಓಡಿದ ವಿಜಯ್‌

KannadaprabhaNewsNetwork |  
Published : Apr 14, 2026, 03:15 AM IST
Vijay

ಸಾರಾಂಶ

ಟಿವಿಕೆ ಪಕ್ಷದ ಮುಖ್ಯಸ್ಥ ನಟ ವಿಜಯ್‌ ತಮಿಳುನಾಡಿನಲ್ಲಿ ಸೈಕಲ್‌ ರ್‍ಯಾಲಿಯಲ್ಲಿ ಭಾಗಿಯಾಗಿದ್ದ ವೇಳೆ ನೆರೆದಿದ್ದ ಅಭಿಮಾನಿಯೊಬ್ಬರು ಅವರ ಮೇಲೆ ಹೂಚೆಂಡು ಎಸೆದಿದ್ದಾರೆ. ಇದನ್ನು ಬಾಂಬ್ ಎಂದು ತಪ್ಪಾಗಿ ಭಾವಿಸಿದ ನಟ ಹೆದರಿ ಸೈಕಲ್‌ ಬಿಟ್ಟು ಓಡಿ ಹೋದ ಘಟನೆ ನಡೆದಿದೆ.

ಚೆನ್ನೈ: ಟಿವಿಕೆ ಪಕ್ಷದ ಮುಖ್ಯಸ್ಥ ನಟ ವಿಜಯ್‌ ತಮಿಳುನಾಡಿನಲ್ಲಿ ಸೈಕಲ್‌ ರ್‍ಯಾಲಿಯಲ್ಲಿ ಭಾಗಿಯಾಗಿದ್ದ ವೇಳೆ ನೆರೆದಿದ್ದ ಅಭಿಮಾನಿಯೊಬ್ಬರು ಅವರ ಮೇಲೆ ಹೂಚೆಂಡು ಎಸೆದಿದ್ದಾರೆ. ಇದನ್ನು ಬಾಂಬ್ ಎಂದು ತಪ್ಪಾಗಿ ಭಾವಿಸಿದ ನಟ ಹೆದರಿ ಸೈಕಲ್‌ ಬಿಟ್ಟು ಓಡಿ ಹೋದ ಘಟನೆ ನಡೆದಿದೆ. ಇದರ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ. 

ವಿಜಯ್‌ ಜನರ ಗುಂಪಿನ ಮಧ್ಯೆ ಸೈಕಲ್‌ನಲ್ಲಿ ಹೋಗುತ್ತಿದ್ದರು.

 ಅದರಲ್ಲಿ ವಿಜಯ್‌ ಜನರ ಗುಂಪಿನ ಮಧ್ಯೆ ಸೈಕಲ್‌ನಲ್ಲಿ ಹೋಗುತ್ತಿದ್ದರು. ಆಗ ಅಲ್ಲಿ ನೆರೆದಿದ್ದವರು ಖುಷಿಯಿಂದ ನಟನ ಕಡೆಗೆ ಓಡಿ ಬರುತ್ತಿದ್ದರು. ಅದೇ ವೇಳೆ ಬೆಂಬಲಿಗರೊಬ್ಬರು ಜನರ ಮಧ್ಯೆ ಯಿಂದ ಹೂಚೆಂಡನ್ನು ಎಸೆದಿದ್ದಾರೆ. ಆಗ ವಿಜಯ್‌ ಬಾಂಬ್‌ ಎಂದು ಭಾವಿಸಿ ಭಯದಿಂದ ಸೈಕಲ್ ಬಿಟ್ಟು ಓಡಿದ್ದಾರೆ. ಇದೇ ಅವರ ಹಿಂದೆ ಮುಂದೆ ಇದ್ದ ಭದ್ರತಾ ಸಿಬ್ಬಂದಿ ಕೂಡಾ ವಿಜಯ್‌ ಅವರನ್ನು ಸುತ್ತುವರೆದು ವ್ಯಾನ್‌ನಲ್ಲಿ ಕೂರಿಸಿದ್ದಾರೆ.

ಜನನಾಯಗನ್‌ ಚಿತ್ರದ ದೃಶ್ಯ ಲೀಕ್‌: 6 ಜನರ ಸೆರೆ, 300 ಲಿಂಕ್‌ ರದ್ದು

ಚೆನ್ನೈ: ವಿಜಯ್‌ ಸೇತುಪತಿ ನಟನೆಯ ಕೊನೆಯ ಚಿತ್ರ ‘ಜನನಾಯಗನ್‌’ನ ಕೆಲ ದೃಶ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾದ ಪ್ರಕರಣ ಸಂಬಂಧ 6 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ ಇಂಥ ದೃಶ್ಯಗಳನ್ನು ಹೊಂದಿದ್ದ 300 ಲಿಂಕ್‌ಗಳನ್ನು ರದ್ದುಪಡಿಸಲಾಗಿದೆ. ಸೋರಿಕೆ ಕುರಿತು ಚಲನಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್‌ ಪ್ರೊಡಕ್ಷನ್ಸ್‌ ಏ.9ಕ್ಕೆ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಂದು ಸೈಬರ್‌ ಅಪರಾಧ ವಿಭಾಗದ ಪೊಲೀಸರು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹೋರ್ಮುಜ್‌ನಲ್ಲಿ ಇದೀಗಸಂಪೂರ್ಣ ನಿರ್ಬಂಧ ಜಾರಿ
ಸಿಬಿಎಸ್‌ಇ 10ನೇ ಕ್ಲಾಸ್‌ ಫಲಿತಾಂಶ: ಶೇ.94ರಷ್ಟುವಿದ್ಯಾರ್ಥಿಗಳು ತೇರ್ಗಡೆ