ನಿವೃತ್ತ ಸಿಜೆಐ ಚಂದ್ರಚೂಡ್ ದಿಲ್ಲಿ ಕಾನೂನು ವಿವಿ ಗೌರವ ಪ್ರಾಧ್ಯಾಪಕರಾಗಿ ನೇಮಕ

KannadaprabhaNewsNetwork |  
Published : May 17, 2025, 01:27 AM ISTUpdated : May 17, 2025, 06:40 AM IST
cji chandrachud

ಸಾರಾಂಶ

ದೆಹಲಿಯ ರಾಷ್ಟ್ರೀಯ ಕಾನೂನು ವಿವಿಯು (ಎನ್‌ಎಲ್‌ಯು) ಮಾಜಿ ಸಿಜೆಐ ಡಿ.ವೈ. ಚಂದ್ರಚೂಡ್ ಅವರನ್ನು ತನ್ನ ಗೌರವ ಪ್ರಾಧ್ಯಾಪಕರನ್ನಾಗಿ ನೇಮಿಸಿಕೊಂಡಿದೆ.

ನವದೆಹಲಿ: ದೆಹಲಿಯ ರಾಷ್ಟ್ರೀಯ ಕಾನೂನು ವಿವಿಯು (ಎನ್‌ಎಲ್‌ಯು) ಮಾಜಿ ಸಿಜೆಐ ಡಿ.ವೈ. ಚಂದ್ರಚೂಡ್ ಅವರನ್ನು ತನ್ನ ಗೌರವ ಪ್ರಾಧ್ಯಾಪಕರನ್ನಾಗಿ ನೇಮಿಸಿಕೊಂಡಿದೆ.

ಭಾರತದ ಕಾನೂನು ಶಿಕ್ಷಣದಲ್ಲಿ ಇದು ಮಹತ್ವದ ಹೆಜ್ಜೆ ಎಂದು ಬಣ್ಣಿಸಿದೆ.‘ಭಾರತದ ಮಾಜಿ ಮುಖ್ಯ ನ್ಯಾಯಾಧೀಶರಾದ ಡಾ. ಡಿ.ವೈ. ಚಂದ್ರಚೂಡ್ ಅವರನ್ನು ನಮ್ಮ ವಿವಿಯ ಗೌರವ ಪ್ರಾಧ್ಯಾಪಕರನ್ನಾಗಿ ನೇಮಿಸಿಕೊಳ್ಳುತ್ತಿರುವುದು ಬಹಳ ಹೆಮ್ಮೆ ತಂದಿದೆ. ಪ್ರಗತಿಶೀಲ ನ್ಯಾಯಶಾಸ್ತ್ರಜ್ಞರೊಬ್ಬರನ್ನು ಮುಂದಿನ ಪೀಳಿಗೆಗೆ ಮಾರ್ಗದರ್ಶಕರನ್ನಾಗಿ ನೇಮಿಸಿಕೊಳ್ಳುತ್ತಿರುವುದು ಭಾರತದ ಕಾನೂನು ಶಿಕ್ಷಣದಲ್ಲಿ ಪರಿವರ್ತನೆ ತರಬಲ್ಲ ಅಧ್ಯಾಯವಾಗಿದೆ. 

ನ್ಯಾ. ಚಂದ್ರಚೂಡ್ ಅವರ ಉಪಸ್ಥಿತಿಯು ನಮ್ಮ ಶೈಕ್ಷಣಿಕ ಪರಿಸರವನ್ನು ಶ್ರೀಮಂತಗೊಳಿಸಲಿದೆ’ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ. ವಿವಿಯು ಸಾಂವಿಧಾನಿಕ ಅಧ್ಯಯನ ಕೇಂದ್ರವೊಂದನ್ನು ಆರಂಭಿಸಲಿದ್ದು, ಅದರಲ್ಲಿ ನ್ಯಾ.ಚಂದ್ರಚೂಡ್‌ ಸಂಶೋಧನಾ ಕೆಲಸ ಮಾಡಲಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

10 ಮಿನಿಟ್ಸ್‌ ಡೆಲಿವರಿ ಇನ್ನು ನಿಮಗೆ ಸಿಗಲ್ಲ!
ಬೀದಿನಾಯಿ ಇಷ್ಟ ಆದ್ರೆ ಮನೇಲಿ ಸಾಕಿ : ಸುಪ್ರೀಂ