2026ರಲ್ಲಿ ಭಾರತದಲ್ಲಿ ಸೇನಾ ಸರಕು ಸಾಗಣೆಗೆ ನೆರವಾಗುವ ಸಿ-295 ವಿಮಾನ ಮೊದಲ ನಿರ್ಮಾಣ

KannadaprabhaNewsNetwork |  
Published : Oct 28, 2024, 12:55 AM ISTUpdated : Oct 28, 2024, 04:36 AM IST
ಸೇನಾ ವಿಮಾನ | Kannada Prabha

ಸಾರಾಂಶ

ಸೇನಾ ಸರಕು ಸಾಗಣೆಗೆ ನೆರವಾಗುವ ಸ್ಪೇನ್‌ನ ಸಿ-295 ಅತ್ಯಾಧುನಿಕ ವಿಮಾನಗಳು 2026ರಿಂದ ಭಾರತದಲ್ಲೇ ನಿರ್ಮಾಣ ಆಗಲಿವೆ. ಮೊದಲ ವಿಮಾನ 2026ರ ಸೆಪ್ಟೆಬರ್‌ನಲ್ಲಿ ನಿರ್ಮಾಣ ಆಗಿ ವಾಯುಪಡೆ ಸೇರಿಕೊಳ್ಳಲಿದ್ದು, ಉಳಿದ 39 ವಿಮಾನಗಳು 2031ರೊಳಗೆ ನಿರ್ಮಾಣ ಆಗಲಿವೆ.

 ನವದೆಹಲಿ : ಸೇನಾ ಸರಕು ಸಾಗಣೆಗೆ ನೆರವಾಗುವ ಸ್ಪೇನ್‌ನ ಸಿ-295 ಅತ್ಯಾಧುನಿಕ ವಿಮಾನಗಳು 2026ರಿಂದ ಭಾರತದಲ್ಲೇ ನಿರ್ಮಾಣ ಆಗಲಿವೆ. ಮೊದಲ ವಿಮಾನ 2026ರ ಸೆಪ್ಟೆಬರ್‌ನಲ್ಲಿ ನಿರ್ಮಾಣ ಆಗಿ ವಾಯುಪಡೆ ಸೇರಿಕೊಳ್ಳಲಿದ್ದು, ಉಳಿದ 39 ವಿಮಾನಗಳು 2031ರೊಳಗೆ ನಿರ್ಮಾಣ ಆಗಲಿವೆ.

ಸ್ಪೇನ್‌ನ ಸಿಎ ಕಂಪನಿ ಹಾಗೂ ಏರ್‌ಬಸ್‌ ಜತೆ ಭಾರತವು 2021ರಲ್ಲಿ 21,935 ಕೋಟಿ ರು. ಮೌಲ್ಯದಲ್ಲಿ 56 ಸಿ-295 ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ 16 ಸ್ಪೇನ್‌ನಿಂದ ಬರಲಿದ್ದು, ಉಳಿದವು ಭಾರತದಲ್ಲಿ ಉತ್ಪಾದನೆ ಏಗಬೇಕು ಎಂದು ಒಪ್ಪಂದವಾಗತ್ತು.

ಈ ಪ್ರಕಾರ ಟಾಟಾ ಸಹಯೋಗದಲ್ಲಿ ಗುಜರಾತ್‌ನ ವಡೋದರಾದಲ್ಲಿ ಸಿ-295 ವಿಮಾನಗಳ ನಿರ್ಮಾಣ ನಡೆಯಲಿದೆ. 2026ರ ಸೆಪ್ಟೆಂಬರ್‌ಗೆ ಮೊದಲ ವಿಮಾನ ಹೊರಬರಲಿದೆ.

ಈಗಾಗಲೇ ವಿದೇಶದಿಂದ ಬರಬೇಕಾದ 16 ವಿಮಾನಗಳ ಪೈಕಿ 6 ವಿಮಾನ ಸ್ಪೇನ್‌ನಿಂದ ಬಂದಿವೆ. 2025ರ ಆಗಸ್ಟ್‌ ಒಳಗೆ ಉಳಿದ 10 ವಿಮಾನ ಭಾರತಕ್ಕೆ ಬರಲಿವೆ.

6 ದಶಕದಿಂದ ಭಾರತದ ವಾಯುಪಡೆ ಆವ್ರೋ-748 ಸರಕು ವಿಮಾನ ಬಳಸುತ್ತಿತ್ತು. ಅದು ಹಳತಾದ ಕಾರಣ ಈ ಸಿ-295 ಮೊರೆ ಹೋಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ