ನವದೆಹಲಿ: ದೆಹಲಿ ಅಬಕಾರಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ 6ನೇ ಬಾರಿ ಸಮನ್ಸ್ ನೀಡಿದೆ. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾದ ಕೇಜ್ರಿವಾಲ್ ಅವರಿಗೆ ಫೆ.19ರಂದು ವಿಚಾರಣೆಗೆ ಹಾಜರಾಗಲು ಇ.ಡಿ. ಸೂಚಿಸಿದೆ.
ಇ.ಡಿ. ಸಲ್ಲಿಸಿದ್ದ ದೂರಿನ ಅನ್ವಯ ಫೆ.17ರೊಳಗೆ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಕೋರ್ಟ್ ಕಳೆದ ವಾರ ಸೂಚಿಸಿತ್ತು.
ಇದು ಇ.ಡಿ. ನೀಡುತ್ತಿರುವ 6ನೇ ಸಮನ್ಸ್ ಆಗಿದ್ದು, ಈ ಹಿಂದಿನ ಸಮನ್ಸ್‌ಗಳಿಗೆ ಕೇಜ್ರಿವಾಲ್ ಉತ್ತರ ನೀಡಿರಲಿಲ್ಲ.
ಈ ಮೊದಲು 2023ರ ನ.2, ಡಿ.21, 2024ರ ಜ.3, ಜ.18, ಫೆ.2ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು.