ದೇಶದೊಳಗೆ ನುಗ್ಗಿ ಹೊಡಿತೀವಿ: ಸಚಿವ ರಾಜ್‌ನಾಥ್‌

KannadaprabhaNewsNetwork |  
Published : Apr 06, 2024, 12:54 AM ISTUpdated : Apr 06, 2024, 05:17 AM IST
ರಾಜನಾಥ್‌ ಸಿಂಗ್‌ | Kannada Prabha

ಸಾರಾಂಶ

ದೇಶದ ಶಾಂತಿಯನ್ನು ಹಾಳುಗೆಡವಲು ಯತ್ನಿಸುವ ಉಗ್ರರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿರುವ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌, ಒಂದು ವೇಳೆ ಉಗ್ರರು ಅವರು ಪಾಕಿಸ್ತಾನದೊಳಗೆ ನುಗ್ಗಿದರೆ, ಅವರನ್ನು ಆ ದೇಶದೊಳಗೆ ನುಗ್ಗಿ ಅಲ್ಲಿಯೇ ಮುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ: ದೇಶದ ಶಾಂತಿಯನ್ನು ಹಾಳುಗೆಡವಲು ಯತ್ನಿಸುವ ಉಗ್ರರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿರುವ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌, ಒಂದು ವೇಳೆ ಉಗ್ರರು ಅವರು ಪಾಕಿಸ್ತಾನದೊಳಗೆ ನುಗ್ಗಿದರೆ, ಅವರನ್ನು ಆ ದೇಶದೊಳಗೆ ನುಗ್ಗಿ ಅಲ್ಲಿಯೇ ಮುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪಾಕ್‌ನಲ್ಲಿ ಕಳೆದ 2 ವರ್ಷದಲ್ಲಿ ನಡೆದ 20 ಉಗ್ರರ ನಿಗೂಢ ಹತ್ಯೆಯಲ್ಲಿ ಭಾರತದ ಕೈವಾಡದ ಕುರಿತು ಬ್ರಿಟನ್‌ ಪತ್ರಿಕೆ ವರದಿ ಬೆನ್ನಲ್ಲೇ, ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಸಚಿವ ಸಿಂಗ್‌ ಈ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ಮೋದಿ ಈಗಾಗಲೇ ಸತ್ಯವನ್ನು ಸ್ಪಷ್ಟಪಡಿಸಿದ್ದಾರೆ. ಭಾರತಕ್ಕೆ ಈ ಸಾಮರ್ಥ್ಯ ಇದೆ ಮತ್ತು ಇದೀಗ ಪಾಕಿಸ್ತಾನ ಕೂಡಾ ಅದನ್ನು ಅರ್ಥಮಾಡಿಕೊಳ್ಳುತ್ತಿದೆ ಎಂದು ಸಿಂಗ್‌ ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೆಡಿ ಚಿತ್ರದ ‘ಸೆರಗು ಸರ್‌ಸೇ’ ಹಾಡು ಬಗ್ಗೆ ಸಂಸತ್‌ನಲ್ಲೂ ಕಿಡಿ
ರಾಜಕಾರಣಕ್ಕೆ ಪೂರ್ಣ ವಿರಾಮ ಇಲ್ಲ : ಪ್ರಧಾನಿ ನರೇಂದ್ರ ಮೋದಿ