ಚಂಡೀಗಢ : ಪಂಜಾಬ್‌ನ ರಾಜಕೀಯ ಮತ್ತು ಪೊಲೀಸ್ ವಲಯವನ್ನು ದಿಗ್ಭ್ರಮೆಗೊಳಿಸಿರುವ ಪ್ರಕರಣವೊಂದರಲ್ಲಿ, ರಾಜ್ಯದ ಮಾಜಿ ಸಚಿವೆ ರಜಿಯಾ ಸುಲ್ತಾನಾ ಮತ್ತು ಅವರ ಪತಿ, ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮೊಹಮ್ಮದ್ ಮುಸ್ತಫಾ ಅವರ ಮೇಲೆ ಮಗನನ್ನೇ ಹತ್ಯೆ ಮಾಡಿದ ಆರೋಪ ಕೇಳಿಬಂದಿದೆ.
ಇವರಿಬ್ಬರ ವಿರುದ್ಧ, ಕೊಲೆ ಪ್ರಕರಣ ದಾಖಲಾಗಿದೆ. ಪಂಚಕುಲದ ತಮ್ಮ ನಿವಾಸದಲ್ಲಿ ಇವರ 33 ವರ್ಷದ ಮಗ ಅಕಿಲ್ ಅಖ್ತರ್ ಕಳೆದ ಗುರುವಾರ ನಿಗೂಢವಾಗಿ ಸಾವನ್ನಪ್ಪಿದ್ದ. ಈಗ ವಿಡಿಯೋವೊಂದು ಹೊರಬಂದಿದ್ದು, ಆ ವಿಡಿಯೋದಲ್ಲಿ ಅಕಿಲ್, ‘ನನ್ನ ತಂದೆ ಮತ್ತು ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಾರೆ’ ಎಂದು ಆರೋಪಿಸಿದ್ದಾನೆ.
ಅಲ್ಲದೆ, ‘ನನ್ನ ತಾಯಿ ಮತ್ತು ಸಹೋದರಿ ನನ್ನನ್ನು ಕೊಲ್ಲಲು ಅಥವಾ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸುತ್ತಿದ್ದಾರೆ. ನನಗೆ ಜೀವಭಯವಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾನೆ. ಹೀಗಾಗಿ ಅಕಿಲ್ ತಂದೆ ಮುಸ್ತಫಾ ಹಾಗೂ ತಾಯಿ ರಜಿಯಾ ಮೇಲೆ ಕೊಲೆ ಕೇಸು ದಾಖಲಾಗಿದೆ.