ಡಿಜಿ ಅರೆಸ್ಟ್‌ : ವೃದ್ಧಗೆ ₹1.3 ಕೋಟಿ ಪರಿಹಾರ

Published : Apr 23, 2026, 12:08 PM IST
Digital Arrest

ಸಾರಾಂಶ

ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪರೂಪದ ಆದೇಶ ಹೊರಡಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ನಕಲಿ ಖಾತೆಗಳ ಮೂಲಕ ಡಿಜಿಟಲ್ ವಂಚನೆಗೆ ಒಳಗಾದ ವೃದ್ಧರೊಬ್ಬರಿಗೆ ಅವರು ಕಳೆದಕೊಂಡ ಹಣದ ಶೇ.5ರಿಂದ 7ರಷ್ಟು ಹಣ ನೀಡಬೇಕು ಎಂದು ಸೂಚಿಸಿದೆ.

 ನವದೆಹಲಿ: ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪರೂಪದ ಆದೇಶ ಹೊರಡಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ನಕಲಿ ಖಾತೆಗಳ ಮೂಲಕ ಡಿಜಿಟಲ್ ವಂಚನೆಗೆ ಒಳಗಾದ ವೃದ್ಧರೊಬ್ಬರಿಗೆ ಅವರು ಕಳೆದಕೊಂಡ ಹಣದ ಶೇ.5ರಿಂದ 7ರಷ್ಟು ಹಣ ನೀಡಬೇಕು ಎಂದು ಸೂಚಿಸಿದೆ. ಅರ್ಥಾತ್‌ ಈ ಪ್ರಕರಣದಲ್ಲಿ ಈ ಬ್ಯಾಂಕುಗಳು ಒಟ್ಟಾಗಿ ಸಂತ್ರಸ್ತರಿಗೆ 1.31 ಕೋಟಿ ರು.ಗಳನ್ನು ಪಾವತಿಸಿವೆ.

ಡಿಜಿ ಅರೆಸ್ಟ್‌ಗೆ ಒಳಗಾದವರಿಗೆ ಪರಿಹಾರ ನೀಡಬೇಕು

ಡಿಜಿ ಅರೆಸ್ಟ್‌ಗೆ ಒಳಗಾದವರಿಗೆ ಪರಿಹಾರ ನೀಡಬೇಕು ಎಂದು ಆರ್‌ಬಿಐ ಇತ್ತೀಚೆಗೆ ಇಂಟಿಗ್ರೇಟೆಡ್ ಓಂಬುಡ್ಸ್‌ಮನ್ ಯೋಜನೆಯ ಜಾರಿಗೆ ತಂದಿತ್ತು. ಅದರನ್ವಯ ಪರಿಹಾರ ನೀಡುವಂತೆ, ಆಕ್ಸಿಸ್ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್‌ಗೆ ಸೂಚಿಸಲಾಗಿದೆ.

ಈ ಪ್ರಕರಣದಲ್ಲಿ 78 ವರ್ಷದ ನಿವೃತ್ತ ಬ್ಯಾಂಕರ್‌ ನರೇಶ್‌ ಮಲ್ಹೋತ್ರಾ ಅವರು ಆಗಸ್ಟ್ ಮತ್ತು ಸೆಪ್ಟೆಂಬರ್ 2025 ರ ನಡುವೆ ಡಿಜಿಟಲ್ ಅರೆಸ್ಟ್‌ ವಂಚನೆಗಳಿಂದ 22.92 ಕೋಟಿ ರು.ಗಳನ್ನು ಕಳೆದುಕೊಂಡಿದ್ದರು. ವಂಚಕರು ಈ ಬ್ಯಾಂಕ್‌ಗಳಲ್ಲಿ ಖಾತೆ ಅವರ ಹಣ ಲಪಟಾಯಿಸಿದ್ದರು.

ಈ ಸಂಬಂಧ ಬ್ಯಾಂಕ್‌ಗಳು 1.31 ಕೋಟಿ ರು.ಗಳನ್ನು ಪರಿಹಾರವಾಗಿ ನರೇಶ್‌ ಅವರಿಗೆ ನೀಡಿವೆ. ಆದರೆ ಅವರು ಪೂರ್ಣ ಮೊತ್ತದ ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಇದನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ಆರ್‌ಬಿಐಗೆ ಸೂಚಿಸಿತ್ತು. ಆಗ ಇದನ್ನು ಆರ್‌ಬಿಐ ಪರಿಶೀಲಿಸಿದಾಗ, ಮಲ್ಹೋತ್ರಾ ಅವರು ಡಿಜಿ ಅರೆಸ್ಟ್‌ ಆದ ಅವಧಿಯಲ್ಲಿ ಎಲ್ಲ ವ್ಯವಹಾರಗಳನ್ನು ಬ್ಯಾಂಕ್‌ಗಳಿಗೇ ಬಂದು ಮಾಡಿದ್ದಾರೆ. ಹೀಗಾಗಿ ಇದರಲ್ಲಿ ಅಷ್ಟಾಗಿ ಬ್ಯಾಂಕ್‌ಗಳ ಪಾತ್ರ ಕಂಡುಬರುತ್ತಿಲ್ಲ. ಆದರೂ ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಆದ ಕಾರಣ ಬ್ಯಾಂಕ್‌ಗಳ ಪಾತ್ರ ಕಂಡುಬರುತ್ತಿದೆ. ಹೀಗಾಗಿ ಅವರಿಗೆ 1.31 ಕೋಟಿ ಪರಿಹಾರ ನೀಡಿದ್ದು ಸರಿ ಎಂದು ಆರ್‌ಬಿಐ ಹೇಳಿದೆ.

ಬ್ಯಾಂಕುಗಳು ಎಷ್ಟು ಪಾವತಿಸಬೇಕು?:

ಆಕ್ಸಿಸ್ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್‌ಗಳು ಮಲ್ಹೋತ್ರಾ ಅವರಿಗೆ ವರ್ಗಾವಣೆಯಾದ ಮೊತ್ತದ 5% ಪಾವತಿಸಿವೆ. ಯೆಸ್ ಬ್ಯಾಂಕ್‌ಗೆ ಠೇವಣಿ ಇಟ್ಟ ಮೊತ್ತದ 7.5% ಅನ್ನು ಪರಿಹಾರವಾಗಿ ನೀಡಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇಂದು ಬಂಗಾಳ ಹಂತ-1, ತಮಿಳುನಾಡು ಚುನಾವಣೆ
‘ಮೋದಿ ಉಗ್ರ’ ಹೇಳಿಕೆ: ಖರ್ಗೆ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು