ಶೇ.65ರಷ್ಟು ವೃದ್ಧರಿಗೆ ಆದಾಯವಿಲ್ಲ: ವರದಿ

KannadaprabhaNewsNetwork |  
Published : Jun 16, 2024, 01:49 AM ISTUpdated : Jun 16, 2024, 04:13 AM IST
ಹಿರಿಯ ನಾಗರಿಕರು | Kannada Prabha

ಸಾರಾಂಶ

ಪ್ರಾಯಕ್ಕೆ ಬರುವವರೆಗೂ ತಮ್ಮನ್ನು ಸಾಕಿ ಸಲುಹಿದ ತಂದೆ-ತಾಯಿಯರಿಂದ ಅವರ ಇಳಿವಯಸ್ಸಿನಲ್ಲೂ ಮನೆಗೆಲಸ ಮಾಡುವಂತೆ ಪುತ್ರ ಮತ್ತು ಸೊಸೆಯರು ಶೋಷಣೆ ಮಾಡುತ್ತಿದ್ದಾರೆ.

ನವದೆಹಲಿ: ಪ್ರಾಯಕ್ಕೆ ಬರುವವರೆಗೂ ತಮ್ಮನ್ನು ಸಾಕಿ ಸಲುಹಿದ ತಂದೆ-ತಾಯಿಯರಿಂದ ಅವರ ಇಳಿವಯಸ್ಸಿನಲ್ಲೂ ಮನೆಗೆಲಸ ಮಾಡುವಂತೆ ಪುತ್ರ ಮತ್ತು ಸೊಸೆಯರು ಶೋಷಣೆ ಮಾಡುತ್ತಿದ್ದಾರೆ. ಜೊತೆಗೆ ಭಾರತದ ಶೇ.65ರಷ್ಟು ವೃದ್ಧ ತಂದೆ-ತಾಯಿಯರಿಗೆ ಯಾವುದೇ ಆರ್ಥಿಕ ಆದಾಯವಿಲ್ಲ ಎಂದು ‘ಏಜ್‌ ಇಂಡಿಯಾ’ ಸಂಸ್ಥೆಯ ಅಧ್ಯಯನ ವರದಿ ಹೇಳಿದೆ.

‘ಭಾರತದಲ್ಲಿ ವಯಸ್ಕ ಪ್ರಾಯದವರಿಗಿರುವ ಸವಾಲುಗಳು ಮತ್ತು ಮುನ್ನೆಚ್ಚರಿಕಾ ಕ್ರಮಗಳು’ ಎಂಬ ಸಮೀಕ್ಷೆಯನ್ನು ಏಜ್‌ ಇಂಡಿಯಾ ಎಂಬ ಸಂಸ್ಥೆ ಪ್ರಕಟಿಸಿದ್ದು, ಅದರಲ್ಲಿ ಶೇ.38ರಷ್ಟು ಮಹಿಳಾ ವೃದ್ಧರು ಮತ್ತು ಶೇ.27ರಷ್ಟು ಪುರುಷ ವೃದ್ಧರು ಶೂನ್ಯ ಆದಾಯ ಹೊಂದಿದ್ದಾರೆ. ಶೇ.40ರಷ್ಟು ಅನಕ್ಷರಸ್ಥ ಮತ್ತು ಶೇ.29ರಷ್ಟು ಸಾಕ್ಷರ ವೃದ್ಧ ಪೋಷಕರು ಯಾವುದೇ ಆದಾಯ ಹೊಂದಿಲ್ಲ ಎಂದು ವರದಿ ಹೇಳಿದೆ.

ಶೇ.61ರಷ್ಟು ವೃದ್ಧರು ಮೊಮ್ಮಕ್ಕಳನ್ನು ಆರೈಕೆ ಮಾಡುವುದೇ ತಮ್ಮ ಕೆಲಸ ಎಂದಿದ್ದರೆ, ಶೇ.35ರಷ್ಟು ವೃದ್ಧರು ಅಡುಗೆ, ಮನೆಗೆ ಸಾಮಾನು ತರುವ ಕೆಲಸ ತಮ್ಮಂದು ಎಂದು ಹೇಳಿಕೊಂಡಿದ್ದಾರೆ.

ಜೊತೆಗೆ ಶೇ.48ರಷ್ಟು ವೃದ್ಧರು ಪುತ್ರರಿಂದ ಮತ್ತು ಶೇ.28ರಷ್ಟು ವೃದ್ಧರು ಸೊಸೆಯಂದಿರು ತಮ್ಮನ್ನು ಶೋಷಣೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಶೇ.65ರಷ್ಟು ಹಿರಿಯ ನಾಗರಿಕರಿಗೆ ಆರ್ಥಿಕ ಅಭದ್ರತೆಯಿದ್ದರೆ, ಶೇ.34ಮಂದಿಯ ಬಳಿ ಮಾತ್ರ ಆರೋಗ್ಯ ವಿಮೆಯಿದೆ. ಹಾಗೆಯೇ ಶೋಷಣೆಗೊಳಗಾಗುತ್ತಿರುವ ಪೋಷಕರ ಪೈಕಿ ಶೇ.94 ಮಂದಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಸಮೀಕ್ಷೆ ತಿಳಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ತಿರುಪತಿ ತುಪ್ಪ ಕಲಬೆರಕೆ ಗೊತ್ತಿದ್ದೂ ಟಿಟಿಡಿ ಖರೀದಿ ಮುಂದುವರಿಕೆ : ಸಿಬಿಐ
ಸಾವರ್ಕರ್‌ಗೆ ಭಾರತ ರತ್ನ ಕೊಟ್ರೆ ಪ್ರಶಸ್ತಿ ಘನತೆ ಹೆಚ್ಚಳ: ಭಾಗವತ್