;Resize=(412,232))
ನವದೆಹಲಿ: ಹಲವಾರು ರಾಜ್ಯಗಳಲ್ಲಿ ನಡೆಯುತ್ತಿರುವ ಬೇಷರತ್ ನೇರ ನಗದು ವರ್ಗಾವಣೆ (ಯುಸಿಟಿ) ಯೋಜನೆಗಳು ಆರ್ಥಿಕತೆಗೆ ಅಪಾಯ ಉಂಟುಮಾಡುತ್ತದೆ ಮತ್ತು ಮುಂದಿನ ದಿನಗಳಲ್ಲಿ ಸಮಸ್ಯೆ ಸೃಷ್ಟಿಸುತ್ತವೆ ಎಂದು 2026 ರ ಆರ್ಥಿಕ ಸಮೀಕ್ಷೆ ಗುರುವಾರ ಹೇಳಿದೆ. ಈ ಮೂಲಕ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ಗೃಹಲಕ್ಷ್ಮಿಯಂಥ ನೇರ ನಗದು ವರ್ಗಾವಣೆ ಯೋಜನೆಗಳತ್ತ ಚಾಟಿ ಬೀಸಿದೆ.
ಗುರುವಾರ ಸಮೀಕ್ಷೆ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಅಂಶವನ್ನು ಒತ್ತಿ ಹೇಳಿದರು.
‘ಇಂಥ ಯೋಜನೆಗಳಿಂದ ತಕ್ಷಣಕ್ಕೆ ಪ್ರಯೋಜನಗಳು ಲಭಿಸಬಹುದು. ಆದರೆ ಇದು, ರಾಜ್ಯ ಸರ್ಕಾರಗಳಲ್ಲಿ ಹಣಕಾಸು ಲಭ್ಯತೆಯನ್ನು ದುರ್ಬಲಗೊಳಿಸುತ್ತವೆ ಮತ್ತು ಅಭಿವೃದ್ಧಿಗೆ ಬಳಸುವ ಹಣವನ್ನು ಈ ಯೋಜನೆಗಳಿಗೆ ಬಳಸಿದರೆ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ’ ಎಂದು ಸಮೀಕ್ಷೆ ಎಚ್ಚರಿಸಿದೆ.
‘ನೇರ ನಗದು ವರ್ಗ ಯೋಜನೆಗಳಿಗೆ, ವಿಶೇಷವಾಗಿ ಮಹಿಳೆಯರಿಗೆ, 2026ರ ಹಣಕಾಸು ವರ್ಷದಲ್ಲಿ 1.7 ಲಕ್ಷ ಕೋಟಿ ರು. ತೆಗೆದಿರಿಸಲಾಗಿದೆ ಎಂದು ಅಂದಾಜಿಸಲಾಗಿದೆ. 2023 ಹಣಕಾಸು ವರ್ಷದಿಂದ ಮತ್ತು 2026 ಹಣಕಾಸು ವರ್ಷದ ನಡುವೆ ಅವುಗಳನ್ನು ಅನುಷ್ಠಾನಗೊಳಿಸುವ ರಾಜ್ಯಗಳ ಸಂಖ್ಯೆ 5 ಪಟ್ಟು ಹೆಚ್ಚಾಗಿದೆ, ಈ ರಾಜ್ಯಗಳಲ್ಲಿ ಸುಮಾರು ಅರ್ಧದಷ್ಟು ರಾಜ್ಯಗಳು ಆದಾಯ ಕೊರತೆಯಲ್ಲಿವೆ ಎಂದು ಅಂದಾಜಿಸಲಾಗಿದೆ ಎಂದು ನವದೆಹಲಿ ಮೂಲದ ಥಿಂಕ್ ಥ್ಯಾಂಕ್ ಎಂಬ ಪಿಆರ್‌ಎಸ್ ಲೆಜಿಸ್ಲೇಚರ್ ತಿಳಿಸಿದೆ’ ಎಂದು ಸಮೀಕ್ಷೆ ನುಡಿದಿದೆ.
ಇತ್ತೀಚಿನ ಸಂಶೋಧನೆಯನ್ನು ಉಲ್ಲೇಖಿಸಿ, ‘ಅಂತಹ ವರ್ಗಾವಣೆಗಳು ಒಟ್ಟು ರಾಜ್ಯ ದೇಶೀಯ ಉತ್ಪನ್ನದ (ಜಿಎಸ್‌ಡಿಪಿ) ಶೇ.0.19 ರಿಂದ 1.25 ರವರೆಗೆ ಇರುತ್ತವೆ ಮತ್ತು ಒಟ್ಟು ರಾಜ್ಯ ಬಜೆಟ್ ವೆಚ್ಚದ ಶೇ.8.26 ರಷ್ಟನ್ನು ಹೊಂದಬಹುದು’ ಎಂದು ಸಮೀಕ್ಷೆಯು ಗಮನಿಸಿದೆ ಆದಾಗ್ಯೂ, ಅವುಗಳ ತ್ವರಿತ ಬೆಳವಣಿಗೆಯು ಹಣಕಾಸು ಸ್ಥಿರತೆ ಮೇಲೆ ಪರಿಣಾಮ ಬೀರುತ್ತದೆ’ ಎಂದು ಎಚ್ಚರಿಸಿದೆ.
ರಾಜ್ಯಗಳ ಒಟ್ಟಾರೆ ಒಟ್ಟು ಹಣಕಾಸು ಕೊರತೆಯು 2022ರ ವಿತ್ತೀಯ ವರ್ಷದಲ್ಲಿ ಜಿಡಿಪಿಯ ಶೇ.2.6ರಷ್ಟಿತ್ತು.. ಅದು 2025ರಲ್ಲಿ ಶೇ.3.2ಕ್ಕೆ ಏರಿದೆ. ಆದರೆ ಒಟ್ಟು ಆದಾಯ ಕೊರತೆಯು ಜಿಡಿಪಿಯ ಶೇ.0.4ರಿಂದ 0.7ಕ್ಕೆ ಏರಿದೆ. ಇದು ಆದಾಯ ವೆಚ್ಚಕ್ಕೆ ಹಣಕಾಸು ಒದಗಿಸಲು ನಿರಂತರ ಸಾಲವನ್ನು ಸೂಚಿಸುತ್ತದೆ’ ಎಂದಿದೆ.
ಏತನ್ಮಧ್ಯೆ, ಬಾಕಿ ಇರುವ ಸಾಲವು 2025ರ ವಿತ್ತೀಯ ವರ್ಷದಲ್ಲಿ ಜಿಡಿಪಿ ಯ ಶೇಕಡಾ 28.1 ರಷ್ಟಿತ್ತು ಎಂದು ಅದು ಹೇಳಿದೆ.
ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಹಲವು ರಾಜ್ಯಗಳು ಭೂ ಆಡಳಿತ, ಮಾರುಕಟ್ಟೆಗಳು, ನೀರು ನಿರ್ವಹಣೆ, ತಂತ್ರಜ್ಞಾನ ಅಳವಡಿಕೆ ಮತ್ತು ಬೆಳೆ ವೈವಿಧ್ಯೀಕರಣ ಒಳಗೊಂಡಂತೆ ಉದ್ದೇಶಿತ ಕೃಷಿ ಸುಧಾರಣೆ ಕೈಗೊಂಡಿವೆ. ಈ ಉಪಕ್ರಮಗಳು ಕೃಷಿ ಫಲಿತಾಂಶಗಳನ್ನು ಸುಧಾರಿಸಿವೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದು, ಕರ್ನಾಟಕದ ಒಂದು ಉಪಕ್ರಮವನ್ನು ಉದಾಹರಿಸಿದ್ದಾರೆ. ಕರ್ನಾಟಕದ FRUITS (ಫ್ರುಟ್ಸ್) ವೇದಿಕೆಯು ಸುಮಾರು 55 ಲಕ್ಷ ರೈತರು ಮತ್ತು ಬಹು ಯೋಜನೆಗಳನ್ನು ಒಳಗೊಂಡು ನೇರ ನಗದು ವರ್ಗಾವಣೆ (ಡಿಬಿಟಿ), ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಂಗ್ರಹಣೆ ಮತ್ತು ಬೆಳೆ ಸಮೀಕ್ಷೆಗಳನ್ನು ಬೆಂಬಲಿಸುವ ಏಕೀಕೃತ ರೈತ ದತ್ತಾಂಶವನ್ನು ಸೃಜಿಸಿದೆ ಎಂದು ಅವರು ಹೇಳಿದ್ದಾರೆ.
ನವದೆಹಲಿ: ಅಂತಾರಾಷ್ಟ್ರೀಯ ಏರಿಳಿತಗಳು, ವ್ಯಾಪಾರ ಆಘಾತಗಳ ನಡುವೆಯೂ ನಡುವೆಯೂ 2026-27ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಉತ್ತಮವಾಗಿರಲಿದೆ. ಮುಂದಿನ ವಿತ್ತ ವರ್ಷದಲ್ಲಿ ದೇಶ ಶೇ.6.8ರಿಂದ ಶೇ.7.2ರ ನಡುವೆ ಆರ್ಥಿಕ ಬೆಳವಣಿಗೆ ದಾಖಲಿಸಲಿದೆ. ಅಮೆರಿಕದ ಜತೆಗೆ ನಡೆಯುತ್ತಿರುವ ವ್ಯಾಪಾರ ಒಪ್ಪಂದ ಮಾತುಕತೆ ಈ ವರ್ಷದಲ್ಲಿ ಅಂತಿಮ ರೂಪಕ್ಕೆ ಬರುವ ನಿರೀಕ್ಷೆ ಇದ್ದು, ಇದು ಅನಿಶ್ಚಿತತೆಯನ್ನು ಕೊಂಚ ಮಟ್ಟಿಗೆ ತಗ್ಗಿಸಬಹುದು ಎಂದು ಎಂದು ಆರ್ಥಿಕ ಸಮೀಕ್ಷಾ ವರದಿ ಹೇಳಿದೆ.
ನರೇಗಾದಲ್ಲಿ ಕೆಲಸದ ಬೇಡಿಕೆ ಕುಸಿತ, ಹೀಗಾಗಿ ಜಿರಾಮ್‌ಜಿ
ಯೂರಿಯಾ ರಸಗೊಬ್ಬರ ಮಾರಾಟ ದರ ಕೊಂಚ ಏರಿಕೆಗೆ ಸಲಹೆ
ಪೀಕ್ ಅವರಲ್ಲಿ ವಾಹನಗಳಿಂದ ಹೆಚ್ಚು ಶುಲ್ಕ ವಸೂಲಿ ಪ್ರಸ್ತಾಪ
ಜಂಕ್ ಫುಡ್ ಜಾಹೀರಾತಿಗೆ ರಾತ್ರಿ 6ರಿಂದ 11ರವೆರೆಗೆ ನಿರ್ಬಂಧ
ಗೃಹ ಸಾಲ ಬಾಕಿ 4 ಪಟ್ಟು ಹೆಚ್ಚಳ, ₹37 ಲಕ್ಷ ಕೋಟಿಗೆ ಏರಿಕೆ
ರುಪಾಯಿ ಮೌಲ್ಯ ಕುಸಿತ ದೇಶದ ಆರ್ಥಿಕತೆಯ ಪ್ರತಿಬಿಂಬವಲ್ಲ