ಪಟನಾ: ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದ ವೇಳೆ ನಡೆದಿದೆ ಎನ್ನಲಾಗಿರುವ ‘ನೌಕರಿಗಾಗಿ ಭೂಮಿ’ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಲಾಲು ಆಪ್ತ ಅಮಿತ್ ಕಟ್ಯಾಲ್‌ರನ್ನು ಬಂಧಿಸಿದೆ.
ಪಟನಾ: ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದ ವೇಳೆ ನಡೆದಿದೆ ಎನ್ನಲಾಗಿರುವ ‘ನೌಕರಿಗಾಗಿ ಭೂಮಿ’ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಲಾಲು ಆಪ್ತ ಅಮಿತ್ ಕಟ್ಯಾಲ್‌ರನ್ನು ಬಂಧಿಸಿದೆ.
ಅಮಿತ್ ಕಟ್ಯಾಲ್ ಎಕೆ ಇನ್ಫೋಟೆಕ್ ಎಂಬ ಖಾಸಗಿ ಕಂಪನಿ ಮಾಲೀಕರಾಗಿದ್ದು, ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಇ.ಡಿ ಆರೋಪಿಸಿದೆ. ಇದಕ್ಕಾಗಿ ವಿಚಾರಣೆಗೆ ಹಾಜರಾಗುವಂತೆ ಎರಡು ತಿಂಗಳಿನಿಂದ ಹಲವು ಬಾರಿ ನೋಟಿಸ್ ನೀಡಿದ್ದರು, ಅಮಿತ್ ಗೈರು ಹಾಜರಾಗಿದ್ದರು. ಈ ಕಾರಣವಾಗಿ ಅವರನ್ನು ಇ.ಡಿ. ಬಂಧಿಸಿದೆ.
ಅಮಿತ್ ಅವರು ಲಾಲು ಹಾಗೂ ಪುತ್ರ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ರಿಗೆ ಆಪ್ತರಾಗಿದ್ದು, ಅಕ್ರಮ ಹಣ ವರ್ಗದಲ್ಲಿ ಇವರನ್ನು ಬಳಸಿಕೊಳ್ಳಲಾಗಿದೆ ಎಂದು ಇ.ಡಿ. ಆರೋಪಿಸಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.