ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ತಪ್ಪಿದ ಮತ್ತೊಂದು ದುರಂತ : ಲಡ್ಡು ಕೌಂಟರ್‌ನಲ್ಲಿ ಶಾರ್ಟ್‌ ಸರ್ಕೀಟ್‌

KannadaprabhaNewsNetwork |  
Published : Jan 14, 2025, 01:05 AM ISTUpdated : Jan 14, 2025, 04:16 AM IST
ತಿರುಪತಿ | Kannada Prabha

ಸಾರಾಂಶ

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 6 ಜನರು ಬಲಿಯಾದ ಬೆನ್ನಲ್ಲೇ ತಿರುಮಲದಲ್ಲಿ ಮತ್ತೊಂದು ಸಂಭವನೀಯ ದುರಂತ ತಪ್ಪಿದೆ.

ತಿರುಪತಿ: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 6 ಜನರು ಬಲಿಯಾದ ಬೆನ್ನಲ್ಲೇ ತಿರುಮಲದಲ್ಲಿ ಮತ್ತೊಂದು ಸಂಭವನೀಯ ದುರಂತ ತಪ್ಪಿದೆ. ತಿರುಮಲ ದೇಗುಲದ ಲಡ್ಡು ಕೌಂಟರ್‌ನಲ್ಲಿ  ಶಾರ್ಟ್‌ ಸರ್ಕೀಟ್‌ನಿಂದ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ.

ದೇವಸ್ಥಾನದ 47ನೇ ಲಡ್ಡು ಕೌಂಟರ್‌ನಲ್ಲಿ ವಿದ್ಯುತ್‌ ಸಮಸ್ಯೆಯಿಂದಾಗಿ ಶಾರ್ಟ್‌ಸರ್ಕೀಟ್‌ ಸಂಭವಿಸಿದೆ. ಈ ವೇಳೆ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್‌ ಬೆಂಕಿ ಕಾಣಿಸಿಕೊಂಡಿದ್ದನ್ನು ಸ್ಥಳದಲ್ಲೇ ಇದ್ದ ಸಿಬ್ಬಂದಿಯೊಬ್ಬರು ಗಮನಿಸಿ, ಅಗ್ನಿಶಾಮಕ ಉಪಕರಣ ಬಳಸಿ ನಂದಿಸಿದ್ದಾರೆ. ಈ ಮೂಲಕ ಬೆಂಕಿ ಇತರೆಡೆಗೆ ಹರಡದಂತೆ ತಡೆದಿದ್ದಾರೆ. ಹೀಗಾಗಿ ಅನಾಹುತ ತಪ್ಪಿದೆ.

ಕಳೆದ ವಾರ ತಿರುಪತಿಯಲ್ಲಿ ವೈಕುಂಠ ಏಕಾದಶಿ ಟಿಕೆಟ್ ಕೌಂಟರ್​ ಬಳಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿತ್ತು. ಈ ದುರಂತದಲ್ಲಿ 6 ಜನ ಮೃತಪಟ್ಟಿದ್ದರು ಹಾಗೂ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಾರತಕ್ಕೀಗ ಮೆಕ್ಸಿಕೋ ಶೇ.50 ತೆರಿಗೆ ಹೊಡೆತ
ಮೋದಿ-ಪುಟಿನ್‌ ಸೆಲ್ಫಿ ತೋರಿಸಿ ಟ್ರಂಪ್‌ ವಿರುದ್ಧ ಸಂಸದೆಯ ಕಿಡಿ