ನವದೆಹಲಿ: ಆರೋಗ್ಯ ಮತ್ತು ಜೀವ ವಿಮೆ ಪ್ರೀಮಿಯಂಗೆ ಪ್ರಸ್ತುತ ಇರುವ ಶೇ.18ರಷ್ಟು ಜಿಎಸ್ಟಿಯನ್ನು ಶೂನ್ಯಕ್ಕೆ ಇಳಿಸುವ ಕುರಿತು ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿದೆ. ಬುಧವಾರ ಇಲ್ಲಿ ನಡೆದ ವಿಮೆ ಕುರಿತ ರಾಜ್ಯಗಳ ಸಚಿವರ ಮಟ್ಟದ ಸಭೆಯಲ್ಲಿ, ಸಭೆಯ ಸಮನ್ವಯಕಾರ ಸಾಮ್ರಾಟ್ ಚೌಧರಿ ಈ ವಿಷಯದ ತಿಳಿಸಿದ್ದಾರೆ.
ಈ ನಡುವೆ ಜಿಎಸ್ಟಿ ತೆರಿಗೆ ಇಳಿಕೆಯ ಲಾಭ ಕಂಪನಿಗಳ ಬದಲಾಗಿ ಗ್ರಾಹಕರಿಗೆ ತಲುಪುವುದನ್ನು ಖಚಿತಪಡಿಸಲು ಸೂಕ್ತ ವ್ಯವಸ್ಥೆ ಜಾರಿಯ ಬಗ್ಗೆ ಸಭೆಯಲ್ಲಿ ಭಾಗಿಯಾಗಿದ್ದ ರಾಜ್ಯಗಳು ಸಲಹೆ ನೀಡಿವೆ.
ಇದಕ್ಕೂ ಮುನ್ನ ಜಿಎಸ್ಟಿ ಮಂಡಳಿ ಸಭೆ ಉದ್ದೇಶಿಸಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರದ ಹೊಸ ಜಿಎಸ್ಟಿ ನೀತಿ ಜಾರಿಯ ಅಗತ್ಯ, ಅದರ ಲಾಭ, ನಷ್ಟದ, ವಿಮೆಗೆ ಜಿಎಸ್ಟಿ ವಿನಾಯ್ತಿ ಕುರಿತು ಮಾಹಿತಿ ಹಂಚಿಕೊಂಡರು. ಗುಂಪಿನ ಹೆಚ್ಚಿನ ಸದಸ್ಯರು ಈ ಪ್ರಸ್ತಾಪವನ್ನು ಬೆಂಬಲಿಸಿದರೂ, ಕೆಲವು ರಾಜ್ಯಗಳು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿವೆ