ಮಂಗ್ಳೂರಿನ ಗ್ಯಾಂಗ್‌ಸ್ಟರ್‌ ಪ್ರಸಾದ್‌ ಚೀನಾದಿಂದ ಭಾರತಕ್ಕೆ ಗಡಿಪಾರು

KannadaprabhaNewsNetwork |  
Published : Mar 24, 2024, 01:30 AM IST
ಪ್ರಸಾದ್‌ ಪೂಜಾರಿ | Kannada Prabha

ಸಾರಾಂಶ

ಶಿವಸೇನಾ ಕಾರ್ಯಕರ್ತ ಚಂದ್ರಕಾಂತ ಜಾಧವ್‌ ಹತ್ಯೆ ಮತ್ತು ಹಲವು ಸುಲಿಗೆ ಪ್ರಕರಣಗಳಲ್ಲಿ ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್‌, ಮಂಗಳೂರು ಮೂಲದ ಪ್ರಸಾದ್‌ ಪೂಜಾರಿಯನ್ನು ಚೀನಾ ಸರ್ಕಾರ ಭಾರತಕ್ಕೆ ಗಡಿಪಾರು ಮಾಡಿದೆ.

ಮುಂಬೈ: ಶಿವಸೇನಾ ಕಾರ್ಯಕರ್ತ ಚಂದ್ರಕಾಂತ ಜಾಧವ್‌ ಹತ್ಯೆ ಮತ್ತು ಹಲವು ಸುಲಿಗೆ ಪ್ರಕರಣಗಳಲ್ಲಿ ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್‌, ಮಂಗಳೂರು ಮೂಲದ ಪ್ರಸಾದ್‌ ಪೂಜಾರಿಯನ್ನು ಚೀನಾ ಸರ್ಕಾರ ಭಾರತಕ್ಕೆ ಗಡಿಪಾರು ಮಾಡಿದೆ. ಪ್ರಸಾದ್‌ ಶನಿವಾರ ಮುಂಬೈಗೆ ಬಂದಿಳಿಯುತ್ತಲೇ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಉಗ್ರರು ಮತ್ತು ಗ್ಯಾಂಗ್‌ಸ್ಟರ್‌ಗಳ ವಿಷಯದಲ್ಲಿ ಸದಾ ಭಾರತ ವಿರೋಧಿ ನಿಲುವು ಹೊಂದಿರುವ ಚೀನಾ ಸರ್ಕಾರ, ಭಾರತದ ಕೋರಿಕೆ ಮನ್ನಿಸಿ ಪ್ರಸಾದ್‌ನನ್ನು ಗಡಿಪಾರು ಮಾಡಿದ್ದು ಅಪರೂಪದ ಬೆಳವಣಿಗೆ ಎನ್ನಲಾಗಿದೆ.ಯಾರು ಗಣೇಶ್‌ ಪೂಜಾರಿ?

ಛೋಟಾ ರಾಜನ್‌ ಗ್ಯಾಂಗ್‌ನ ಸದಸ್ಯನಾಗಿದ್ದ ಪ್ರಸಾದ್‌ ಪೂಜಾರಿ ಗಣೇಶ್‌ ಪೂಜಾರಿ ಮುಂಬೈನಲ್ಲಿ ಭೂಗತ ಪಾತಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ ಹಿನ್ನೆಲೆಯಲ್ಲಿ ದಶಕಗಳ ಹಿಂದೆಯೇ ಚೀನಾಕ್ಕೆ ತೆರಳಿ ಅಲ್ಲಿ ಮಹಿಳೆಯನ್ನು ಮದುವೆಯಾಗಿ ಅಲ್ಲಿಯೇ ನೆಲೆಸಿದ್ದ. ಜೊತೆಗೆ ಅಲ್ಲಿಂದಲೇ ಮುಂಬೈನಲ್ಲಿ ಸುಲಿಗೆ, ಹತ್ಯೆ ಮೊದಲಾದ ಕೃತ್ಯ ನಡೆಸುತ್ತಿದ್ದ. ಇಂತ ಪ್ರಕರಣಗಳ ಕುರಿತು ಖಚಿತ ಸಾಕ್ಷ್ಯ ಸಂಗ್ರಹಿಸಿದ್ದ ಭಾರತ ಸರ್ಕಾರ ಈತನ ಗಡಿಪಾರಿಗೆ ಚೀನಾಗೆ ಮನವಿ ಮಾಡಿತ್ತು. 2023ರ ಮಾರ್ಚ್‌ನಲ್ಲಿ ನಕಲಿ ಪಾಸ್‌ಪೋರ್ಟ್‌ ಹೊಂದಿದ ಆರೋಪದಲ್ಲಿ ಬಂಧಿಸಿದ್ದರು. ಸುಲಿಗೆ ಪ್ರಕರಣದಲ್ಲಿ ಪ್ರಸಾದ್‌ನ ತಾಯಿ ಇಂದಿರಾ ವಿಠಲ್‌ ಪೂಜಾರಿಯನ್ನೂ ಬಂಧಿಸಲಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ