ಮತ್ತೆ ರೈತರು-ಪೊಲೀಸರ ಸಂಘರ್ಷ: ಇನ್ಸ್‌ಪೆಕ್ಟರ್‌ಗೆ ಗಾಯ

KannadaprabhaNewsNetwork |  
Published : Feb 24, 2024, 02:31 AM ISTUpdated : Feb 24, 2024, 08:18 AM IST
ಖನೌರಿ | Kannada Prabha

ಸಾರಾಂಶ

ಪಂಜಾಬ್ ಗಡಿ ಪ್ರದೇಶ ಖನೌರಿಯಲ್ಲಿ ಮತ್ತೆ ಪೊಲೀಸರು ಮತ್ತು ರೈತರ ನಡುವೆ ಗಲಭೆ ನಡೆದಿದ್ದು, ಪೊಲೀಸ್‌ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.

ಖನೌರಿ/ಚಂಡೀಗಢ: ಹರ್ಯಾಣದ ಹಿಸಾರ್‌ನ ಖೇಡಿ ಚ್ವಾಪಾಟಾದಲ್ಲಿ ‘ದೆಹಲಿ ಚಲೋ’ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ನಡುವೆ ಶುಕ್ರವಾರ ಸಂಘರ್ಷ ನಡೆದಿದೆ. ಘಟನೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.

ಹಿಸಾರ್- ನರ್ನಾಂಡ್ ರಸ್ತೆಯಲ್ಲಿರುವ ಖೇಡಿ ಚೋಪ್ಟಾ ಗ್ರಾಮದಿಂದ ರೈತರು ಖನೌರಿ ಗಡಿಗೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ.

ಈ ವೇಳೆ ಭಾರೀ ಪ್ರಮಾಣದಲ್ಲಿ ನೆರೆದಿದ್ದ ರೈತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದರು. ಆದರೂ ರೈತರನ್ನು ನಿಗ್ರಹಿಸಲಾದೆ ಆಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಆಗ ರೈತರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೆಡಿ ಚಿತ್ರದ ‘ಸೆರಗು ಸರ್‌ಸೇ’ ಹಾಡು ಬಗ್ಗೆ ಸಂಸತ್‌ನಲ್ಲೂ ಕಿಡಿ
ರಾಜಕಾರಣಕ್ಕೆ ಪೂರ್ಣ ವಿರಾಮ ಇಲ್ಲ : ಪ್ರಧಾನಿ ನರೇಂದ್ರ ಮೋದಿ