ಡಿಜಿಟಲ್‌ ಅರೆಸ್ಟ್‌ಗಾಗಿ ಕಾಂಬೋಡಿಯಾದಲ್ಲಿ ನಕಲಿ ಭಾರತೀಯ ಪೊಲೀಸ್‌ ಠಾಣೆ!

KannadaprabhaNewsNetwork |  
Published : Feb 13, 2026, 02:00 AM IST
ನಕಲಿ | Kannada Prabha

ಸಾರಾಂಶ

ಭಾರತೀಯರನ್ನು ಡಿಜಿಟಲ್‌ ಅರೆಸ್ಟ್‌ಗೆ ಒಳಪಡಿಸಿ ವಂಚಿಸುತ್ತಿದ್ದ ದೊಡ್ಡ ಜಾಲವನ್ನು ಕೊಲಂಬಿಯಾ ಅಧಿಕಾರಿಗಳು ಬಯಲಿಗೆಳೆದಿದ್ದು, ಇಂತಹ ಸುಮಾರು 200 ಕೇಂದ್ರಗಳಿಗೆ ಬೀಗ ಹಾಕಿದ್ದಾರೆ.

200 ಸ್ಕ್ಯಾಮ್‌ ಸೆಂಟರ್‌ ಪತ್ತೆ

ನಾಮ್ ಪೆನ್(ಕಾಂಬೋಡಿಯಾ): ಭಾರತೀಯರನ್ನು ಡಿಜಿಟಲ್‌ ಅರೆಸ್ಟ್‌ಗೆ ಒಳಪಡಿಸಿ ವಂಚಿಸುತ್ತಿದ್ದ ದೊಡ್ಡ ಜಾಲವನ್ನು ಕೊಲಂಬಿಯಾ ಅಧಿಕಾರಿಗಳು ಬಯಲಿಗೆಳೆದಿದ್ದು, ಇಂತಹ ಸುಮಾರು 200 ಕೇಂದ್ರಗಳಿಗೆ ಬೀಗ ಹಾಕಿದ್ದಾರೆ. ಭೇದಿಸಲಾಗಿರುವ ಕೇಂದ್ರಗಳನ್ನು ಮುಂಬೈ ಪೊಲೀಸ್‌ ಠಾಣೆಯಂತೆ ಬಿಂಬಿಸುವ ಬೋರ್ಡ್‌, ಒಳಗೆ ಭಾರತದ ಧ್ವಜ, ಮಹಾತ್ಮಾ ಗಾಂಧಿ ಮತ್ತು ಬಿ.ಆರ್‌ ಅಂಬೇಡ್ಕರ್‌ ಅವರ ಚಿತ್ರಗಳು ಪತ್ತೆಯಾಗಿವೆ. ಜತೆಗೆ ಡಿಜಿಟಲ್‌ಗೆ ಅರೆಸ್ಟ್‌ಗೆ ಸೂಕ್ತವಾದ ಸುಸಜ್ಜಿತ ಕೋಣೆಗಳು ಬೆಳಕಿಗೆ ಬಂದಿವೆ. ಅಧಿಕಾರಿಗಳ ದಾಳಿ ವೇಳೆ ಅಲ್ಲಿದ್ದವರೆಲ್ಲ ಪರಾರಿಯಾಗಿದ್ದು, ಯಾವುದೇ ಬಂಧನವಾಗಿಲ್ಲ.

ಕಳೆದ ಡಿಸೆಂಬರ್‌ನಲ್ಲಿ ಥಾಯ್ಲೆಂಡ್‌ ನಡೆಸಿದ ದಾಳಿಯಿಂದಾದ ಹಾನಿಯನ್ನು ಪರಿಶೀಲಿಸಲು ಅಧಿಕಾರಿಗಳು ಬಂದಿದ್ದ ವೇಳೆ ಭಾರತ ಸೇರಿದಂತೆ ಹಲವು ದೇಶಗಳ ನಕಲಿ ಪೊಲೀಸ್‌ ಠಾಣೆಗಳು ಪತ್ತೆಯಾಗಿವೆ.

ಅಮೆರಿಕ ಮತ್ತು ಚೀನಾದ ಸೂಚನೆಯಂತೆ ಕೊಲಂಬಿಯಾ ಅಧಿಕಾರಿಗಳು, ಆನ್‌ಲೈನ್‌ ವಂಚನೆಯಲ್ಲಿ ತೊಡಗಿದ್ದವರ ಬೇಟೆಯನ್ನು ಕಳೆದ ವರ್ಷ ಶುರು ಮಾಡಿದ್ದರು.

==

ಲ್ಯಾಂಬೋರ್ಘಿನಿ ಅಪಘಾತ: ಉದ್ಯಮಿ ಪುತ್ರನ ಸೆರೆ, ಕೂಡಲೇ ಜಾಮೀನು

ಕಾನ್ಪುರ: ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಪುತ್ರ ನಡೆಸಿದ ಲ್ಯಾಂಬೋರ್ಘಿನಿ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಕಡೆಗೂ ಶಿವಂ ಮಿಶ್ರಾನನ್ನು ಬಂಧಿಸಿದ್ದಾರೆ. ಆದರೆ ಕೆಲವೇ ಗಂಟೆಗಳಲ್ಲಿ ನ್ಯಾಯಾಲಯ ಆತನಿಗೆ ಜಾಮೀನು ನೀಡಿದೆ.ಸಂಚಲನಕ್ಕೆ ಕಾರಣವಾಗಿದ್ದ ಪಾದಚಾರಿಗಳ ಮೇಲೆ ಲ್ಯಾಂಬೋರ್ಘಿನಿ ಕಾರು ಹರಿದ ಪ್ರಕರಣದಲ್ಲಿ ಶಿವಂ ಬಂಧನಕ್ಕೆ ಆಗ್ರಹ ಕೇಳಿ ಬಂದಿತ್ತು. ಈ ನಡುವೆ ಓರ್ವ ವ್ಯಕ್ತಿ ತಾನೇ ಕಾರು ಚಲಾಯಿಸಿದ್ದು ಎಂದು ಬುಧವಾರ ನ್ಯಾಯಾಲಯಕ್ಕೆ ಶರಣಾಗಲು ಬಂದಿದ್ದ. ಆದರೆ ಕೋರ್ಟ್‌ ಅದಕ್ಕೆ ಅನುಮತಿಸಿರಲಿಲ್ಲ. ಈ ನಡುವೆ ಕಾನ್ಪುರ ಪೊಲೀಸರು ಗುರುವಾರ ಶಿವಂನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ಗಂಟೆಯಲ್ಲೇ ಜಾಮೀನು:

ಕಾನ್ಪುರ ಕೋರ್ಟ್‌ಗೆ ಶಿವಂನನ್ನು ಹಾಜರು ಪಡಿಸಿದ ವೇಳೆ ಪೊಲೀಸರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಮನವಿ ಮಾಡಿದ್ದರು. ಆದರೆ ನ್ಯಾಯಾಧೀಶರು ಪೊಲೀಸರ ಕೋರಿಕೆ ತಿರಸ್ಕರಿಸಿ ಕೆಲವೇ ಗಂಟೆಗಳಲ್ಲಿ 20, 000 ರು. ಗಳ ವೈಯಕ್ತಿಕ ಬಾಂಡ್‌ ಕೋರಿ ಜಾಮೀನು ನೀಡಿದ್ದಾರೆ.

==

ಫೆ.18ರಿಂದ 22ರ ವರೆಗೆ ಬ್ರೆಜಿಲ್‌ ಅಧ್ಯಕ್ಷ ಭಾರತಕ್ಕೆ

ನವದೆಹಲಿ: ಬ್ರಜಿಲ್‌ ಅಧ್ಯಕ್ಷ ಲುಲಾ ಡ ಸಿಲ್ವಾ ಅವರು ಫೆ.18ರಿಂದ 5 ದಿನಗಳ ಭಾರತ ಭೇಟಿ ಕೈಗೊಳ್ಳಲಿದ್ದಾರೆ. ಈ ವೇಳೆ ನವದೆಹಲಿಯಲ್ಲಿ ನಡೆಯಲಿರುವ ಎಐ ಶೃಂಗಸಭೆಯಲ್ಲಿ ಭಾಗವಹಿಸುವುದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಇದು ಅವರ 6ನೇ ಭಾರತ ಭೇಟಿಯಾಗಲಿದೆ.ಫೆ.19ರಿಂದ ಮತ್ತು 20ರಂದು ಶೃಂಗದಲ್ಲಿ ಭಾಗವಹಿಸಲಿರುವ ಲುಲಾ, ಬಳಿಕ ಫೆ.21ರಂದು ಮೋದಿಯವರನ್ನು ಭೇಟಿ ಆಗಲಿದ್ದಾರೆ. ‘ಉಭಯ ನಾಯಕರು ಎರಡೂ ರಾಷ್ಟ್ರಗಳ ವ್ಯೂಹಾತ್ಮಕ ಪಾಲುದಾರಿಕೆ ಬಲವರ್ಧನೆ, ಪ್ರಾದೇಶಿಕ ಮತ್ತು ಜಾಗತಿಕ ವೇದಿಕೆಗಳಲ್ಲಿ ಸಹಕಾರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ’ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.ಅಧ್ಯಕ್ಷರ ಜತೆ ಬ್ರಜಿಲ್‌ನ 14 ಸಚಿವರು ಮತ್ತು ಕಂಪನಿಗಳ ಸಿಇಒಗಳ ನಿಯೋಗ ಭಾರತಕ್ಕೆ ಬರಲಿದೆ. ಎರಡೂ ರಾಷ್ಟ್ರದ ಸಚಿವರು ಹಲವು ಸಭೆಗಳಲ್ಲಿ ಪಾಲ್ಗೊಂಡರೆ, ಸಿಇಒಗಳು ಬಿಸ್ನೆಸ್‌ ಫೋರಂನಲ್ಲಿ ಭಾಗಿಯಾಗಲಿದ್ದಾರೆ.

==

ಶಬರಿಮಲೆಯಲ್ಲಿ ಎಸ್‌ಐಟಿಯಿಂದ ಮತ್ತೆ ಚಿನ್ನದ ಸ್ಯಾಂಪಲ್‌ ಸಂಗ್ರಹ

ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ವೈಜ್ಞಾನಿಕ ವಿಶ್ಲೇಷಣೆಗಾಗಿ ಗುರುವಾರ ಮತ್ತೆ ದೇಗುಲಕ್ಕೆ ಭೇಟಿ ನೀಡಿ ಚಿನ್ನದ ಮಾದರಿಗಳನ್ನು ಸಂಗ್ರಹಿಸಿದೆ.ಚಿನ್ನದ ಸ್ಯಾಂಪಲ್‌ಗಳ ಸಂಗ್ರಹಕ್ಕೆ ಸೋಮವಾರ ಕೇರಳ ಹೈಕೋರ್ಟ್‌ ಅನುಮತಿ ನೀಡಿತ್ತು. ಈ ಬೆನ್ನಲ್ಲೇ ಎಸ್ಪಿ ಎಸ್‌ ಶಶಿಧರನ್‌ ನೇತೃತ್ವದ ತಂಡ ಗುರುವಾರ ಸನ್ನಿಧಾನಕ್ಕೆ ಭೇಟಿ ನೀಡಿದೆ. ಶಬರಿಮಲೆಯಲ್ಲಿ ಮಾಸಿಕ ಪೂಜೆಗಾಗಿ ಗುರುವಾರ ಸಂಜೆ 5 ರಿಂದ ಫೆ.17 ರ ತನಕ ತೆರೆಯಲಿದೆ. ಹೀಗಾಗಿ ಗುರುವಾರ ರಾತ್ರಿ ದೇಗುಲ ಮುಚ್ಚಿದ ಬಳಿಕ ಮಾದರಿ ಸಂಗ್ರಹಿಸಿದೆ. ಕೇರಳ ಹೈಕೋರ್ಟ್‌ ಹೊಸ ಮಾದರಿಗಳ ವೈಜ್ಞಾನಿಕ ವಿಶ್ಲೇಷಣೆಗೆ ಸಂಬಂಧಿಸಿದ ವರದಿಯಲ್ಲಿ ಫೆ.19ರಂದು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದೂರದರ್ಶನದ ಪ್ರಸಿದ್ಧ ವಾರ್ತಾವಾಚಕಿ ಸರಳಾ ಮಹೇಶ್ವರಿ ನಿಧನ
ಏರಿಂಡಿಯಾ ದುರಂತಕ್ಕೆ ಪೈಲಟ್‌ಕಾರಣ ಎಂದ ಇಟಲಿ ಮಾಧ್ಯಮವರದಿ ಸುಳ್ಳು: ಭಾರತ ಸ್ಪಷ್ಟನೆ