‘ಟೆಸ್ಲಾ ಕಂಪನಿಯು ವಿಶ್ವದ ಅತ್ಯಂತ ಬೆಲೆ ಬಾಳುವ ಕಂಪನಿಯಾಗಿ ಬೆಳೆದರೆ ಬಿಲ್‌ಗೇಟ್ಸ್‌ ಕೂಡ ದಿವಾಳಿ: ಎಲಾನ್ ಮಸ್ಕ್‌

KannadaprabhaNewsNetwork |  
Published : Dec 12, 2024, 12:31 AM ISTUpdated : Dec 12, 2024, 04:47 AM IST
ಮಸ್ಕ್‌ | Kannada Prabha

ಸಾರಾಂಶ

‘ಟೆಸ್ಲಾ ಕಂಪನಿಯು ಒಂದು ವೇಳೆ ವಿಶ್ವದ ಅತ್ಯಂತ ಬೆಲೆ ಬಾಳುವ ಕಂಪನಿಯಾಗಿ ಬೆಳೆದರೆ, ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಕೂಡ ದಿವಾಳಿಯಾಗಬಹುದು’ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹೇಳಿದ್ದಾರೆ.

ನವದೆಹಲಿ: ‘ಟೆಸ್ಲಾ ಕಂಪನಿಯು ಒಂದು ವೇಳೆ ವಿಶ್ವದ ಅತ್ಯಂತ ಬೆಲೆ ಬಾಳುವ ಕಂಪನಿಯಾಗಿ ಬೆಳೆದರೆ, ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಕೂಡ ದಿವಾಳಿಯಾಗಬಹುದು’ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹೇಳಿದ್ದಾರೆ.ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು ಈ ಮಾತು ಹೇಳಿದ್ದಾರೆ

ಪ್ರಸ್ತುತ ಟೆಸ್ಲಾದ ಮಾರುಕಟ್ಟೆ ಮೌಲ್ಯವು 1.251 ಶತಕೋಟಿ ಡಾಲರ್‌ ಇದೆ. 3.729 ಶತಕೋಟಿ ಹೊಂದಿರುವ ವಿಶ್ವದ ಬೆಲೆಬಾಳುವ ಕಂಪನಿ ಆ್ಯಪಲ್‌ಗಿಂತ ಹಿಂದುಳಿದಿದೆ. ಟೆಸ್ಲಾ ಅಗ್ರ ಸ್ಥಾನವನ್ನು ಪಡೆಯಲು ಶೇ.200ರಷ್ಟು ಬೆಳೆಯುವ ಅಗತ್ಯವಿದೆ.

ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಘನತೆ, ಗೌರವ ಇರುತ್ತದೆ: ಕೇರಳ ಹೈ

ಕೊಚ್ಚಿ: 2007ರಲ್ಲಿ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಸಂಬಂಧ ಕೇರಳ ಹೈಕೋರ್ಟ್‌ ನಟ ಹಾಗೂ ನಿರ್ದೇಶಕ ಬಾಲಚಂದ್ರ ಮೆನನ್‌ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಈ ವೇಳೆ, ‘ಘನತೆ ಗೌರವಗಳು ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಇರುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

ಕೇರಳ ಚಿತ್ರರಂಗದಲ್ಲಿ ನಟಿಯರ ಶೋಷಣೆ ಕುರಿತ ನ್ಯಾ। ಹೇಮಾ ವರದಿ ಬಿಡುಗಡೆಯಾದ ಬೆನ್ನಲ್ಲೇ 17 ವರ್ಷಗಳ ಹಿಂದೆ ನಡೆದ ಘಟನೆ ಸಂಬಂಧ ದೂರು ದಾಖಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾ। ಕುನ್ಹಿಕೃಷ್ಣನ್‌, ‘ಘಟನೆ ನಡೆದ 17 ವರ್ಷಗಳ ಬಳಿಕ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಆರೋಪಿಯಾಗಿರುವ ಮೆನನ್‌ ಪ್ರಸಿದ್ಧ ಕಲಾವಿದರಾಗಿದ್ದು, 20ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಅವರಿಗೆ ಪದ್ಮ ಶ್ರೀ ಕೂಡ ಲಭಿಸಿದೆ’ ಎಂದರು.

ಬೇಗ ಜಾಮೀನು ಅರ್ಜಿ ವಿಚಾರಣೆ ಕೋರಿದ್ದ ಚಿನ್ಮಯ್‌ ದಾಸ್ ಅರ್ಜಿ ವಜಾ

ಢಾಕಾ: ಬಾಂಗ್ಲಾದೇಶದಲ್ಲಿ ಬಂಧಿತರಾಗಿರುವ ಇಸ್ಕಾನ್ ಸನ್ಯಾಸಿ ಚಿನ್ಮಯ್ ದಾಸ್‌ ಅವರು ಬೇಗ ತಮ್ಮ ಜಾಮೀನು ಅರ್ಜಿಯ ವಿಚಾರಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಗ್ಲಾ ಕೋರ್ಟ್‌ ಬುಧವಾರ ವಜಾಗೊಳಿಸಿದೆ.

ಈ ಹಿಂದೆ ಡಿ.3 ರಂದು ಚಿನ್ಮಯ್‌ ದಾಸ್‌ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು. ಆದರೆ ಹಲ್ಲೆಗೊಳಗಾದ ಕಾರಣ ಅವರ ಪರ ವಕೀಲ ಸುಭಾಶಿಶ್‌ ಶರ್ಮಾ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟು ಜ.2ಕ್ಕೆ ವಿಚಾರಣೆ ಮುಂದೂಡಿತ್ತು. ಆದರೆ ಈ ಅರ್ಜಿಯ ತ್ವರಿತ ವಿಚಾರಣೆಗೆ ದಾಸ್‌ ಕೋರಿದ್ದರು.ಚಿನ್ಮಯ್ ದಾಸ್‌ ಅವರು ಅವರು ತಮ್ಮ ಪರವಾಗಿ ವಕೀಲರ ಪತ್ರವನ್ನು ಹೊಂದಿಲ್ಲ ಎನ್ನುವ ಕಾರಣಕ್ಕೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಚಿತ್ತಗಾಂಗ್ ಮೆಟ್ರೋಪಾಲಿಟಿನ್‌ ಕೋರ್ಟು ಮನವಿಯನ್ನು ತಿರಸ್ಕರಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ನಾನು ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಬಳಸಲ್ಲ: ದೋವಲ್‌
ಅಮೆರಿಕ ನಿಗೂಢ ಅಸ್ತ್ರದಿಂದ ವೆನಿಜುವೆಲನ್ನರಿಗೆ ರಕ್ತ ವಾಂತಿ!