ಜನಸಂಖ್ಯೆ ಹೆಚ್ಚಿಸಲು ನಾಯ್ಡು ಬೆನ್ನಲ್ಲೇ ತಮಿಳ್ನಾಡು ಮುಖ್ಯಮಂತ್ರಿ ಸ್ಟಾಲಿನ್ ಕೂಡ ಕರೆ

Published : Oct 22, 2024, 07:44 AM ISTUpdated : Oct 22, 2024, 07:45 AM IST
MK Stalin

ಸಾರಾಂಶ

ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಇಳಿಕೆ ಆಗುತ್ತಿದೆ. ಹೀಗಾಗಿ ದಕ್ಷಿಣ ಭಾರತೀಯರು ಹೆಚ್ಚು ಮಕ್ಕಳ ಹೆರಬೇಕು' ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೀಡಿದ್ದ ಕರೆಯನ್ನು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ನೇತಾರ ಎಂ.ಕೆ. ಸ್ಟಾಲಿನ್ ಅನುಮೋದಿಸಿದ್ದಾರೆ.

ಚೆನ್ನೈ : 'ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಇಳಿಕೆ ಆಗುತ್ತಿದೆ. ಹೀಗಾಗಿ ದಕ್ಷಿಣ ಭಾರತೀಯರು ಹೆಚ್ಚು ಮಕ್ಕಳ ಹೆರಬೇಕು' ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೀಡಿದ್ದ ಕರೆಯನ್ನು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ನೇತಾರ ಎಂ.ಕೆ. ಸ್ಟಾಲಿನ್ ಅನುಮೋದಿಸಿದ್ದಾರೆ. ತಮಿಳರು 16 ಮಕ್ಕಳ ಹೆರಬೇಕು ಎಂಬ ನಾಣ್ಣುಡಿ ಪಾಲಿಸಬೇಕು' ಎಂದು ಅವರು ಕರೆ ನೀಡಿದ್ದಾರೆ.

ಸೋಮವಾರ ಸಮಾರಂಭ ವೊಂದರಲ್ಲಿ ಮಾತನಾಡಿದ ಸ್ಟಾಲಿನ್, 'ಕ್ಷೇತ್ರ ಮರುವಿಂಗಡಣೆಯಲ್ಲಿ ಜನಸಂಖ್ಯೆ ಆಧರಿಸಿ ಕ್ಷೇತ್ರಗಳು ವಿಂಗಡಣೆ ಆಗಲಿದೆ. ಈ ವೇಳೆ ಉತ್ತರ ಭಾರತದ ಲೋಕಸಭಾ ಸ್ಥಾನಗಳು ಹೆಚ್ಚಾಗಬಹುದು ಹಾಗೂ ಜನಸಂಖ್ಯೆ ನಿಯಂತ್ರಣ ನೀತಿ ಅನುಸರಿಸುವ ತಮಿಳುನಾಡಿನ ಸ್ನಾನಗಳು ಕಡಿಮೆ ಆಗಬಹುದು' ಎಂದು ಆತಂಕ ವ್ಯಕ್ತಪಡಿಸಿದರು. ತಮಿಳಿನ ಗಾದೆ ಮಾತಿನಂತೆ 16 ವಿವಿಧ ರೀತಿಯ ಸಂಪತ್ತು ಹೊಂದಿರಬೇಕು ಎಂಬುದು. ಹೀಗಾಗಿ ತಮಿಳರು ಸಂಪತ್ತಿಗೆ ಸಮಾನರಾದ 16 ಮಕ್ಕಳ ಹೆರಬೇಕು ಎಂದು ಕರೆ ನೀಡಿದರು.

ಕ್ಷೇತ್ರ ಮರುವಿಂಗಡಣೆಗೆ ಜನಸಂಖ್ಯೆ ಮಾನದಂಡ ಬೇಡ: ಕಾಂಗ್ರೆಸ್ ಪಟ್ಟು

ನವದೆಹಲಿ: ದಕ್ಷಿಣ ರಾಜ್ಯಗಳ ಯಶಸ್ವಿ ಜನಸಂಖ್ಯಾ ನಿಯಂತ್ರಣ ಕ್ರಮಗಳು ಆ ರಾಜ್ಯಗಳ ಲೋಕಸಭಾ ಸ್ಥಾನದ ಕುಸಿತಕ್ಕೆ ಕಾರಣ ಆಗಬಾರದು. ಹೀಗಾಗಿ ಜನಸಂಖ್ಯೆ ಆಧರಿಸಿ ಲೋಕಸಭೆ ಕ್ಷೇತ್ರ ನಿಗದಿಪಡಿಸುವ ಕ್ಷೇತ್ರ ಮರು ವಿಂಗಡಣೆಯ ಮಾನದಂಡವನ್ನು ಬದಲಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಚಂದ್ರಬಾಬು, ಸ್ಟಾಲಿನ್ ಹೇಳಿಕೆ ಬೆನ್ನಲ್ಲೇ ಈ ಕುರಿತು ಕಾಂಗ್ರೆಸ್ ಪ್ರಧಾನ ಕಾವ್ಯದರ್ಶಿ ಜೈರಾಂ ರಮೇಶ್ ಹೇಳಿಕೆ ನೀಡಿದ್ದಾರೆ.

2021 ರಲ್ಲಿ ನಡೆಯಬೇಕಿದ್ದ ಜನಗಣತಿ ಇನ್ನೂ ನಡೆದಿಲ್ಲ. ಹೀಗಾಗಿ ಮುಂದಿನ ವರ್ಷ ಜನಗಣತಿ ನಡೆಯುವ ನಿರೀಕ್ಷೆ ಇದೆ. ದಿನಾಂಕ ಇನ್ನೂ ನಿಗದಿ ಆಗಿಲ್ಲ, ಜನಗಣತಿ ಮುಗಿದ ನಂತರ ಬರುವ ಜನಸಂಖ್ಯೆಯ ಪ್ರಮಾಣ ಆಧರಿಸಿ ಕ್ಷೇತ್ರಗಳ ವಿಂಗಡಣೆ ನಡೆಯಲಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ಹೊಸ ಕ್ಷೇತ್ರ ಮರುವಿಂಗಡನೆ ಬಳಿಕ ಲೋಕಸಭೆ, ಹಾಲಿ ಹೊಂದಿರುವ 543 ಸ್ಥಾನಗಳ ಬದಲಾಗಿ 848 ಸ್ಥಾನ ಹೊಂದಲಿದೆ. ಈ ಹೆಚ್ಚುವರಿ ಸ್ಥಾನಗಳನ್ನು ರಾಜ್ಯಗಳು ಹೊಂದಿರುವ ಜನಸಂಖ್ಯೆ ಆಧಾರದಲ್ಲಿ ನಿಗದಿ ಮಾಡಲಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಿಚ್ಚನ ವೀರಾವೇಶ ದರ್ಶನ್ ವಿರುದ್ಧ ಅಲ್ಲ, ಪೈರಸಿ ಬಗ್ಗೆ!
ಜಿ ರಾಮ್‌ ಜಿಗೆ ರಾಜ್ಯ ಶೇ.40ರಷ್ಟು ಪಾಲು ನೀಡಲಾಗದು : ಡಿಕೆಶಿ