ರೈಲ್ವೆ, ಭಾರತೀಯ ಸೇನೆ ಮೊದಲಾದ ಸರ್ಕಾರಿ ಸಂಸ್ಥೆಗಳಿಗೆ ದಿಕ್ಸೂಚಿ (ಜಿಪಿಎಸ್ ರೀತಿ) ಸೇವೆಗಳನ್ನು ನೀಡಲು ಅಭಿವೃದ್ಧಿಪಡಿಸಿರುವ ‘ನಾವಿಕ್’ (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟಲೇಷನ್) ಉಪಗ್ರಹ ವ್ಯವಸ್ಥೆಯಲ್ಲಿ ಭಾರೀ ದೋಷವುಂಟಾಗಿದೆ.
-4ರಲ್ಲಿ ಒಂದು ಉಪಗ್ರಹ ಸಂಪೂರ್ಣ ನಿಷ್ಕ್ರಿಯ-ಸರ್ಕಾರಿ ಭದ್ರತಾ ವ್ಯವಸ್ಥೆಯಲ್ಲಿ ಅಪಾಯದ ಭೀತಿನವದೆಹಲಿ: ರೈಲ್ವೆ, ಭಾರತೀಯ ಸೇನೆ ಮೊದಲಾದ ಸರ್ಕಾರಿ ಸಂಸ್ಥೆಗಳಿಗೆ ದಿಕ್ಸೂಚಿ (ಜಿಪಿಎಸ್ ರೀತಿ) ಸೇವೆಗಳನ್ನು ನೀಡಲು ಅಭಿವೃದ್ಧಿಪಡಿಸಿರುವ ‘ನಾವಿಕ್’ (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟಲೇಷನ್) ಉಪಗ್ರಹ ವ್ಯವಸ್ಥೆಯಲ್ಲಿ ಭಾರೀ ದೋಷವುಂಟಾಗಿದೆ. ಇದರಲ್ಲಿ ಕಾರ್ಯನಿರ್ವಹಣೆಯಲ್ಲಿದ್ದ 4 ಉಪಗ್ರಹಗಳಲ್ಲಿ ಒಂದು ಉಪಗ್ರಹ ಸಂಪೂರ್ಣ ಹಾಳಾಗಿದ್ದು, ಸೇವೆ ನೀಡುವಲ್ಲಿ ವಿಫಲವಾಗಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ನಾವಿಕ್ ಎಂಬುದು ಭಾರತದ ಸ್ವದೇಶಿ ದಿಕ್ಸೂಚಿ ಉಪಗ್ರಹ ವ್ಯವಸ್ಥೆ. ಇದು ಸರ್ಕಾರಿ ಸಂಸ್ಥೆಗಳಿಗೆ ಜಿಪಿಎಸ್ ರೀತಿಯಲ್ಲಿ ದಿಕ್ಸೂಚಿಯಾಗಿ ಕೆಲಸ ಮಾಡುತ್ತದೆ. ಇದರ ಕನಿಷ್ಠ 4 ಉಪಗ್ರಹಗಳು ಸಂಪೂರ್ಣ ಕಾರ್ಯನಿರ್ವಹಣೆಯಲ್ಲಿರಬೇಕು. ಆದರೆ 10 ವರ್ಷಗಳ ಹಿಂದೆ, 2016ರ ಮಾ.10ರಂದು ಉಡಾವಣೆ ಮಾಡಲಾಗಿದ್ದ ಐಆರ್‌ಎನ್‌ಎಸ್‌ಎಸ್-1ಎಫ್ ಉಪಗ್ರಹವು ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಇದು ರಾಷ್ಟ್ರೀಯ ಭದ್ರತೆಯ ಬಗ್ಗೆ ಕಳವಳ ಉಂಟುಮಾಡಿದೆ. ಸಮಸ್ಯೆಯೇನು?:ರೈಲುಗಳಿಗೆ ಸಮಯ, ಮಾರ್ಗ, ಸುರಕ್ಷತಾ ವ್ಯವಸ್ಥೆ ಇತ್ಯಾದಿಗಳ ಮಾಹಿತಿ ನೀಡುವಲ್ಲಿ ನಾವಿಕ್ ವ್ಯವಸ್ಥೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದೀಗ ಈ ವ್ಯವಸ್ಥೆ ಹಾನಿಗೊಂಡಿರುವುದರಿಂದ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಇನ್ನು ಇದು ಭಾರತೀಯ ಸೇನೆಗೆ ಕ್ಷಿಪಣಿ, ಡ್ರೋನ್, ಸೈನಿಕ ಕಾರ್ಯಾಚರಣೆ ಮೊದಲಾದವುಗಳಿಗೆ ಜಿಪಿಎಸ್ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತದೆ. ನಾವಿಕ್ ಕೈಕೊಟ್ಟರೆ ರಾಷ್ಟ್ರೀಯ ಭದ್ರತೆಗೂ ಅಪಾಯ ಉಂಟಾಗುವ ಆತಂಕವಿದೆ.