ಕಾಶಿ, ಮಥುರಾ ಸಿಕ್ಕರೆ ಬೇರೆ ಮಂದಿರ ಕೇಳಲ್ಲ: ಮಂದಿರ ಟ್ರಸ್ಟ್‌ ಖಜಾಂಚಿ

KannadaprabhaNewsNetwork | Updated : Feb 06 2024, 08:44 AM IST

ಸಾರಾಂಶ

ಅಯೋಧ್ಯೆ ಆಯ್ತು, ಶಾಂತಿಯುತವಾಗಿ ಕಾಶಿ, ಮಥುರಾ ಸಿಗಲಿ ಎಂದು ರಾಮಮಂದಿರ ಟ್ರಸ್ಟ್‌ ಖಜಾಂಚಿ ಗೋವಿಂದ್‌ ದೇವ್‌ ಗಿರಿ ತಿಳಿಸಿದ್ದಾರೆ.

ಪುಣೆ: ಅಯೋಧ್ಯೆ ಬಳಿಕ, ಹಿಂದೂಗಳ ಪ್ರಮುಖ ಶ್ರದ್ಧಾ ಕೇಂದ್ರಗಳಾಗಿರುವ ಕಾಶಿ ಮತ್ತು ಮಥುರಾವನ್ನು ಶಾಂತಿಯುತವಾಗಿ ಪಡೆದುಕೊಂಡರೆ ಇತರ ಮಂದಿರ- ಮಸೀದಿಗಳ ಸಮಸ್ಯೆಯನ್ನು ಹಿಂದೂ ಸಮುದಾಯ ಮರೆತುಬಿಡುತ್ತದೆ ಎಂದು ಶ್ರೀರಾಮ ಮಂದಿರ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಖಜಾಂಚಿ ಗೋವಿಂದ್ ದೇವ್ ಗಿರಿ ಮಹಾರಾಜ್ ಹೇಳಿದ್ದಾರೆ.

ಭಾನುವಾರ ಪುಣೆ ಬಳಿಯ ಅಳಂಡಿಯಲ್ಲಿ ಮಾತನಾಡಿದ ಅವರು ‘ಭಾರತದ ಮೇಲೆ ದಂಡೆತ್ತಿ ಬಂದ ವಿದೇಶಿ ಆಕ್ರಮಣಕಾರರ ದಾಳಿಯಲ್ಲಿ ಸುಮಾರು 3,500ಕ್ಕೂ ಹೆಚ್ಚು ದೇವಸ್ಥಾನಗಳು ನೆಲಸಮಗೊಂಡಿವೆ. 

ದೇವಸ್ಥಾನಗಳನ್ನು ಕೆಡವಿ ಮಸೀದಿ ಕಟ್ಟಲಾದ ಎಲ್ಲ ಮಂದಿರಗಳನ್ನೂ ನಾವು ಕೇಳುವುದಿಲ್ಲ. ಈಗ ಅಯೋಧ್ಯೆ ಸಿಕ್ಕಿದೆ. 

ಹೀಗೆ ಕಾಶಿ ಮತ್ತು ಮಥುರಾ ಶಾಂತಿಯುತವಾಗಿ ದೊರೆತರೆ ಉಳಿದ ಸಮಸ್ಯೆಯನ್ನು ನಾವು ಮರೆಯುತ್ತೇವೆ’ ಎಂದಿದ್ದಾರೆ.

Share this article