ಇ.ಡಿ.ಯಿಂದ ಅನಿಲ್‌ ಅಂಬಾನಿಯ ₹3716 ಕೋಟಿ ಮೌಲ್ಯದ ಮನೆ ಜಪ್ತಿ

KannadaprabhaNewsNetwork |  
Published : Feb 26, 2026, 02:00 AM ISTUpdated : Feb 26, 2026, 05:06 AM IST
anil ambani abode house

ಸಾರಾಂಶ

ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನ ಅಡಿಯಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಯವರ ಮುಂಬೈನಲ್ಲಿರುವ 17 ಅಂತಸ್ತಿನ 3,716 ಕೋಟಿ ರು. ಮೌಲ್ಯದ ಐಷಾರಾಮಿ ಮನೆ ‘ಅಬೋಡ್’ ಅನ್ನು ಬುಧವಾರ ಮುಟ್ಟುಗೋಲು ಹಾಕಿಕೊಂಡಿದೆ.  

 ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನ ಅಡಿಯಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಯವರ ಮುಂಬೈನಲ್ಲಿರುವ 17 ಅಂತಸ್ತಿನ 3,716 ಕೋಟಿ ರು. ಮೌಲ್ಯದ ಐಷಾರಾಮಿ ಮನೆ ‘ಅಬೋಡ್’ ಅನ್ನು ಬುಧವಾರ ಮುಟ್ಟುಗೋಲು ಹಾಕಿಕೊಂಡಿದೆ. ಈ ಮೂಲಕ ಇ.ಡಿ.ಯಿಂದ ಮುಟ್ಟುಗೋಲಾದ ಅಂಬಾನಿ ಆಸ್ತಿಯ ಒಟ್ಟು ಮೌಲ್ಯ 15,700 ಕೋಟಿ ರು.ಗೆ ಏರಿಕೆಯಾಗಿದೆ.

3,000 ಕೋಟಿ ರು. ಸಾಲವನ್ನು ಬೇರೆಡೆಗೆ ತಿರುಗಿಸಿದ ಆರೋಪ

2017ರಿಂದ 2019ರ ನಡುವೆ ಯೆಸ್ ಬ್ಯಾಂಕ್ ರಿಲಯನ್ಸ್ ಗ್ರೂಪ್ ಕಂಪನಿಗಳಿಗೆ ನೀಡಿದ ಸುಮಾರು 3,000 ಕೋಟಿ ರು. ಸಾಲವನ್ನು ಬೇರೆಡೆಗೆ ತಿರುಗಿಸಿದ ಆರೋಪ ಹಿನ್ನೆಲೆಯಲ್ಲಿ ಇ.ಡಿ. ತನಿಖೆ ನಡೆಸುತ್ತಿದೆ. ಯೆಸ್​ ಬ್ಯಾಂಕ್​ನಿಂದ ಅಕ್ರಮವಾಗಿ ಸಾಲ ಪಡೆದಿರುವುದು ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಆರ್ಥಿಕ ನಿಯಮಗಳನ್ನು ಉಲ್ಲಂಘಿಸಿರುವ ಆರೋಪವೂ ಅನಿಲ್‌ ಅಂಬಾನಿ ಮೇಲಿದೆ.

ವಿಚಾರಣೆಗೆ ಹಾಜರು ನಿರೀಕ್ಷೆ:

 ಅಂಬಾನಿ 2ನೇ ಸುತ್ತಿನ ವಿಚಾರಣೆಗಾಗಿ ದೆಹಲಿಯಲ್ಲಿ ಇ.ಡಿ ಮುಂದೆ ಹಾಜರಾಗುವ ನಿರೀಕ್ಷೆಯಿದೆ. ಮೊದಲು 2025ರ ಆಗಸ್ಟ್‌ನಲ್ಲಿ ಹಾಜರಾಗಿ ಹೇಳಿಕೆಯನ್ನು ದಾಖಲಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಿಎಸ್ಸೆನ್ನೆಲ್‌ ನಿರ್ದೇಶಕನ ಪ್ರಯಾಗ್‌ರಾಜ್‌ಗೆ ‘ಐಷಾರಾಮಿ ಭೇಟಿ’ ವಿವಾದ!
ಎಐನಿಂದ ಕರ್ನಾಟಕ ಐಟಿ ಕಂಪನಿಗಳಿಗೆ ಭಾರೀ ಕುತ್ತು-ಟಿಸಿಎಸ್‌, ವಿಪ್ರೋ, ಇನ್ಫೋಸಿಸ್‌ ಸೇವೆ ಎಐನಿಂದಲೇ ಸಾಧ್ಯ