ಚಂಡೀಗಢ: ಪಂಜಾಬ್, ಹರ್ಯಾಣ ಗಡಿಯಲ್ಲಿ ಬುಧವಾರ ಪೊಲೀಸರ ದಾಳಿಯಲ್ಲಿ ರೈತ ಸಾವನ್ನಪ್ಪಿದ ಘಟನೆಗೆ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಗೃಹ ಸಚಿವ ಅನಿಲ್ ವಿಜ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಗುರುವಾರ ಆಗ್ರಹಿಸಿದೆ.
ರೈತರ ಸಾವಿಗೆ ಸಂಬಂಧಿಸಿದಂತೆ ಶುಕ್ರವಾರ ದೇಶಾದ್ಯಂತ ಕರಾಳದಿನ ಆಚರಿಸಲಾಗುತ್ತದೆ. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮನೋಹರ್ ಲಾಲ್ ಖಟ್ಟರ್ ಮತ್ತು ಅನಿಲ್ ವಿಜಿ ಅವರ ಪ್ರತಿಕೃತಿಗಳನ್ನು ದಹಿಸಲಾಗುತ್ತದೆ ಎಂದು ಎಸ್‌ಕೆಎಂ ಹೇಳಿದೆ.
26ರಂದು ಟ್ರಾಕ್ಟರ್ ರ್‍ಯಾಲಿ: ರೈತ ಪ್ರತಿಭಟನೆಯ ಭಾಗವಾಗಿ ಫೆ.26ರಂದು ಹೆದ್ದಾರಿಗಳಲ್ಲಿ ಟ್ರಾಕ್ಟರ್ ಜಾಥಾ ಕೈಗೊಳ್ಳಲಾಗುತ್ತದೆ ಹಾಗೂ ಮಾ.14ರಂದು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಕಿಸಾನ್ ಮಜ್‌ದೂರ್ ಮಹಾಪಂಚಾಯತ್ ನಡೆಸಲಾಗುತ್ತದೆ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಹರ್ಯಾಣ ಪೊಲೀಸರು ಮತ್ತು ಪಂಜಾಬ್‌ನ ರೈತರ ನಡುವೆ ನಡೆದ ಘರ್ಷಣೆಯಲ್ಲಿ ಸುಭಕರಣ್ ಸಿಂಗ್ ಎಂಬ ರೈತ ಬುಧವಾರ ಮೃತಪಟ್ಟಿದ್ದ. ಹೀಗಾಗಿ 2 ದಿನಗಳ ಕಾಲ ದೆಹಲಿ ಚಲೋಗೆ ತಡೆ ನೀಡಲಾಗಿತ್ತು.
ರೈತರ ಮುಂದಿನ ನಡೆಯ ಬಗ್ಗೆ ಗುರುವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳು ದೆಹಲಿ ಚಲೋ ಪ್ರತಿಭಟನೆಯನ್ನು ಕೈಗೊಂಡಿವೆ.
ರೈತರ ನಿರ್ಣಯಗಳೇನು?