;Resize=(412,232))
ನವದೆಹಲಿ: ಕಳೆದ ಕೆಲ ತಿಂಗಳಿಂದ ಭಾರತ ಸೇರಿ ಹಲವು ರಾಷ್ಟ್ರಗಳಲ್ಲಿ ಜನರ ಬೆವರಿಳಿಸುತ್ತಿರುವ ಎಲ್ ನಿನೋ, ಮುಂದಿನ ವರ್ಷದ ಫೆಬ್ರವರಿಯ ವರೆಗೆ ಮುಂದುವರಿಯಲಿದೆ. ಇಡೀ ವಿಶ್ವಕ್ಕೇ ಇದು ಆವರಿಸಿದ್ದು, ಭೂಮಿಯ ಬಹುತೇಕ ಭಾಗವನ್ನು ಸುಡಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಈ ವರ್ಷದ ಎನ್ ನಿನೋ 1950ರ ನಂತರ ಕಂಡುಬಂದ ಅತ್ಯಂತ ಪ್ರಬಲ ಬೇಸಿಗೆಗಳಲ್ಲಿ ಒಂದು ಎಂದು ವಿಶ್ವಸಂಸ್ಥೆ ಹೇಳಿದೆ. ಇದೇ ವೇಳೆ ಇದನ್ನು ‘ಮಾನವರಿಂದಾದ ಹವಾಮಾನ ಬದಲಾವಣೆಯ ಪರಿಣಾಮ’ ಎಂದಿರುವ ವಿಶ್ವ ಹವಾಮಾನ ಸಂಸ್ಥೆ,‘ ಎಲ್ ನಿನೋದ ಕೇಂದ್ರಬಿಂದುವಾಗಿರುವ ಮಧ್ಯ ಮತ್ತು ಪೂರ್ವ ಉಷ್ಣವಲಯದ ಪೆಸಿಫಿಕ್ ಪ್ರದೇಶದಲ್ಲಿ, ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಸಮುದ್ರದ ಮೇಲ್ಮೈ ತಾಪ ಸಾಮಾನ್ಯಕ್ಕಿಂತ 3.7 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಲಿದೆ’ ಎಂದು ಎಚ್ಚರಿಸಿದೆ.
‘ಚಳಿಗಾಲದಲ್ಲೂ ಎಲ್ ನಿನೊ ಪ್ರಬಲವಾಗಿರಲಿದ್ದು, ಅಮೆರಿಕವನ್ನು ಹೊರತುಪಡಿಸಿ ಎಲ್ಲೆಡೆ ಉಷ್ಣತೆ ಹೆಚ್ಚಾಗುತ್ತದೆ’ ಎಂದು ಹವಾಮಾನ ತಜ್ಞ ರಯಾನ್ ಮೌ ಎಚ್ಚರಿಸಿದ್ದಾರೆ ಹಾಗೂ ಇದಕ್ಕೆ ಪೂರಕವಾಗಿ, ಇಡೀ ಭೂಮಿ ಬಿಸಿಲಿನಿಂದಾಗಿ ಕೆಂಡದಂತೆ ಕೆಂಪಾಗಿರುವ ರೀತಿಯ ನಕ್ಷೆಯನ್ನು ಹಂಚಿಕೊಂಡಿದ್ದಾರೆ.