ಫಾಸ್ಟ್ಯಾಗ್‌ನಲ್ಲಿ ಬ್ಯಾಲೆನ್ಸ್‌ ಇಲ್ವಾ? ಟೋಲ್‌ ಇರುವ ಹೆದ್ದಾರಿಗಳಲ್ಲಿ ದುಪ್ಪಟ್ಟು ದಂಡ ಕಟ್ಟಿ !

KannadaprabhaNewsNetwork |  
Published : Feb 17, 2025, 01:34 AM ISTUpdated : Feb 17, 2025, 04:29 AM IST
ಫಾಸ್ಟ್‌ಟ್ಯಾಗ್‌ | Kannada Prabha

ಸಾರಾಂಶ

ಟೋಲ್‌ ಇರುವ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರೇ ಇಲ್ಲಿ ಗಮನಿಸಿ.  ಟೋಲ್‌ ಶುಲ್ಕದ ದುಪ್ಪಟ್ಟು ಹಣವನ್ನು ದಂಡವಾಗಿ ಕಟ್ಟಬೇಕಾಗುತ್ತದೆ. ಹೀಗಾಗಿ ವಾಹನ ಪ್ರಯಾಣಕ್ಕೂ ಮುನ್ನ 1 ಗಂಟೆಗೆ ಮೊದಲೇ ಎಲ್ಲಾ ಅಂಶಗಳನ್ನು ಖಚಿತಪಡಿಸಿಕೊಳ್ಳಿ.

 ನವದೆಹಲಿ: ಟೋಲ್‌ ಇರುವ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರೇ ಇಲ್ಲಿ ಗಮನಿಸಿ. ಇನ್ನು ಮುಂದೆ ನಿಮ್ಮ ಫಾಸ್ಟ್ಯಾಗ್‌ ಖಾತೆಯಲ್ಲಿ ಹಣ ಇಲ್ಲದೆ ಹೋದಲ್ಲಿ, ಫಾಸ್ಟ್ಯಾಗ್‌ ಖಾತೆ ಕಪ್ಪುಪಟ್ಟಿಗೆ ಸೇರಿದ್ದರೆ, ಕೆವೈಸಿ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಟೋಲ್‌ ಶುಲ್ಕದ ದುಪ್ಪಟ್ಟು ಹಣವನ್ನು ದಂಡವಾಗಿ ಕಟ್ಟಬೇಕಾಗುತ್ತದೆ. ಹೀಗಾಗಿ ವಾಹನ ಪ್ರಯಾಣಕ್ಕೂ ಮುನ್ನ 1 ಗಂಟೆಗೆ ಮೊದಲೇ ಮೇಲ್ಕಂಡ ಎಲ್ಲಾ ಅಂಶಗಳನ್ನು ಖಚಿತಪಡಿಸಿಕೊಳ್ಳಿ.

ಕಡಿಮೆ ಬ್ಯಾಲೆನ್ಸ್‌, ವಿಳಂಬ ಪಾವತಿ ಅಥವಾ ಕಪ್ಟುಪಟ್ಟಿಗೆ ಸೇರ್ಪಡೆಯಾದ ಫಾಸ್ಟ್ಯಾಗ್‌ಗಳಿಗೆ ದಂಡ ವಿಧಿಸುವ ಈ ಹೊಸ ನಿಯಮ ಫೆ.17ರ ಸೋಮವಾರದಿಂದಲೇ ಜಾರಿಗೆ ಬರಲಿದೆ. ಅದರನ್ವಯ ಫಾಸ್ಯ್ಟಾಗ್‌ ನಿಯಮಗಳಿಗೆ ಹಲವು ಬದಲಾವಣೆ ಮಾಡಲಾಗಿದೆ.ಏನೇನು ನಿಯಮ?:

1. ಫಾಸ್ಟ್ಯಾಗ್‌ನಲ್ಲಿ ಯಾವಾಗಲೂ ಅಗತ್ಯ ಪ್ರಮಾಣದ ಹಣ ಖಚಿತಪಡಿಸಿಕೊಳ್ಳಬೇಕು. ಈ ಅಗತ್ಯ ಪ್ರಮಾಣದ ಹಣ ಪ್ರಯಾಣದ ಒಂದು ಗಂಟೆ ಮೊದಲೇ ನಿಮ್ಮ ಖಾತೆಯಲ್ಲಿ ಜಮೆ ಆಗಿರಬೇಕು. 2. ವಾಹನ ಟೋಲ್‌ ದಾಟುವ 60 ನಿಮಿಷ ಮೊದಲು ಮತ್ತು ಟೋಲ್‌ ದಾಟಿದ ಕನಿಷ್ಠ 10 ನಿಮಿಷ ಫಾಸ್ಟ್ಯಾಗ್‌ ಸಕ್ರಿಯ (ಆ್ಯಕ್ಟಿವ್‌) ಆಗಿರುವಂತೆ ನೋಡಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಅಂಥ ಫಾಸ್ಟ್ಯಾಗ್‌ನ ವಹಿವಾಟು ನಿರಾಕರಿಸಲಾಗುವುದು. ಇಂಥ ವೇಳೆ ಟೋಲ್‌ ಸಿಸ್ಟಮ್‌ನಲ್ಲಿ ‘ಎರರ್‌ ಕೋಡ್‌ 176’ ಎಂದು ತೋರಿಸಲಾಗುವುದು. ಈ ವೇಳೆ ಪ್ರಯಾಣಿಕರು ದುಪ್ಪಟ್ಟು ದಂಡ ಕಟ್ಟಬೇಕು.3. ಕೆವೈಸಿ ನಿಯಮ ಪಾಲಿಸದ ಫಾಸ್ಟ್ಯಾಗ್‌ ಖಾತೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು. ಇಂಥ ಫಾಸ್ಟ್ಯಾಗ್‌ನೊಂದಿಗೆ ಟೋಲ್ ಪ್ರವೇಶಿಸಿದರೆ ಅವುಗಳ ಮೂಲಕ ವಹಿವಾಟು ನಿರಾಕರಿಸಲಾಗುವುದು. ಹೀಗೆ ವಹಿವಾಟು ನಿರಾಕರಣೆಯಾದರೆ ವಾಹನ ಮಾಲೀಕರಿಗೆ ದುಪ್ಪಟ್ಟು ಶುಲ್ಕ ವಿಧಿಸಲಾಗುವುದು.4. ಒಂದು ವೇಳೆ ವಾಹನ ಟೋಲ್‌ಗೇಟ್‌ ದಾಟಿದ 15 ನಿಮಿಷ ಬಳಿಕ ಅವರ ಫಾಸ್ಟ್ಯಾಗ್‌ ಖಾತೆಯಿಂದ ಹಣ ಕಡಿತವಾದರೆ ಅದಕ್ಕೆ ವಾಹನ ಸವಾರರಿಗೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ.5. ಟೋಲ್‌ನಲ್ಲೇ ಹಣ ಕಡಿತ ವಿಳಂಬವಾದರೆ ಅದಕ್ಕೆ ಟೋಲ್‌ ಆಪರೇಟರ್‌ ಅನ್ನೇ ಹೊಣೆ ಮಾಡಲಾಗುತ್ತದೆ. ತಪ್ಪು ಶುಲ್ಕ ಅಥವಾ ಹೆಚ್ಚುವರಿ ಹಣ ಕಡಿತಕ್ಕೆ ಸಂಬಂಧಿಸಿ ಬಳಕೆದಾರರು 15 ದಿನಗಳ ಬಳಿಕವಷ್ಟೇ ದೂರು ಸಲ್ಲಿಸಬಹುದಾಗಿದೆ.

ಒಂದು ವೇಳೆ ಫಾಸ್ಟ್ಯಾಗ್‌ ಖಾತೆಯಲ್ಲಿ ಅಗತ್ಯ ಹಣ ಇಲ್ಲದೇ ಹೋದರೂ ಟೋಲ್‌ಗೇಟ್‌ನಲ್ಲಿ ಪ್ರವೇಶ ನೀಡಲಾಗುತ್ತದೆ. ಆದರೆ ಟೋಲ್‌ ಎಂಟ್ರಿ ಆದ ತಕ್ಷಣ ‘ನಿಮ್ಮ ಖಾತೆಯಲ್ಲಿ ಅಗತ್ಯ ಹಣ ಇಲ್ಲ, ಅದನ್ನು ಕೂಡಲೇ ಭರ್ತಿ ಮಾಡಿ’ ಎಂಬ ಸಂದೇಶ ಮೊಬೈಲ್‌ಗೆ ಬರುತ್ತದೆ. ಸಂದೇಶ ಬಂದ 10 ನಿಮಿಷದಲ್ಲಿ ಖಾತೆಗೆ ಅಗತ್ಯ ಹಣ ಹಾಕಿಕೊಂಡರೆ ಯಾವುದೇ ದಂಡ ಇರದು. ಇಲ್ಲದಿದ್ದಲ್ಲಿ ಟೋಲ್‌ ಶುಲ್ಕದ ಎರಡು ಪಟ್ಟು ಹಣ ಕಟ್ಟಬೇಕಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!