ಇವಿ ಉತ್ತೇಜಿಸುವ ಫೇಮ್‌ ಅನುದಾನ ಶೇ.44 ಕಡಿತ

KannadaprabhaNewsNetwork |  
Published : Feb 02, 2024, 01:03 AM ISTUpdated : Feb 02, 2024, 12:03 PM IST
EV

ಸಾರಾಂಶ

ಫೇಮ್‌ ಯೋಜನೆ ಅನುದಾನದಲ್ಲಿ ಕಡಿತ ಮಾಡಲಾಗಿದ್ದು ಕೇವಲ 2671 ಕೋಟಿ ರು. ಮಾತ್ರ ಹಂಚಿಕೆ ಮಾಡಲಾಗಿದೆ.

ಭಾರತದಲ್ಲಿ ಹೈಬ್ರಿಡ್‌ ಮತ್ತು ಎಲೆಕ್ಟ್ರಿಕ್‌ ವಾಹನಗಳನ್ನು ವೇಗವಾಗಿ ಅಳವಡಿಸಿಕೊಳ್ಳುವ ಮತ್ತು ಉತ್ಪಾದನೆ ಮಾಡುವ ಯೋಜನೆಯಾದ ಫೇಮ್‌ ಯೋಜನೆಗೆ ಈ ಬಾರಿಯ ಹಂಚಿಕೆಯನ್ನು ಶೇ.44ರಷ್ಟು ಕಡಿತ ಮಾಡಲಾಗಿದೆ. ಈ ಬಾರಿ 2671 ಕೋಟಿ ರು.ಗಳನ್ನು ಮಾತ್ರ ನೀಡಲಾಗಿದೆ. 

ಈಗಾಗಲೇ 2 ವರ್ಷಗಳ ಕಾಲ ವಿಸ್ತರಣೆ ಮಾಡಲಾಗಿದ್ದ ಫೇಮ್‌-2 ಯೋಜನೆಯನ್ನು ಮತ್ತೆ ವಿಸ್ತಣೆ ಮಾಡಲಾಗುತ್ತದೆಯೋ ಅಥವಾ ಹೊಸ ಯೋಜನೆ ಘೋಷಣೆ ಮಾಡಲಾಗುತ್ತದೋ ಎಂಬ ಅನುಮಾನದ ಬೆನ್ನಲ್ಲೇ ಸರ್ಕಾರ ಅನುದಾನ ಕಡಿತವನ್ನು ಸರ್ಕಾರ ಘೋಷಿಸಿದೆ. 

2023-24ರಲ್ಲಿ 5171 ಕೋಟಿ ರು.ಗಳನ್ನು ಈ ಯೋಜನೆಗೆ ನೀಡಲಾಗಿತ್ತು. ಇದರಲ್ಲಿ 4807 ಕೋಟಿ ರು. ವೆಚ್ಚ ಮಾಡಲಾಗಿದೆ. ಕಳೆದ ವರ್ಷ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ಉತ್ಪಾದನೆ ಮೇಲಿನ ಸಹಾಯಧನವನ್ನು ಕಡಿತ ಮಾಡಲಾಗಿತ್ತು. 

ಇದೀಗ ಯೋಜನೆಯ ಅನುದಾನವನ್ನು ಸಹ ಕಡಿತ ಮಾಡಲಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಫೇಮ್‌-2 ಯೋಜನೆ 2024ರ ಮಾ.31ಕ್ಕೆ ಅಂತ್ಯವಾಗಲಿದೆ.

 ಇದಾದ ಬಳಿಕ ಈ ಯೋಜನೆ ಮುಂದುವರೆಯುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ 2015ರಲ್ಲಿ ಆರಂಭಿಸಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೆಡಿ ಚಿತ್ರದ ‘ಸೆರಗು ಸರ್‌ಸೇ’ ಹಾಡು ಬಗ್ಗೆ ಸಂಸತ್‌ನಲ್ಲೂ ಕಿಡಿ
ರಾಜಕಾರಣಕ್ಕೆ ಪೂರ್ಣ ವಿರಾಮ ಇಲ್ಲ : ಪ್ರಧಾನಿ ನರೇಂದ್ರ ಮೋದಿ