ರಾಜ್ಯದಲ್ಲಿ ಈ ಬಾರಿ ಫೆಬ್ರವರಿಗೇ ಬೇಸಿಗೆ ರೀತಿ ಸೆಕೆಯ ಅನುಭವ! ಹವಾಮಾನ ತಜ್ಞರ ಎಚ್ಚರಿಕೆ

KannadaprabhaNewsNetwork |  
Published : Feb 05, 2025, 12:36 AM ISTUpdated : Feb 05, 2025, 07:32 AM IST
hot summer

ಸಾರಾಂಶ

ಈವರೆಗೆ ಚಳಿಯಿಂದ ನಡುಗುತ್ತಿದ್ದ ರಾಜ್ಯದ ಜನ ನಿಧಾನವಾಗಿ ಬಿಸಿಲಿನ ತಾಪ ಎದುರಿಸತೊಡಗಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಬಿಸಿಲ ತಾಪಕ್ಕೆ ಜನ ಬೆವೆತು ಸುಸ್ತಾಗುತ್ತಿದ್ದಾರೆ.

  ಬೆಂಗಳೂರು : ಈವರೆಗೆ ಚಳಿಯಿಂದ ನಡುಗುತ್ತಿದ್ದ ರಾಜ್ಯದ ಜನ ನಿಧಾನವಾಗಿ ಬಿಸಿಲಿನ ತಾಪ ಎದುರಿಸತೊಡಗಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಬಿಸಿಲ ತಾಪಕ್ಕೆ ಜನ ಬೆವೆತು ಸುಸ್ತಾಗುತ್ತಿದ್ದಾರೆ.

ಫೆಬ್ರವರಿ ತಿಂಗಳಿಂದಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಈ ಬಾರಿ ರಣಬಿಸಿಲಿನ ಬೇಸಿಗೆ ಇರುವುದು ನಿಚ್ಚಳವಾಗಿದೆ. ಜತೆಗೆ, ಉಷ್ಣ ಅಲೆ ಬೀಸುವ ಎಲ್ಲ ಲಕ್ಷಣ ದಟ್ಟವಾಗಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಕಲಬುರಗಿಯಲ್ಲಿ ಅತಿ ಹೆಚ್ಚು 36.8 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಇದು ವಾಡಿಕೆಗಿಂತ 3.6 ಡಿ.ಸೆ. ಅಧಿಕವಾಗಿದೆ. ಅದೇ ರೀತಿ ಬಾಗಲಕೋಟೆಯಲ್ಲಿ 34.8 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ವಾಡಿಕೆ ಪ್ರಮಾಣಕ್ಕಿಂತ 4.5 ಡಿ.ಸೆ. ಹೆಚ್ಚಾಗಿದೆ. ಇದೇ ರೀತಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚಿನ ಬಿಸಿಲು ದಾಖಲಾಗುತ್ತಿದೆ. ಗರಿಷ್ಠ ಉಷ್ಣಾಂಶದಲ್ಲಿ 2 ರಿಂದ 4 ಡಿ.ಸೆ. ವರೆಗೆ ಹೆಚ್ಚಾಗಿದೆ. ಅದರಲ್ಲೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಬಿಸಿಲು ಹೆಚ್ಚಾಗಿದೆ.

ಉಷ್ಣ ಅಲೆ ಬೀಸುವ ಸಾಧ್ಯತೆ:

ಇಷ್ಟು ದಿನ ಬಿಸಿಲು ಕಡಿಮೆ ಇತ್ತು. ಇದೀಗ ಗರಿಷ್ಠ ಉಷ್ಣಾಂಶದಲ್ಲಿ ಒಂದು ಡಿಗ್ರಿ ಸೆಲ್ಸಿಯಸ್‌ ಹೆಚ್ಚಾದರೂ ಭಾರೀ ಬಿಸಿಲಿನ ಅನುಭವ ಆಗಲಿದೆ. ಪೂರ್ಣ ಪ್ರಮಾಣದಲ್ಲಿ ಬೇಸಿಗೆ ಶುರುವಾಗುತ್ತಿದಂತೆ ಬಿಸಿಲು ಇನ್ನಷ್ಟು ಹೆಚ್ಚಾಗಲಿದೆ. ಇದರ ಪರಿಣಾಮದಿಂದ ರಾಜ್ಯದಲ್ಲಿ ಉಷ್ಣ ಅಲೆ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಶ್ರೀನಿವಾಸ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.

ಈಗಾಗಲೇ ಭಾರತೀಯ ಹವಾಮಾನ ಇಲಾಖೆ ದೇಶದ ಎಲ್ಲ ರಾಜ್ಯದ ಅಧಿಕಾರಿಗಳಿಗೆ ಉಷ್ಣ ಅಲೆ ಕುರಿತು ಜಾಗೃತಿ, ಕ್ರಿಯಾ ಯೋಜನೆ ಸಿದ್ಧಪಡಿಸಲು ಕಾರ್ಯಾಗಾರ ನಡೆಸುತ್ತಿದೆ. ಭಾರೀ ಬಿಸಿಲು ಇದೆ ಎಂಬ ಕಾರಣಕ್ಕೆ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಬಿಸಿಲಿನ ತಾಪಕ್ಕೆ ಮೋಡ ಕಟ್ಟಿ ಏಕಾಏಕಿ ಮಳೆ ಸುರಿಯುವ ಸಾಧ್ಯತೆಯೂ ಇರಲಿದೆ ಎಂದು ವಿವರಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ