ಈ ಮಧ್ಯಂತರ ಬಜೆಟ್‌ನಲ್ಲಿ 2025ನೇ ಹಣಕಾಸು ವರ್ಷಕ್ಕಾಗಿ ಸೆಮಿಕಂಡಕ್ಟರ್ ಯೋಜನೆ, ಮೊಬೈಲ್, ಐಟಿ ಹಾರ್ಡ್‌ವೇರ್, ಪಿಎಲ್‌ಐ (ಉತ್ಪಾದಕ ಆಧಾರಿತ ಪ್ರೋತ್ಸಾಹಕ) ಯೋಜನೆ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಭರ್ಜರಿ 15,500 ಕೋಟಿ ರು. ಮೀಸಲಿಡಲಾಗಿದೆ.
ಭಾರತವು ವಿದೇಶದಿಂದ ಆಮದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಭಾರತದಲ್ಲೇ ತಯಾರಿಕೆ ಮಾಡಿದರೆ ಆಯಾ ಉತ್ಪಾದಕ ಸಂಸ್ಥೆಗಳಿಗೆ ಸರ್ಕಾರವು ಪ್ರೋತ್ಸಾಹಕ ನೀಡುತ್ತದೆ.
ಈ ಪೈಕಿ ಈ ಬಾರಿಯ ಬಜೆಟ್‌ನಲ್ಲಿ ಅಸೆಂಬ್ಲಿ, ಟೆಸ್ಟ್, ಮತ್ತು ಪ್ಯಾಕೇಜಿಂಗ್ ಪ್ಲ್ಯಾಂಟ್ಸ್‌ಗಳಿಗಾಗಿ ಗುಜರಾತ್‌ನ ಮೈಕ್ರಾನ್, ಟಾಟಾ ಗ್ರೂಪ್, ಎಚ್‌ಸಿಎಲ್ ಮತ್ತು ಫಾಕ್ಸ್‌ಕಾನ್ ಸೇರಿ ಇತರ ತಯಾರಕರಗಳಿಗೆ ಒಟ್ಟು 4,203 ಕೋಟಿ ರು. ನಿಗದಿಪಡಿಸಲಾಗಿದೆ.
ಇನ್ನು ವಿವಿಧ ಸೆಮಿಕಂಡಕ್ಟರ್ ಯೋಜನೆಗಳು ಒಟ್ಟು 6,903 ಕೋಟಿ ರು.ಗಳನ್ನು ಪಡೆದಿವೆ. ಉಳಿದಂತೆ ಮೊಬೈಲ್ ಉತ್ಪಾದನೆ ಪಿಎಲ್‌ಐಗೆ 6,125 ಕೋಟಿ ರು. ಹಾಗೂ ಎಲೆಕ್ಟ್ರಾನಿಕ್ಸ್ ಚಿಪ್ ಪ್ಲ್ಯಾಂಟ್‌ಗಾಗಿ ಮೊಹಾಲಿಯ ಸೆಮಿಕಂಡಕ್ಟರ್ ಲ್ಯಾಬರೋಟರಿಗೆ 900 ಕೋಟಿ ರು. ನೀಡಲಾಗಿದೆ.