ಇಪಿಎಫ್‌ಒ: ವೇತನ ವ್ಯಾಪ್ತಿ ₹25000ಕ್ಕೆ ಹೆಚ್ಚಳ

Published : Sep 17, 2026, 06:29 AM IST
EPFO

ಸಾರಾಂಶ

ಮಾಸಿಕ 25 ಸಾವಿರ ರು.ವರೆಗೆ ವೇತನ ಪಡೆಯುವ ಹೆಚ್ಚಿನ ಉದ್ಯೋಗಿಗಳಿಗೆ ಖುಷಿಯ ಸುದ್ದಿ. ಕಡ್ಡಾಯವಾಗಿ ಇಪಿಎಫ್‌ಒ (ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ವ್ಯಾಪ್ತಿಯಡಿ ಬರುವ ನೌಕರರ ವೇತನ ಮಿತಿಯನ್ನು ಮಾಸಿಕ 15 ಸಾವಿರದಿಂದ 25 ಸಾವಿರ ರು.ಗೆ ಏರಿಸುವ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ.

ನವದೆಹಲಿ: ಮಾಸಿಕ 25 ಸಾವಿರ ರು.ವರೆಗೆ ವೇತನ ಪಡೆಯುವ ಹೆಚ್ಚಿನ ಉದ್ಯೋಗಿಗಳಿಗೆ ಖುಷಿಯ ಸುದ್ದಿ. ಕಡ್ಡಾಯವಾಗಿ ಇಪಿಎಫ್‌ಒ (ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ವ್ಯಾಪ್ತಿಯಡಿ ಬರುವ ನೌಕರರ ವೇತನ ಮಿತಿಯನ್ನು ಮಾಸಿಕ 15 ಸಾವಿರದಿಂದ 25 ಸಾವಿರ ರು.ಗೆ ಏರಿಸುವ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಅರ್ಥಾತ್ ಇನ್ನು 25 ಸಾವಿರ ರು.ವರೆಗೆ ವೇತನ ಪಡೆಯಲಿರುವ ನೌಕರರಿಗೆ ಸ್ವಯಂಚಾಲಿತವಾಗಿ ಪಿಎಫ್‌ ಸೌಲಭ್ಯ ಅನ್ವಯವಾಗಲಿದೆ.

ಈ ರೀತಿ ಇಪಿಎಫ್‌ಒ ಕಡ್ಡಾಯ ವೇತನ ಮಿತಿ ಹೆಚ್ಚಳ ಪ್ರಕ್ರಿಯೆ ನಡೆಯುತ್ತಿರುವುದು 12 ವರ್ಷಗಳಲ್ಲಿ ಇದೇ ಮೊದಲಾಗಿದೆ.

ಕೇಂದ್ರದ ಈ ನಿರ್ಧಾರದಿಂಗಾಗಿ ಸುಮಾರು 51ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ನೌಕರರು ಕಡ್ಡಾಯವಾಗಿ ಇಪಿಎಫ್‌ಒ ವ್ಯಾಪ್ತಿಗೆ ಬರಲಿದ್ದಾರೆ. ಈ ಮೂಲಕ ಇನ್ನಷ್ಟು ನೌಕರರಿಗೆ ಸಾಮಾಜಿಕ ಭದ್ರತೆ ಸಿಕ್ಕಂತಾಗಲಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

2004ರಿಂದ 2014ರ ವರೆಗೆ ಇಪಿಎಫ್‌ಒ ಕಡ್ಡಾಯ ವೇತನ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆದರೆ, 2014ರ ಸೆಪ್ಟೆಂಬರ್‌ನಲ್ಲಿ ಈ ಮಿತಿಯನ್ನು 15 ಸಾವಿರಕ್ಕೆ ಏರಿಸಲಾಗಿತ್ತು. ಇದೀಗ ಈ ಮಿತಿಯನ್ನು ಮಾಸಿಕ 25 ಸಾವಿರ ರು.ಗೆ ಹೆಚ್ಚಿಸಲಾಗಿದೆ. ಹೆಚ್ಚುತ್ತಿರುವ ವೇತನ ಸೇರಿ ಸದ್ಯದ ವಾಸ್ತವ ಸ್ಥಿತಿಯನ್ನು ಆಧರಿಸಿ ಈ ಬದಲಾವಣೆ ಮಾಡಲಾಗಿದೆ.

ಏನು ಅನುಕೂಲ?:

ಈವರೆಗೆ 15 ಸಾವಿರಕ್ಕಿಂತ ಹೆಚ್ಚಿನ ವೇತನ ಹೊಂದಿರುವ ವ್ಯಕ್ತಿಗೆ ಇಪಿಎಫ್‌ ಸ್ವಯಂಚಾಲಿತವಾಗಿ ಅನ್ವಯ ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಪ್ರೊವಿಡೆಂಟ್‌ ಫಂಡ್‌, ಇನ್ಶೂರೆನ್ಸ್‌ನಂಥ ಸೌಲಭ್ಯಗಳಿಂದ ವಂಚಿತರಾಗಬೇಕಿತ್ತು. ಇದೀಗ ವೇತನ ಮಿತಿಯನ್ನು ಮಾಸಿಕ 25 ಸಾವಿರ ರು.ಗೆ ಏರಿಸಿರುವುದರಿಂದ ಇನ್ನಷ್ಟು ಮಂದಿ ಇಪಿಎಫ್‌ಒನ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲು ಅರ್ಹತೆ ಪಡೆಯಲಿದ್ದಾರೆ.

11,339 ಕೋಟಿ ರು.ಗೆ ಏರಿಕೆ

ಇಪಿಎಫ್‌ಒ ವೇತನ ಮಿತಿ ಹೆಚ್ಚಳ ನಿರ್ಧಾರದಿಂದಾಗಿ ಸರ್ಕಾರಕ್ಕೆ ಈವರೆಗೆ ತಗಲುತ್ತಿದ್ದ ವಾರ್ಷಿಕ 10,250 ಕೋಟಿ ರು. ವೆಚ್ಚ ಇನ್ನು 11,339 ಕೋಟಿ ರು.ಗೆ ಏರಿಕೆಯಾಗಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮುಂಬೈ ರಸ್ತೆಯಲ್ಲಿ ಭಿಕ್ಷೆ ಬೇಡಿದ ₹3383 ಕೋಟಿ ಒಡೆಯ ಶಾಸಕ!
₹2000 ಮೇಲ್ಪಟ್ಟು ಫೋನ್‌ಪೇ, ಗೂಗಲ್‌ಪೇ ಮಾಡಿದರೆ ಶುಲ್ಕ!