ಪಂಚಾಯತ್ ಸಮಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತ ಕೆಲವೇ ಗಂಟೆಗಳಲ್ಲಿ, ರಾಜಸ್ಥಾನದ ಟೋಂಕ್ ಜಿಲ್ಲೆಯ ಗ್ರಾಮವೊಂದರಲ್ಲಿ ಅಳವಡಿಸಲಾಗಿದ್ದ 50 ಬೀದಿ ದೀಪಗಳನ್ನು ವಿದ್ಯುತ್ ಇಲಾಖೆ ಸಿಬ್ಬಂದಿ ತೆರವುಗೊಳಿಸಿದ ಆರೋಪ ಕೇಳಿಬಂದಿದೆ.
ಜೈಪುರ: ಪಂಚಾಯತ್ ಸಮಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತ ಕೆಲವೇ ಗಂಟೆಗಳಲ್ಲಿ, ರಾಜಸ್ಥಾನದ ಟೋಂಕ್ ಜಿಲ್ಲೆಯ ಗ್ರಾಮವೊಂದರಲ್ಲಿ ಅಳವಡಿಸಲಾಗಿದ್ದ 50 ಬೀದಿ ದೀಪಗಳನ್ನು ವಿದ್ಯುತ್ ಇಲಾಖೆ ಸಿಬ್ಬಂದಿ ತೆರವುಗೊಳಿಸಿದ ಆರೋಪ ಕೇಳಿಬಂದಿದೆ.
ಪೀಪ್ಲು ಪಂಚಾಯತ್ ಸಮಿತಿಯ ವಾರ್ಡ್ 2ರಲ್ಲಿ ತೆರವು
ಪೀಪ್ಲು ಪಂಚಾಯತ್ ಸಮಿತಿಯ ವಾರ್ಡ್ 2ರಲ್ಲಿ ಸ್ಥಳೀಯ ಬಿಜೆಪಿ ಶಾಸಕ ರಾಮ್ಸಹಾಯ್ ವರ್ಮಾರ ಆಪ್ತ ಸಹಾಯಕ ಅಲೋಕ್ರ ಪತ್ನಿ ಪ್ರಿಯಾಂಕಾ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 751 ಮತಗಳ ಅಂತರದಿಂದ ಸೋಲು ಕಂಡಿದ್ದರು. ಅದರ ಬೆನ್ನಲ್ಲೇ ಗ್ರಾಮದಲ್ಲಿ ಅಳವಡಿಸಿದ್ದ ಬೀದಿ ದೀಪ ತೆರವುಗೊಳಿಸಲಾಗಿದೆ.
ಬೀದಿ ದೀಪಗಳನ್ನು ಯಾವುದೇ ಅನುಮತಿ ಇಲ್ಲದೇ ಅಳವಡಿಸಲಾಗಿತ್ತು
ಆದರೆ ಬೀದಿ ದೀಪಗಳನ್ನು ಯಾವುದೇ ಅನುಮತಿ ಇಲ್ಲದೇ ಅಳವಡಿಸಲಾಗಿತ್ತು. ಹೀಗಾಗಿ ಅವುಗಳನ್ನು ತೆರವುಗೊಳಿಸಲಾಗಿದೆ ಎಂದು ಪೀಪ್ಲುವಿನ ವಿದ್ಯುತ್ ಇಲಾಖೆ ಸ್ಪಷ್ಟಪಡಿಸಿದೆ. ಮತ್ತೊಂದೆಡೆ ಶಾಸಕ ವರ್ಮಾ ಕೂಡಾ ಘಟನೆಯಲ್ಲಿ ತಮ್ಮ ಅಥವಾ ತಮ್ಮ ಆಪ್ತ ಸಹಾಯಕನ ಕೈವಾಡ ಇಲ್ಲ ಎಂದಿದ್ದಾರೆ.
ವಾರ್ಡ್ನ ವಿವಿಧ ಬೀದಿ, ವಸತಿ ಪ್ರದೇಶಗಳಿಗೆ ಬೆಳಕು ನೀಡಲು ಚುನಾವಣಾ ಪ್ರಚಾರದ ಸಮಯದಲ್ಲಿ ಅಂದರೆ ಅ.24 ರಂದು ಈ ಬೀದಿದೀಪ ಅಳವಡಿಸಲಾಗಿತ್ತು.
