ಜ.1ರಿಂದ ವಾಟ್ಸಾಪ್‌, ಟೆಲಿಗ್ರಾಂಗೆ ಆ್ಯಕ್ಟಿವ್‌ ಸಿಮ್‌ ಕಡ್ಡಾಯ

KannadaprabhaNewsNetwork |  
Published : Oct 24, 2026, 03:15 AM IST
ವಾಟ್ಸಾಪ್‌  | Kannada Prabha

ಸಾರಾಂಶ

ನಿಮ್ಮ ಮೊಬೈಲ್‌ನಲ್ಲಿ ಆ್ಯಕ್ಟಿವ್‌ ಆಗಿರುವ ಸಿಮ್‌ ಇಲ್ಲದಿದ್ದರೆ ಮುಂದಿನ ವರ್ಷ ಜ.1ರಿಂದ ವಾಟ್ಸಪ್‌, ಟೆಲಿಗ್ರಾಂ, ಸಿಗ್ನಲ್‌ನಂಥ ಜನಪ್ರಿಯ ಆ್ಯಪ್‌ ಆಧಾರಿತ ಮೆಸೇಜಿಂಗ್‌ ಆ್ಯಪ್‌ಗಳು ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿವೆ.

- ನಿಮ್ಮ ಮೊಬೈಲ್‌ನಲ್ಲಿ ಸಿಮ್‌ ಇಲ್ಲದೆ ಹೋದ್ರೆ ಜ.1ರಿಂದ ವಾಟ್ಸಪ್‌, ಟೆಲಿಗ್ರಾಂ ಕೆಲ್ಸ ಮಾಡಲ್ಲ

- ಸೈಬರ್ ವಂಚನೆಗಳನ್ನು ತಡೆಯಲು ಈ ನಿರ್ಧಾರ ನವದೆಹಲಿ: ನಿಮ್ಮ ಮೊಬೈಲ್‌ನಲ್ಲಿ ಆ್ಯಕ್ಟಿವ್‌ ಆಗಿರುವ ಸಿಮ್‌ ಇಲ್ಲದಿದ್ದರೆ ಮುಂದಿನ ವರ್ಷ ಜ.1ರಿಂದ ವಾಟ್ಸಪ್‌, ಟೆಲಿಗ್ರಾಂ, ಸಿಗ್ನಲ್‌ನಂಥ ಜನಪ್ರಿಯ ಆ್ಯಪ್‌ ಆಧಾರಿತ ಮೆಸೇಜಿಂಗ್‌ ಆ್ಯಪ್‌ಗಳು ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿವೆ.

ಹೌದು.. ಹೆಚ್ಚುತ್ತಿರುವ ಡಿಜಿಟಲ್‌ ಅರೆಸ್ಟ್‌ನಂಥ ಸೈಬರ್ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಆ್ಯಪ್‌ ಆಧಾರಿತ ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ದೂರಸಂಪರ್ಕ ಇಲಾಖೆಯು ಸಿಮ್‌ ಬೈಂಡಿಂಗ್‌ ನಿಯಮವನ್ನು ಕಡ್ಡಾಯ ಮಾಡಿದೆ. ಇದು ಹೊಸ ವರ್ಷದಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.

ಭಾರತೀಯ ಮೊಬೈಲ್‌ ನಂಬರ್‌ಗಳನ್ನು ಬಳಸಿಕೊಂಡು ಗಡಿಯಾಚೆ ಕೂತು ನಡೆಸುತ್ತಿರುವ ಸೈಬರ್‌ ವಂಚನೆಗಳು, ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳಿಗೆ ಕಡಿವಾಣ ಹಾಕಲು ಹಾಗೂ ಸೈಬರ್‌ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ದೂರ ಸಂಪರ್ಕ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಹಾಲಿ ನಿಯಮ ಏನು? ಹೊಸ ನಿಯಮ ಏನು?:

ಸರಳವಾಗಿ ಹೇಳಬೇಕೆಂದರೆ ಇದೀಗ ವಾಟ್ಸಪ್‌, ಟೆಲಿಗ್ರಾಂನಂಥ ಮೆಸೇಜಿಂಗ್‌ ಆ್ಯಪ್‌ಗಳಿಗೆ ನೀವು ನಿಮ್ಮ ಮೊಬೈಲ್‌ ನಂಬರ್‌ (ಒಟಿಪಿ ಮೂಲಕ) ಬಳಸಿಕೊಂಡು ಒಂದು ಬಾರಿ ರಿಜಿಸ್ಟರ್‌ ಮಾಡಿಕೊಂಡರೆ ಸಾಕು. ಆ ಬಳಿಕ ಆ ಸಿಮ್‌ ತೆಗೆದು ವೈಫೈ ಅಥವಾ ಇನ್ನಿತರ ಮಾರ್ಗದಲ್ಲಿ ಇಂಟರ್ನೆಟ್‌ ಬಳಸಿಕೊಂಡು ವಾಟ್ಸಪ್‌ ಅಥವಾ ಟೆಲಿಗ್ರಾಂ ಆ್ಯಪ್‌ ಬಳಕೆ ಮುಂದುವರಿಸಬಹುದಾಗಿದೆ.

ಆದರೆ ಜ.1ರಿಂದ ನಿಮ್ಮ ಮೊಬೈಲ್‌ನಲ್ಲಿ ನೋಂದಾಯಿತ ಸಿಮ್‌ ಇದ್ದರಷ್ಟೇ ವಾಟ್ಸಪ್‌, ಟೆಲಿಗ್ರಾಂನಂಥ ಆ್ಯಪ್‌ ಬಳ‍ಕೆಗೆ ಅವಕಾಶ ಇರಲಿದೆ. ಒಂದು ವೇಳೆ ನೀವು ಸಿಮ್‌ ತೆಗೆದರೆ ಅಥವಾ ಡೀಆ್ಯಕ್ಟಿವೇಟ್‌ ಆದರೆ ಆ ಆ್ಯಪ್‌ಗಳ ಬಳಕೆ ಅಸಾಧ್ಯವಾಗಲಿದೆ.

ಈ ನಿಯಮಾವಳಿ ಪಾಲಿಸುವ ಉದ್ದೇಶದಿಂದ ಆ್ಯಪಲ್‌ ಕಂಪನಿಯು ತನ್ನ ಐಒಎಸ್‌ನಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದೆ. ಈ ಮೂಲಕ ಸಿಮ್‌ ಇಲ್ಲದೆ ವಾಟ್ಸಪ್‌ ಬಳಸಿದರೆ ತಕ್ಷಣ ಪತ್ತೆಯಾಗಲಿದೆ. ಸಿಗ್ನಲ್‌ ಆ್ಯಪ್ ಮಾತ್ರ ಈಗವರೆಗೆ ಸರ್ಕಾರದ ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಪ್ರಿಯಾಂಕಾ ಪುತ್ರನ ಚಿತ್ರಪ್ರದರ್ಶನಕ್ಕೆ ಕೇರಳಂಗೆಆಹ್ವಾನ: ಬಿಜೆಪಿ ಆಕ್ರೋಶ
ದೇಶದಲ್ಲಿ ಸಾಮಾಜಿಕ ಅನಿಷ್ಟದಂಥಹೊಸ ಸವಾಲುಗಳು ಸೃಷ್ಟಿ: ಮೋದಿ- ಜಿರಳೆ ಪಾರ್ಟಿ ಹೋರಾಟದ ಬೆನ್ನಲ್ಲೇ ಪ್ರಧಾನಿ ಹೇಳಿಕೆ