ಅಕ್ರಮ ಹಣ ವರ್ಗ ತಡೆ: ಭಾರತಕ್ಕೆ ಎಫ್‌ಎಟಿಎಫ್‌ ಪ್ರಶಂಸೆ ಮಾತು

KannadaprabhaNewsNetwork |  
Published : Jun 29, 2024, 12:36 AM ISTUpdated : Jun 29, 2024, 04:57 AM IST
ಎಫ್‌ಎಟಿಎಫ್ | Kannada Prabha

ಸಾರಾಂಶ

ಅಕ್ರಮ ಹಣ ವರ್ಗಾವಣೆ ತಡೆ ಹಾಗೂ ಭಯೋತ್ಪಾದನೆಗೆ ಹಣ ಒದಗಿಸುವುದರ ವಿರುದ್ಧ ಭಾರತ ಪರಿಣಾಮಕಾರಿ ಹೆಜ್ಜೆಗಳನ್ನಿಟ್ಟಿದೆ.

ಸಿಂಗಾಪುರ: ಅಕ್ರಮ ಹಣ ವರ್ಗಾವಣೆ ತಡೆ ಹಾಗೂ ಭಯೋತ್ಪಾದನೆಗೆ ಹಣ ಒದಗಿಸುವುದರ ವಿರುದ್ಧ ಭಾರತ ಪರಿಣಾಮಕಾರಿ ಹೆಜ್ಜೆಗಳನ್ನಿಟ್ಟಿದೆ. ಇದು ಸರ್ಕಾರ ಸಾಧಿಸಿದ ಮಹತ್ವದ ಮೈಲಿಗಲ್ಲು ಎಂದು ಹಣಕಾಸು ಕಾರ್ಯಪಡೆ (ಎಫ್‌ಎಟಿಎಸ್‌) ಪ್ರಶಂಸೆ ವ್ಯಕ್ತಪಡಿಸಿದೆ. ಎಫ್‌ಎಟಿಎಸ್‌ 2023-24ನೇ ಸಾಲಿನ ಪರಸ್ಪರ ಮೌಲ್ಯಮಾಪನ ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಮೆಚ್ಚುಗೆಯ ಮಾತುಗಳನ್ನು ಆಡಿದೆ.

ಭ್ರಷ್ಟಾಚಾರ, ವಂಚನೆ ಮತ್ತು ಸಂಘಟಿತ ಅಪರಾಧಗಳಂತಹ ಅಕ್ರಮಗಳನ್ನು ತಡೆಯಲು ಭಾರತ ಕೈಗೊಂಡ ಕ್ರಮಗಳು ಗಮನಾರ್ಹ ಎಂದಿರುವ ಎಫ್‌ಎಟಿಎಫ್‌, ನಗದು ವ್ಯವಹಾರಗಳಿಂದ ಡಿಜಿಟಲ್ ವ್ಯವಹಾರಕ್ಕೆ ಪರಿವರ್ತನೆ, ಜನ್‌ಧನ್, ಆಧಾರ್ ಅನುಷ್ಠಾನಗಳಂತಹ ಕ್ರಮಗಳಿಂದ ಆರ್ಥಿಕ ಒಳಗೊಳ್ಳುಕೆ ಹಾಗೂ ಡಿಜಿಟಲ್ ಪಾವತಿಗಳು ಸಾಧ್ಯವಾಗಿದೆ. 

ಈ ಕ್ರಮಗಳಿಂದ ವ್ಯವಹಾರಗಳ ಮೇಲೆ ನಿಗಾ ಇಟ್ಟು ಅಕ್ರಮಗಳನ್ನು ಮಟ್ಟಹಾಕಲು ಸಾಧ್ಯವಾಗಿದೆ ಎಂದು ಶ್ಲಾಘಿಸಿದೆ. ಇದು ಭಾರತಕ್ಕೂ ಅನೇಕ ವಿಧಗಳಲ್ಲಿ ಲಾಭದಾಯಕವಾಗಿದೆ. ಜಾಗತಿಕ ಹಣಕಾಸು ಮಾರುಕಟ್ಟೆ ಪ್ರವೇಶಿಸಲು ಅನುಕೂಲವಾಗುವುದರೊಂದಿಗೆ ಹೂಡಿಕೆದಾರರ ವಿಶ್ವಾಸ ಗಳಿಸುವುದರಲ್ಲೂ ಸಹಕಾರಿ. ಜೊತೆಗೆ ಯುಪಿಐನ ಜಾಗತಿಕ ವಿಸ್ತರಣೆಗೂ ಅನುಕೂಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಜಿ ರಾಮ್‌ ಜಿ ವಿರುದ್ಧ ಕೈ ಹೋರಾಟ ಶುರು
ಇದು ಭಿಕಾರಿ ಸರ್ಕಾರ : ಪಾಕ್‌ ವಿರುದ್ಧ ಲಷ್ಕರ್‌ ಉಗ್ರಾಕ್ರೋಶ