ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಇದು ಅತ್ಯಂತ ಕೆಟ್ಟ ಹೇಳಿಕೆ. ಇದೇ ರೀತಿ ಜೆಲೆನ್‌ಸ್ಕಿ ನಿಲುವು ಮುಂದುವರಿಸಿದರೆ ಅಮೆರಿಕವು ಉಕ್ರೇನ್‌ಗೆ ಬೆಂಬಲ ಸ್ಥಗಿತ ಮಾಡಬೇಕಾದೀತು’ ಎಂದು ಎಚ್ಚರಿಸಿದ್ದಾರೆ.
ವಾಷಿಂಗ್ಟನ್: ‘ರಷ್ಯಾ ವಿರುದ್ಧ ಯುದ್ಧ ನಿಲ್ಲಿಸಲ್ಲ’ ಎಂಬ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಇದು ಅತ್ಯಂತ ಕೆಟ್ಟ ಹೇಳಿಕೆ. ಇದೇ ರೀತಿ ಜೆಲೆನ್‌ಸ್ಕಿ ನಿಲುವು ಮುಂದುವರಿಸಿದರೆ ಅಮೆರಿಕವು ಉಕ್ರೇನ್‌ಗೆ ಬೆಂಬಲ ಸ್ಥಗಿತ ಮಾಡಬೇಕಾದೀತು’ ಎಂದು ಎಚ್ಚರಿಸಿದ್ದಾರೆ.
ಒಂದು ಕಡೆ ಜೆಲೆನ್‌ಸ್ಕಿ ಅವರು ಅಮೆರಿಕದ ಸಮರ ವಿರೋಧಿ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡು ಇನ್ನೊಂದು ಕಡೆ ಯುರೋಪ್ ಒಕ್ಕೂಟದ ಜತೆ ಕೈಜೋಡಿಸುತ್ತಿರುವ ಬಗ್ಗೆಯೂ ಕಿಡಿಕಾರಿದ್ದಾರೆ.