ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್ ಭಾರತವನ್ನು 5 ಟ್ರಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸುವ ಮತ್ತು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ರೂಪಿಸುವತ್ತ ಗಮನವನ್ನು ಕೇಂದ್ರೀಕರಿಸಿದದೆ ಎಂದು ಅಸೋಚಾಮ್‌ನ ಅಧ್ಯಕ್ಷ ಅಜಯ್ ಸಿಂಗ್ ಹೇಳಿದ್ದಾರೆ.
‘ಇದೊಂದು ಭಾರತ ಮೊದಲು ಎನ್ನುವ ಬಜೆಟ್ ಆಗಿದೆ. ಇದೊಂದು ವಿಶ್ವಾಸಾರ್ಹ ಸರ್ಕಾರ ಮಂಡಿಸಿರುವ ವಿಶ್ವಾಸಾರ್ಹ ಬಜೆಟ್ ಆಗಿದೆ. 2025ಕ್ಕೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸುವ ಮತ್ತು 2047ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವತ್ತ ಗಮನ ಕೇಂದ್ರೀಕರಿಸಿದೆ.
ಮೂಲಸೌಕರ್ಯಗಳು, ಸ್ಟಾರ್ಟ್‌ಅಪ್‌ಗಳು ಮತ್ತು ರೈಲ್ವೆ ಕಾರಿಡಾರ್‌ಗಳ ಮೇಲೆ ಬಜೆಟ್ ಗಮನ ಹರಿಸಿದೆ. ಅಲ್ಲದೇ ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು 1 ಲಕ್ಷ ಕೋಟಿ ಫಂಡ್ ಸಹ ನಿಗದಿಪಡಿಸಿರುವುದು ಉತ್ತಮ ನಿರ್ಧಾರ ಎಂದು ಹೇಳಿದ್ದಾರೆ.