ಕೊಲ್ಕತಾ: ಕಳೆದೆರಡು ವಾರಗಳಿಂದ ಪ್ರಕ್ಷುಬ್ಧ ವಾತಾವರಣದಲ್ಲಿರುವ ಸಂದೇಶ್‌ಖಾಲಿ ಪ್ರದೇಶಕ್ಕೆ ಪಶ್ಚಿಮ ಬಂಗಾಳ ಸರ್ಕಾರದ ಮೂವರು ಸಚಿವರು ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದಾರೆ.
ಆದರೆ ಕೇಂದ್ರ ಸಚಿವರನ್ನೊಳಗೊಂಡ ಬಿಜೆಪಿ ನಿಯೋಗ ಸಂದೇಶ್ ಖಾಲಿಗೆ ಭೇಟಿ ನೀಡಲು ಪ್ರಯತ್ನ ನಡೆಸಿತ್ತಾದರೂ ಅವರಿಗೆ ಜಿಲ್ಲಾಡಳಿತ ಗಡಿಯಲ್ಲೇ ತಡೆ ನೀಡಿದೆ.
ಸಂದೇಶ್‌ಖಾಲಿಯಲ್ಲಿ ಹಲವು ದಿನಗಳಿಂದ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಅಕ್ರಮ ಭೂ ಕಬಳಿಕೆಯ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.