ಭಿವಾನಿ: ಇಲ್ಲಿನ ಬೊಪಾರಾ ಗ್ರಾಮದ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳು ತರಗತಿಯಲ್ಲಿ ವಿಜ್ಞಾನ ಶಿಕ್ಷಕಿಯ ಕುರ್ಚಿಯ ಅಡಿ ಬಾಂಬ್ ರೀತಿಯ ಪಟಾಕಿ ಇರಿಸಿ ಸ್ಫೋಟಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ಶಿಕ್ಷಕಿ ಹಾಗೂ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದುಷ್ಕೃತ್ಯ ನಡೆಸಿದ ವಿದ್ಯಾರ್ಥಿಗಳನ್ನು ಅಮಾನತು. ಮಾಡಲಾಗಿದೆ.
‘ಮಕ್ಕಳು ಏನಾದರೂ ತಯಾರಿಸಿ ತೋರಿಸಿದ್ದರೆ ಶ್ಲಾಘಿಸಬಹುದಿತ್ತು. ಆದರೆ ಈ ಪ್ರಕರಣದಲ್ಲಿ ಹಾಗಾಗದು. ವಿದ್ಯಾರ್ಥಿಗಳನ್ನು ಶಾಲೆಯಿಂದಲೇ ಹೊರಹಾಕಲು ಯೋಚಿಸಿದ್ದೆವಾದರೂ ಪೊಷಕರು ಕ್ಷಮೆ ಕೇಳಿದ್ದರಿಂದ ಶಿಕ್ಷೆಯನ್ನು ಅಮಾನತಿಗೆ ಸೀಮಿತಗೊಳಿಸಲಾಗಿದೆ. ಶಿಕ್ಷಕಿ ಕೂಡ ಮಕ್ಕಳನ್ನು ಕ್ಷಮಿಸಿದ್ದಾರೆ’ ಎಂದರು.