ಮೊದಲ ಎಲೆಕ್ಟ್ರಿಕ್‌ ವಿಮಾನ ಯಶಸ್ವಿ! ಸದ್ದು, ಪರಿಸರ ಮಾಲಿನ್ಯ ಇಲ್ಲ

Published : Jun 24, 2025, 07:15 AM IST
Flight

ಸಾರಾಂಶ

ಅಗ್ಗದ ದರದಲ್ಲಿ ವಿಮಾನಯಾನ ಸೇವೆಯ ಕನಸು ನನಸಾಗುವ ಕ್ಷಣ ಸನ್ನಿಹಿತವಾಗಿದೆ. ವಿಶ್ವದ ಮೊದಲ ಎಲೆಕ್ಟ್ರಿಕ್‌ ವಿಮಾನದ ಸಂಚಾರ ಭಾನುವಾರ ಇಲ್ಲಿ ಯಶಸ್ವಿಯಾಗಿ ನಡೆದಿದೆ.

ನವದೆಹಲಿ: ಅಗ್ಗದ ದರದಲ್ಲಿ ವಿಮಾನಯಾನ ಸೇವೆಯ ಕನಸು ನನಸಾಗುವ ಕ್ಷಣ ಸನ್ನಿಹಿತವಾಗಿದೆ. ವಿಶ್ವದ ಮೊದಲ ಎಲೆಕ್ಟ್ರಿಕ್‌ ವಿಮಾನದ ಸಂಚಾರ ಭಾನುವಾರ ಇಲ್ಲಿ ಯಶಸ್ವಿಯಾಗಿ ನಡೆದಿದೆ. ಅಮೆರಿಕದ ಬೇಟಾ ಟೆಕ್ನಾಲಜೀಸ್‌ ಕಂಪನಿಯ ಅಲಿಯಾ ಸಿಎಕ್ಸ್-300 ವಿದ್ಯುತ್‌ ಚಾಲಿತ ಪ್ರಯಾಣಿಕರ ವಿಮಾನವು ತನ್ನ ಮೊದಲ ಪ್ರಯಾಣವನ್ನು ಯಶಸ್ವಿಯಾಗಿ ಪೂರೈಸಿದೆ. ಈ ವರ್ಷಾಂತ್ಯದಲ್ಲಿ ನಾಗರಿಕ ವಿಮಾನಯಾನ ಇಲಾಖೆಯಿಂದ ಈ ವಿಮಾನ ಹಾರಾಟಕ್ಕೆ ಅನುಮತಿ ಪಡೆಯುವ ನಿರೀಕ್ಷೆಯಲ್ಲಿ ಸಂಸ್ಥೆ ಇದೆ.

ಭಾರೀ ಅಗ್ಗದ ಸಂಚಾರ

ನಾಲ್ಕು ಪ್ರಯಾಣಿಕರ ಹೊತ್ತಿದ್ದ ಈ ಪರಿಸರ ಸ್ನೇಹಿ ಕಿರು ವಿಮಾನವು ಅಮೆರಿಕದ ಈಸ್ಟ್‌ ಹ್ಯಾಂಪ್ಟನ್‌ನಿಂದ ಜಾನ್‌ ಎಫ್‌.ಕೆನಡಿ ಏರ್ಪೋರ್ಟ್‌ ನಡುವಿನ 130 ಕಿ.ಮೀ.ಗಳ ಪ್ರಯಾಣವನ್ನು 35 ನಿಮಿಷಗಳಲ್ಲಿ ಕ್ರಮಿಸಿದೆ. ಸಾಮಾನ್ಯವಾಗಿ ನಾಲ್ವರನ್ನು ಹೊತ್ತೊಯ್ಯಬಲ್ಲ ಸಾಮಾನ್ಯ ವಿಮಾನಕ್ಕೆ ಇಷ್ಟು ದೂರ ಕ್ರಮಿಸಲು 13,885 ರು. ಇಂಧನ ವೆಚ್ಚ ತಗಲುತ್ತದೆ. ಆದರೆ ಈ ವಿದ್ಯುತ್‌ ಚಾಲಿತ ವಿಮಾನಕ್ಕೆ ತಗುಲಿದ ವೆಚ್ಚ ಕೇವಲ 700 ರು.!

ಸದ್ದೇ ಬರಲ್ಲ ಇದರದ್ದು

ಇದರ ಜತೆಗೆ ಕಡಿಮೆ ಸದ್ದು ಮಾಡುವ ಇಂಜಿನ್‌, ಪ್ರೊಪೆಲ್ಲರ್‌ಗಳಿಂದಾಗಿ ಪ್ರಯಾಣಿಕರು ಪರಸ್ಪರ ನಡೆಸುವ ಸಂಭಾಷಣೆಗಳು ಸ್ಪಷ್ಟವಾಗಿ ಕೇಳಿಸುವಷ್ಟು ಪ್ರಯಾಣ ಆಹ್ವಾದಕರವಾಗಿರುತ್ತದೆ ಎಂದು ಹೇಳಲಾಗಿದೆ. ಇದೊಂದು ಸಂಪೂರ್ಣ ವಿದ್ಯುತ್‌ ಚಾಲಿತ ವಿಮಾನವಾಗಿದೆ. ತೀರಾ ಕಡಿಮೆ ನಿರ್ವಹಣಾ ವೆಚ್ಚದ ಈ ವಿಮಾನವನ್ನು ಕಡಿಮೆ ದೂರದ ಪ್ರಯಾಣಗಳಿಗೆ ಬಳಸಬಹುದು ಎಂದು ಬೇಟಾ ಟೆಕ್ನಾಲಜೀಸ್‌ನ ಸಂಸ್ಥಾಪಕ ಕೈಲ್‌ ಕ್ಲಾರ್ಕ್‌ ಹೇಳಿಕೊಂಡಿದ್ದಾರೆ.

PREV
Read more Articles on

Recommended Stories

ದಿಲ್ಲಿ ಹುಮಾಯೂನ್‌ ಸಮಾಧಿ ಬಳಿ ಮಸೀದಿ ಕುಸಿತ: 5 ಸಾವು
ಟ್ರಂಪ್‌ಗೆ ಸಡ್ಡು: ರಷ್ಯಾದಿಂದ ಭಾರತಕ್ಕೆ ಹೆಚ್ಚು ತೈಲ