ಸರ್ಕಾರಿ ಬ್ಯಾಂಕ್‌ಗಳಲ್ಲಿನ ಎಫ್‌ಡಿಐ ಮಿತಿ ಶೇ.49ಕ್ಕೇರಿಸಲು ಚಿಂತನೆ

KannadaprabhaNewsNetwork |  
Published : Feb 03, 2026, 02:00 AM IST
Bank

ಸಾರಾಂಶ

ಸಾರ್ವಜನಿಕ ವಲಯದ ಬ್ಯಾಂಕುಗಳ ಬಂಡವಾಳ ಮೂಲವನ್ನು ಹೆಚ್ಚಿಸಲು ಹಣಕಾಸು ಸಚಿವಾಲಯವು ಅವುಗಳಲ್ಲಿನ ವಿದೇಶಿ ನೇರ ಬಂಡವಾಳವನ್ನು (ಎಫ್‌ಡಿಐ) ಪ್ರಸ್ತುತ ಶೇ. 20 ರಿಂದ ಶೇ.49ಕ್ಕೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

 ನವದೆಹಲಿ :  ಸಾರ್ವಜನಿಕ ವಲಯದ ಬ್ಯಾಂಕುಗಳ ಬಂಡವಾಳ ಮೂಲವನ್ನು ಹೆಚ್ಚಿಸಲು ಹಣಕಾಸು ಸಚಿವಾಲಯವು ಅವುಗಳಲ್ಲಿನ ವಿದೇಶಿ ನೇರ ಬಂಡವಾಳವನ್ನು (ಎಫ್‌ಡಿಐ) ಪ್ರಸ್ತುತ ಶೇ. 20 ರಿಂದ ಶೇ.49ಕ್ಕೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ವಿಷಯ ತಿಳಿಸಿದ ಹಣಕಾಸು ಸೇವೆಗಳ ಕಾರ್ಯದರ್ಶಿ

ಸೋಮವಾರ ಈ ವಿಷಯ ತಿಳಿಸಿದ ಹಣಕಾಸು ಸೇವೆಗಳ ಕಾರ್ಯದರ್ಶಿ ಎಂ.ನಾಗರಾಜು, ‘ಎಫ್‌ಡಿಐ ಮಿತಿಯನ್ನು ಶೇ.49 ಕ್ಕೆ ಹೆಚ್ಚಿಸಲು ಅಂತರ ಸಚಿವಾಲಯದ ಸಮಾಲೋಚನೆ ನಡೆಯುತ್ತಿದೆ. ಭಾರತದಂಥ ಬೃಹತ್‌ ದೇಶಕ್ಕೆ 3-4 ದೊಡ್ಡ ಬ್ಯಾಂಕುಗಳು ಬೇಕಾಗುತ್ತವೆ. ಹೀಗಾಗಿ ಬ್ಯಾಂಕುಗಳಿಗೆ ಬಂಡವಾಳ ಅಗತ್ಯವಾಗಿದೆ’ ಎಂದರು.

ಎಫ್‌ಡಿಐ ಮಿತಿ ಕ್ರಮವಾಗಿ ಶೇ.20 ಮತ್ತು ಶೇ.74 ರಷ್ಟಿದೆ.

ಪ್ರಸ್ತುತ ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್‌ಬಿ) ಮತ್ತು ಖಾಸಗಿ ವಲಯದ ಬ್ಯಾಂಕುಗಳಲ್ಲಿ ಎಫ್‌ಡಿಐ ಮಿತಿ ಕ್ರಮವಾಗಿ ಶೇ.20 ಮತ್ತು ಶೇ.74 ರಷ್ಟಿದೆ.

ಖಾಸಗಿ ವಲಯದ ಬ್ಯಾಂಕುಗಳಲ್ಲಿ, ಶೇ.49 ರಷ್ಟು ಎಫ್‌ಡಿಐ ಅನ್ನು ಸ್ವಯಂಚಾಲಿತ ಮಾರ್ಗದ ಮೂಲಕ ಅನುಮತಿಸಲಾಗಿದೆ ಮತ್ತು ಶೇ.49ಕ್ಕಿಂತ ಹೆಚ್ಚು ಮತ್ತು ಶೇ.74ರವರೆಗಿನ ಎಫ್‌ಡಿಐಗೆ ಸರ್ಕಾರದ ಅನುಮತಿ ಬೇಕಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಣ್ವಸ್ತ್ರ ಕ್ಷಿಪಣೀಲಿ ಇಂಧನ ಬದಲು ನೀರು ತುಂಬಿದ್ದ ಅಧ್ಯಕ್ಷ ಕ್ಸಿ ಆಪ್ತ!
ಚುನಾವಣೆಗೆ ನಿಲ್ಲಲು ಅಡ್ಡಿ ಎಂದು ಮಗಳನ್ನೇ ಹತ್ಯೆಗೈದ ಪಾಪಿ ಅಪ್ಪ