ಗೋವಾದ ಮಾಪುಸಾದಲ್ಲಿ ಗೋಬಿ ಮಂಚೂರಿ ನಿಷೇಧ!

KannadaprabhaNewsNetwork | Updated : Feb 06 2024, 11:45 AM IST

ಸಾರಾಂಶ

ಭಾರತೀಯರ ನೆಚ್ಚಿನ ತಿಂಡಿಗಳಲ್ಲೊಂದಾಗ ಚೀನಾ ಮೂಲದ ಗೋಬಿ ಮಂಚೂರಿಯನ್‌ ತಯಾರಿಕೆ ಮತ್ತು ಮಾರಾಟಕ್ಕೆ ಗೋವಾದ ಮಾಪುಸಾ ಮುನ್ಸಿಪಲ್‌ ನಿಷೇಧ ಹೇರಿದೆ.

ಪಣಜಿ: ಭಾರತೀಯರ ನೆಚ್ಚಿನ ತಿಂಡಿಗಳಲ್ಲೊಂದಾಗ ಚೀನಾ ಮೂಲದ ಗೋಬಿ ಮಂಚೂರಿಯನ್‌ ತಯಾರಿಕೆ ಮತ್ತು ಮಾರಾಟಕ್ಕೆ ಗೋವಾದ ಮಾಪುಸಾ ಮುನ್ಸಿಪಲ್‌ ನಿಷೇಧ ಹೇರಿದೆ. 

ನಗರದ ಯಾವುದೇ ಅಂಗಡಿಗಳಲ್ಲಿ ಹಾಗೂ ಜಾತ್ರೆಗಳಲ್ಲಿ ಈ ತಿನಿಸು ಮಾರಾಟ ಮಾಡುವಂತಿಲ್ಲ ಎಂದು ಸೂಚಿಸಿದೆ.

ಶುಚಿತ್ವವಿಲ್ಲದ ಸ್ಥಳಗಳಲ್ಲಿ ಆಹಾರ ತಯಾರಿಕೆ, ಸಿಂಥೆಟಿಕ್‌ ಬಣ್ಣಗಳ ಬಳಕೆ, ಬಟ್ಟೆ ತೊಳೆಯುವ ಪೌಡರ್‌ ಬಳಸಿ ತಯಾರಿಸಲಾದ ಸಾಸ್‌ಗಳ ಬಳಕೆ ಗೋಬಿ ಮಂಚೂರಿಯನ್‌ ತಯಾರಿಕೆ ಮತ್ತು ಮಾರಾಟಕ್ಕೆ ನಿಷೇಧ ಹೇರಲು ಪ್ರಮುಖ ಕಾರಣ ಎಂದು ಹೇಳಲಾಗಿದೆ. 

ಬೋಗ್ಡೇಶ್ವರ್ ಜಾತ್ರೆಗೂ ಮುನ್ನ ಮಾಪುಸಾ ನಗರ ಪಾಲಿಕೆ ಗೋಬಿ ನಿಷೇಧ ಮಾಡುವ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ತಕ್ಷಣವೇ ಒಪ್ಪಿಗೆ ದೊರೆತಿದೆ.

2022ರಲ್ಲೂ ಸಹ ಶ್ರೀ ದಾಮೋದರ ದೇವಸ್ಥಾನದ ವಾಸ್ಕೋ ಸಪ್ತಾಹ ಜಾತ್ರೆಯಲ್ಲಿ ಗೋಬಿ ಮಂಚೂರಿಯನ್‌ ತಯಾರಿಕೆಗೆ ನಿಷೇಧ ವಿಧಿಸಲಾಗಿತ್ತು.

Share this article