ಜ.20ರಂದು ನಡೆಯಲಿರುವ ಟ್ರಂಪ್‌ ಪ್ರಮಾಣ ವಚನಕ್ಕೆ ಭಾರತದ ಪ್ರತಿನಿಧಿಯಾಗಿ ಸಚಿವ ಜೈಶಂಕರ್‌ ಭಾಗಿ

KannadaprabhaNewsNetwork |  
Published : Jan 13, 2025, 12:45 AM ISTUpdated : Jan 13, 2025, 07:11 AM IST
S Jaishankar

ಸಾರಾಂಶ

ಜ.20ರಂದು ನಡೆಯಲಿರುವ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಮಾಣ ವಚನ ಕಾರ್ಯಕ್ರಮದಲ್ಲಿ, ಭಾರತದ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಭಾಗಿಯಾಗಲಿದ್ದಾರೆ.

ನವದೆಹಲಿ: ಜ.20ರಂದು ನಡೆಯಲಿರುವ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಮಾಣ ವಚನ ಕಾರ್ಯಕ್ರಮದಲ್ಲಿ, ಭಾರತದ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಭಾಗಿಯಾಗಲಿದ್ದಾರೆ.

ಈ ಭೇಟಿ ವೇಳೆ ಜೈಶಂಕರ್‌, ಡೊನಾಲ್ಡ್‌ ಟ್ರಂಪ್‌ ಸರ್ಕಾರದ ಪ್ರತಿನಿಧಿಗಳೊಂದಿಗೂ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅವರನ್ನು ಡೊನಾಲ್ಡ್‌ ಟ್ರಂಪ್‌ ಅವರು ಸೋಲಿಸಿದ್ದರು. ಅವರು ಅಮೆರಿಕದ 47ನೇ ಅಧ್ಯಕ್ಷರಾಗಿ ಜ.20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿಂದೆ 2017- 20221ರ ಅವಧಿಗೆ ಟ್ರಂಪ್‌ ಮೊದಲ ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇನ್ನುಉಪಾಧ್ಯಕ್ಷರಾಗಿ ಜೆ.ಡಿ.ವ್ಯಾನ್ಸ್‌ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಶಿಷ್ಟಾಚಾರ ಮುಗಿದು ಜಿನ್‌ಪಿಂಗ್‌ ಸೇರಿ ಹಲವು ಗಣ್ಯರಿಗೆ ಆಹ್ವಾನ

ನವದೆಹಲಿ: ಡೊನಾಲ್ಡ್‌ ಟ್ರಂಪ್‌ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಲವು ದೇಶಗಳ ರಾಜಕೀಯ ಗಣ್ಯರು, ಉದ್ಯಮಿಗಳು ಸೇರಿ ಭಾರೀ ಪ್ರಮಾಣದ ಜನರಿಗೆ ಆಹ್ವಾನ ನೀಡಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಮಾಜಿ ರಾಜಕೀಯ ನಾಯಕರಿಗೂ ಆಹ್ವಾನ ನೀಡುವ ಮೂಲಕ ಶಿಷ್ಟಾಚಾರ ಮುರಿಯಲಾಗಿದೆ. ಈ ಪಟ್ಟಿಯಲ್ಲಿ ಚೀನಾ ಮಾಜಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸೇರಿ ಹಲವು ರಾಜಕೀಯ ನಾಯಕರು ಸೇರಿದ್ದಾರೆ.==

ವಿಐಪಿ ಪಾಸ್‌ ಸೋಲ್ಡ್‌ ಓಟ್‌ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಎಲ್ಲಾ ವಿಐಪಿ ಪಾಸ್‌ಗಳು ಈಗಾಗಲೇ ಖರೀದಿಯಾಗಿವೆ. ಜತೆಗೆ, ಸೀಟುಗಳೂ ಖಾಲಿಯಿಲ್ಲ ಎಂದು ಉದ್ಘಾಟನಾ ಸಮಿತಿ ತಿಳಿಸಿದೆ. ಇದರಿಂದಾಗಿ, ಪ್ರಮಾಣ ಕಾರ್ಯಕ್ರಮಕ್ಕೆ ದೇಣಿಗೆ ನೀಡಿರುವ ಹಲವು ದಾನಿಗಳಿಗೂ ಈ ಪಾಸ್‌ಗಳು ಅಲಭ್ಯವಾಗಿವೆ. 

ಆಡಳಿತದ ಮೇಲೆ ಪ್ರಭಾವ ಬೀರುವ ಹಾಗೂ ತಮ್ಮ ಅನುಕೂಲಕ್ಕೆ ತಕ್ಕ ನೀತಿ ರೂಪುಗೊಳ್ಳುವಂತೆ ಮಾಡುವ ಉದ್ದೇಶದಿಂದ ಹಲವು ಉದ್ಯಮಿಗಳು ದೇಣಿಗೆ ನೀಡಿದ್ದರೂ ಅವರಿಗೆ ವಿಐಪಿ ಪಾಸ್‌ ಸಿಗದೆ, ಸಾಮಾನ್ಯರಿಗೆ ನೀಡಲಾಗುವ ಪಾಸ್‌ ಪಡೆದು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದೆ. ಇದುವರೆಗೆ ಟ್ರಂಪ್‌ರ ಪ್ರಮಾಣ ಕಾರ್ಯಕ್ರಮಕ್ಕೆ ಬರೋಬ್ಬರಿ 1.4 ಲಕ್ಷ ಕೋಟಿ ರು. ಸಂಗ್ರಹವಾಗಿದ್ದು, ಇದು 1.7 ಲಕ್ಷ ಕೋಟಿ.ರು ತಲುಪುವ ನಿರೀಕ್ಷೆಯಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ