ಹಾಥ್ರಸ್‌ಗೆ ರಾಹುಲ್‌ ಭೇಟಿ: ಕಾಲ್ತುಳಿತಕ್ಕೆ ಸರ್ಕಾರದ ವೈಫಲ್ಯ ಎಂದು ಕಿಡಿ

KannadaprabhaNewsNetwork |  
Published : Jul 06, 2024, 12:46 AM ISTUpdated : Jul 06, 2024, 06:58 AM IST
RAHUL GANDHI

ಸಾರಾಂಶ

ಇಲ್ಲಿ ಸತ್ಸಂಗದ ಸಮಯದಲ್ಲಿ ಉಂಟಾದ ಕಾಲ್ತುಳಿತಕ್ಕೆ ಒಳಗಾಗಿ ಆಸ್ಪತ್ರೆ ಸೇರಿರುವ ಗಾಯಾಳುಗಳನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಶುಕ್ರವಾರ ಭೇಟಿ ಮಾಡಿದರು.

ಹಾಥ್ರಸ್‌: ಇಲ್ಲಿ ಸತ್ಸಂಗದ ಸಮಯದಲ್ಲಿ ಉಂಟಾದ ಕಾಲ್ತುಳಿತಕ್ಕೆ ಒಳಗಾಗಿ ಆಸ್ಪತ್ರೆ ಸೇರಿರುವ ಗಾಯಾಳುಗಳನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಶುಕ್ರವಾರ ಭೇಟಿ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುಸಿ, ‘ಇದನ್ನು ರಾಜಕೀಯಗೊಳಿಸಲು ನನಗೆ ಇಷ್ಟವಿಲ್ಲ. ಆದರೆ ಸರ್ಕಾರದ ಆಡಳಿತದಲ್ಲಿನ ವೈಫಲ್ಯದಿಂದಾಗಿ ಈ ದುರ್ಘಟನೆ ಸಂಭವಿಸಿದೆ. ಇದರ ತನಿಖೆ ಆಗಬೇಕು’ ಎಂದರು.

ಇದೇ ವೇಳೆ ಸರ್ಕಾರ ಘೋಷಿಸಿರುವ 2 ಲಕ್ಷ ಪರಿಹಾರ ಧನವನ್ನು ಹೆಚ್ಚಿಸಲು ಆಗ್ರಹಿಸಿದ ಅವರು ಘಟನೆಯಲ್ಲಿ ಬಲಿಯಾದವರೆಲ್ಲ ಬಡವರಾಗಿರುವ ಕಾರಣ ಪರಿಹಾರ ನೀಡಿಲೆಯಲ್ಲಿ ಸರ್ಕಾರ ತಡ ಮಾಡಬಾರದು ಎಂದು ಆಗ್ರಹಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೊಜ್ತಬಾ ಪತ್ತೆಗಾಗಿ ಅಮೆರಿಕ,ಇಸ್ರೇಲ್‌ ಗುಪ್ತಚರ ಹುಡುಕಾಟ
ಟ್ರಂಪ್‌ ಬಳಿ ಇಲ್ಲ ಯುದ್ಧದ ಸೂಕ್ತ ಎಕ್ಸಿಟ್‌ ಪ್ಲ್ಯಾನ್‌!